Wednesday, Dec 1 2021 | Time 20:12 Hrs(IST)
Karnataka Share

ಕಾನೂನು ತಜ್ಞರ ಸಲಹೆ ಪಡೆಯಿತ್ತಿರುವ ಸರ್ಕಾರ

ಕಾನೂನು ತಜ್ಞರ ಸಲಹೆ ಪಡೆಯಿತ್ತಿರುವ ಸರ್ಕಾರ
CM Bommayi

ಬೆಂಗಳೂರು,ಅ.20(ಯುಎನ್‌ಐ)ವಾಲ್ಮೀಕಿ ಸಮುದಾಯದ ಮೀಸಲಾತಿಯನ್ನು ಶೇ.7.5ರಷ್ಟನ್ನು ಹೆಚ್ಚಿಸುವ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆಯುತ್ತಿರುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ವಾಲ್ಮೀಕಿ ಸಮುದಯದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಬೊಮ್ಮಾಯಿ,ಮೀಸಲಾತಿ ಪುನರ್ ತೀರ್ಮಾನ ಕೇಂದ್ರಮಟ್ಟದಲ್ಲಿ ಆಗಬೇಕಿದ್ದು,ಕಾನೂನು ಚೌಕಟ್ಟಿನಲ್ಲಿಯೇ ಮೀಸಲಾತಿ ಬಗೆಹರಿಸಬೇಕಿದೆ.ಹೀಗಾಗಿ ಕಾನೂನು ತಜ್ಞರ ಸಲಹೆ ಪಡೆಯುತ್ತಿದ್ದೇವೆ.ಎಲ್ಲರಿಗೆ ನ್ಯಾಯ ಒದಗಿಸುವ ಪ್ರಯತ್ನ ಮಾಡುತ್ತೇನೆ.ಇದು‌

ಅಷ್ಟು ಸುಲಭವೂ ಅಲ್ಲಆದರೂ ನಾನು ಪೂರಕ ಪ್ರಯತ್ನ ನಡೆಸಿದ್ದೇನೆ.ಇದಕ್ಕೆ ಎಲ್ಲರ ಸಹಕಾರ ಹಾಗೂ ವಾಲ್ಮೀಕಿ ಸಮುದಾಯದ ಶ್ರೀಗಳ ಆಶೀರ್ವಾದ ಮುಖ್ಯ ಎಂದರು.

ನಾನು ಸಿಎಂ ಆಗುತ್ತಿದ್ದಂತೆ ವಾಲ್ಮೀಕಿ ಸಮುದಾಯಕ್ಕೆ ಪ್ರತ್ಯೇಕ ಇಲಾಖೆ ತೆಗೆದೆ.7600 ಕೋಟಿ ರೂ.ಅನುದಾನ ಈ ಇಲಾಖೆಗೆ ನೀಡಿದ್ದು,ಸಮುದಾಯದ ಅಭಿವೃದ್ಧಿಗೆ ಇದು ಸಹಾಯಕವಾಗಲಿದೆ.ಎಸ್ಸಿ,ಎಸ್ಟಿಗೆ ಭೂ ಒಡೆತನ ಕಾರ್ಯಕ್ರಮ ಮಾಡಿದ್ದೇವೆ.ಸ್ವಯಂ ಉದ್ಯೋಗ ಯೋಜನೆ ತಂದಿದ್ದೇವೆ.ಪರಿಶಿಷ್ಟ ಹೆಣ್ಣುಮಕ್ಕಳಿಗೆ ಸ್ವಯಂ ಉದ್ಯೋಗಕ್ಕೆ ಅವಕಾಶ ಕಲ್ಪಿಸಲಾಗಿದೆ.ಎಸ್ಟಿ ಮೀಸಲಾತಿ ಹೆಚ್ಚಳದ ಬಗ್ಗೆ ಚರ್ಚೆಯಿದೆ.50% ಒಳಗೆ ನಾವು ಮೀಸಲಾತಿ ವಿತರಿಸಬೇಕು.ಮೀಸಲಾತಿ ಹೆಚ್ಚಳಕ್ಕೆ ಎಲ್ಲಾ ಸಮುದಾಯಗಳ ಆಶೋತ್ತರ ಹೆಚ್ಚಾಗಿದೆ.ಮೀಸಲಾತಿ ‌ನೀಡುವುದು ಸುಲಭದ ಕೆಲಸವಲ್ಲವಾದರೂ ಮೀಸಲಾತಿ ಬಗ್ಗೆ ‌ನಾವು ಚಿಂತನೆ ‌ನಡೆಸಿದ್ದೇವೆ.ಆದಷ್ಟು ಬೇಗ ಕಾನೂನು ಚೌಕಟ್ಟಿನಲ್ಲಿ ಮೀಸಲಾತಿ ಬಗೆ ಹರಿಸುತ್ತೇವೆ.ವಾಲ್ಮೀಕಿ ಸಮುದಾಯ ಬೆಳೆಯುತ್ತಿದ್ದು,ಇದಕ್ಕೆ ಸಮನಾದ ‌ಮೀಸಲಾತಿ‌ ಇರಬೇಕು.ಈ‌ ನಿಟ್ಟಿನಲ್ಲಿ ‌ಸರ್ಕಾರ ಕೆಲಸ ಮಾಡುತ್ತಿದೆ.ವಾಲ್ಮೀಕಿ ಮಹಿಳೆಯರ ಸ್ವಯಂ ಉದ್ಯೋಗಕ್ಕೆ ಸಹಾಯವನ್ನು ಮಾಡುತ್ತೇವೆ.ಈಗಾಗಲೇ ನಬಾರ್ಡ್ ಜೊತೆ ಮಾತನಾಡಿದ್ದೇನೆ.ಈ ಸಮುದಾಯದ ಹಲವಾರು ನಿರೀಕ್ಷೆ ಇದೆ.ಮೀಸಲಾತಿ ಬಗ್ಗೆ ಬಹುದೊಡ್ಡ ಬೇಡಿಕೆ ಇದೆ.ಇದನ್ನು 5೦% ಒಳಗೆ ಈ ಸಮಸ್ಯೆ ಬಗೆ ಹರಿಸಬೇಕಿದೆ.ಪ್ರಧಾನಿ ಮೊದಿ ಇದನ್ನು ಅರಿತು 10% ಮೀಸಲಾತಿ ಹೆಚ್ಚಿಸಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಇದನ್ನು ಅರ್ಥ ಮಾಡಿಕೊಂಡು 10 ಶೇ ಆರ್ಥಿಕ ಹಿಂದುಳಿದವರಿಗೆ ಮೀಸಲಾತಿ ನೀಡುವ ತೀರ್ಮಾನ ಮಾಡಿದ್ದಾರೆ.ಮೀಸಲಾತಿ ಹೆಚ್ಚಳ ವಿಚಾರವಾಗಿ ಪುನರ್ ಚರ್ಚೆ ಹಾಗೂ ತೀರ್ಮಾನ ಆಗಬೇಕಿದೆ.ಸಾಮಾಜಿಕ ಹಿಂದುಳಿದವರಿಗೆ ಈ ಮೀಸಲಾತಿ ಸಹಕಾರಿ ಆಗುತ್ತದೆ.ವಾಲ್ಮೀಕಿ ಸಮುದಾಯದ ಸ್ವಾಮೀಜಿ ಆಶಯದಂತೆ ಸರ್ಕಾರ ‌ಕೆಲಸ ಮಾಡುತ್ತಿದೆ.ಈಗಾಗಲೇ ವಾಲ್ಮೀಕಿ ಸಮಾಜಕ್ಕೆ ಪ್ರತ್ಯೇಕ ಸಚಿವಾಲಯ ‌ಮಾಡಿದ್ದೇವೆ.ಈ ಸಮಾಜದ ಅಭಿವೃದ್ಧಿಯಾಗಬೇಕು ಎಂಬ ದೃಷ್ಟಿಯಿಂದ ಈ‌ ಸಮಾಜದ ಬಡ ಜನರಿಗೆ ಭೂಮಿ ‌ಕೊಡಬೇಕೆನ್ನುವುದು ನನ್ನ ಸರ್ಕಾರದ ಉದ್ದೇಶ ಎಂದು ಸೂಚ್ಯವಾಗಿ ಹೇಳಿದರು.

ನಮ್ಮನ್ನು ನಾವೇ ಮೌಲ್ಯಮಾಪನ ಮಾಡಿ, ಆತ್ಮವಿಶ್ವಾಸದೊಂದಿಗೆ ಮುನ್ನಡೆಯುವ ದಿನ ಇದಾಗಿದೆ .ಸಾಹಿತ್ಯದ ಜಗತ್ತನ್ನು ಬದಲಾವಣೆ ಮಾಡಿದ ಶ್ರೇಷ್ಠ ವ್ಯಕ್ತಿತ್ವದ ವಾಲ್ಮೀಕಿಯದ್ದು ಕಾಲಾತೀತರಾಗಿರುವ ವ್ಯಕ್ತಿತ್ವ.ಮನಕುಲ ಇರುವವರೆಗೂ ವಾಲ್ಮೀಕಿ ಚಿಂತನೆ ಜೀವಂತವಾಗಿರುತ್ತದೆ. ಭಾರತಕ್ಕೆ ಸಂಸ್ಕೃತಿ ಕೊಟ್ಟ ಏಕಮೇವ ಕವಿ ವಾಲ್ಮೀಕಿ ಎಂದು ಸಿಎಂ ವಾಲ್ಮೀಕಿ ಮಹಾತ್ಮೆ ವಿವರಿಸಿದರು.

ವಾಲ್ಮೀಕಿ ದಿನಾಚರಣೆ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮುದಾಯದ ಆರುಮಂದಿಗೆ ಸಿಎಂ ಪ್ರಶಸ್ತಿ ವಿತರಿಸಿದರು.

More News

ಎಸ್ ಆರ್ ವಿಶ್ವನಾಥ್‌ಗೆ ಬಿಗಿಭದ್ರತೆ

01 Dec 2021 | 5:59 PM

 Sharesee more..
ಬೆಳಗಾವಿಯಲ್ಲಿ  ಸದ್ಯ ಅಧಿವೇಶನ ರದ್ದುಪಡಿಸಿ

ಬೆಳಗಾವಿಯಲ್ಲಿ ಸದ್ಯ ಅಧಿವೇಶನ ರದ್ದುಪಡಿಸಿ

01 Dec 2021 | 5:29 PM

ಸಚಿವಾಲಯದ ನೌಕರರ ಸಂಘದಿಂದ ಮನವಿ

 Sharesee more..
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಕಾರ್ಯಕರ್ತರ ಮತ್ತು ಚುನಾಯಿತ ಸದಸ್ಯರ ಸಭೆ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಕಾರ್ಯಕರ್ತರ ಮತ್ತು ಚುನಾಯಿತ ಸದಸ್ಯರ ಸಭೆ

01 Dec 2021 | 4:37 PM

ಕರ್ನಾಟಕದ ವಿಧಾನ ಪರಿಷತ್ ನ 25 ಸ್ಥಾನಗಳಿಗೆ ಡಿಸೆಂಬರ್ 10 ರಂದು ಚುನಾವಣೆ ನಡೆಯಲಿದೆ. ಚುನಾವಣೆಗೆ ಕೆಲವು ನದಿಗಳು ಬಾಕಿ ಇರುವುದರಿಂದ ದಿನದಿಂದ ದಿನಕ್ಕೆ ಚುರುಗೊಳ್ಳುತ್ತಿರುವ ಮತದಾರರ ಓಲೈಕೆ‌ ಪ್ರಕ್ರಿಯೆ.

 Sharesee more..