Sunday, Oct 24 2021 | Time 02:32 Hrs(IST)
International Share

ಕಾಬೂಲ್: ಆಹಾರಕ್ಕಾಗಿ ಮನೆ ವಸ್ತುಗಳ ಮಾರಾಟ

ಕಾಬೂಲ್, ಸೆ. 18 (ಯುಎನ್ಐ) ಅಫಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದಾಗಿನಿಂದ, ಜನರು ತಮ್ಮ ಮನೆಯ ವಸ್ತುಗಳನ್ನು ಕಾಬೂಲ್ ಬೀದಿಗಳಲ್ಲಿ ಮಾರಾಟ ಮಾಡುತ್ತಿದ್ದಾರೆ.

ರತ್ನಗಂಬಳಿಗಳು, ರೆಫ್ರಿಜರೇಟರ್‌ಗಳು, ಟೆಲಿವಿಷನ್ ಸೆಟ್‌ಗಳು, ಸೋಫಾ ಸೆಟ್‌ಗಳು ಮತ್ತು ಇತರ ವಸ್ತುಗಳನ್ನು ಕಾಬೂಲ್‌ನ ಚಾಮನ್‌-ಇ-ಹೊಜೊರಿ, ಪಾರ್ಕ್‌ಗೆ ಹೋಗುವ ರಸ್ತೆಗಳಲ್ಲಿ ಮಾರಲು ಸಾಲುಗಟ್ಟಿರುವುದು ಸಾಮಾನ್ಯವಾಗಿದೆ.

ತಮ್ಮ ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಅನೇಕರಿಗೆ ಅಫ್ಘಾನಿಸ್ತಾನದಿಂದ ಪಲಾಯನ ಮಾಡಲು ಅಥವಾ ಅವರಿಗೆ ಬದುಕಲು ಹಣವಿಲ್ಲದ ಕಾರಣ ಹಣದ ಅಗತ್ಯವಿದೆ ಎಂದು ಟೋಲೊ ನ್ಯೂಸ್ ವರದಿ ಮಾಡಿದೆ.

ಅವರ ಅತ್ಯಂತ ದುಬಾರಿ ವಸ್ತುಗಳು ಈಗ ರಾಕ್-ಬಾಟಮ್ ಬೆಲೆಯಲ್ಲಿ ಮಾರಾಟವಾಗುತ್ತಿವೆ ಎಂದು ಅವರು ಹೇಳಿದರು.

ಲಾಲ್ ಗುಲ್ ಎಂಬ ಅಂಗಡಿಯವನು ಟೋಲೊ ನ್ಯೂಸ್‌ಗೆ ಒಂದು ಲಕ್ಷ ರೂ.ಮೌಲ್ಯದ ಗೃಹೋಪಯೋಗಿ ವಸ್ತುಗಳು ಕೇವಲ 20 ಸಾವಿರಕ್ಕೆ ಮಾರಾಟವಾಗುತ್ತಿದೆ ಎಂದು ಹೇಳಿದ್ದಾರೆ.

"ನಾನು ನನ್ನ ವಸ್ತುಗಳನ್ನು ಅರ್ಧಕ್ಕಿಂತ ಕಡಿಮೆ ಬೆಲೆಗೆ ಮಾರಿದ್ದೇನೆ. ನಾನು 25 ಸಾವಿರ ರೂ. ಮೌಲ್ಯದ ರೆಫ್ರಿಜರೇಟರ್ ಅನ್ನುಕೇವಲ 5 ಸಾವಿರಕ್ಕೆ ಮಾರಾಟ ಮಾಡಿದೆ. ಯಾವುದೇ ದಾರಿ ಇಲ್ಲ. ನಾನು ಏನು ಮಾಡಬೇಕು? ನನ್ನ ಮಕ್ಕಳಿಗೆ ರಾತ್ರಿ ಆಹಾರ ಬೇಕು” ಎಂದು ಲಾಲ್ ಗುಲ್ ತಿಳಿಸಿದ್ದಾರೆ.

ಮೊಹಮ್ಮದ್ ಅಘಾ, ಮಾಜಿ ಪೊಲೀಸ್ ಅಧಿಕಾರಿ, ಕಳೆದ ಹತ್ತು ದಿನಗಳಿಂದ ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದಾರೆ. "ಅವರು ನನ್ನ ಸಂಬಳವನ್ನು ನನಗೆ ಕೊಡಲಿಲ್ಲ. ಈಗ, ನನಗೆ ಕೆಲಸವಿಲ್ಲ. ನಾನು ಏನು ಮಾಡಬೇಕು? " ಎಂದು ಅವರು ಪ್ರಶ್ನಿಸಿದ್ದಾರೆ. ಇನ್ನಿತರ ಅನೇಕ ಜನರು ಇದೇ ರೀತಿಯ ಕಥೆಗಳನ್ನು ಹೊಂದಿದ್ದಾರೆ.

ಯುಎನ್ಐ ಎಸ್ಎ 1215
More News
ಭುಗಿಲೆದ್ದ ಹಿಂಸಾಚಾರ – ಪಾಕಿಸ್ತಾನದಲ್ಲಿ ನಾಲ್ವರು ಸಾವು

ಭುಗಿಲೆದ್ದ ಹಿಂಸಾಚಾರ – ಪಾಕಿಸ್ತಾನದಲ್ಲಿ ನಾಲ್ವರು ಸಾವು

23 Oct 2021 | 12:27 PM

ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಪಾಕಿಸ್ತಾನದಲ್ಲಿ ಸರಣಿ ಪ್ರತಿಭಟನೆಗಳು ಆರಂಭಗೊಂಡಿವೆ. ಇಸ್ಲಾಮಿಸ್ಟ್ ಹಾಗೂ ಭದ್ರತಾ ಪಡೆಗಳ ಮಧ್ಯೆ ನಡದೆ ಘರ್ಷಣೆಯಲ್ಲಿ ಇಬ್ಬರು ಪೊಲೀಸರು ಸಾವಿಗೀಡಾಗಿದ್ದಾರೆ. ಇನ್ನಿಬ್ಬರು ಇಸ್ಲಾಮಿಸ್ಟ್ ಹೋರಾಟಗಾರರು ಅಸುನೀಗಿದ್ದಾರೆ.

 Sharesee more..
ಅನನ್ಯ ಪಾಂಡೆ ಆರ್ಯನ್ ಖಾನ್​ಗೂ ಇರುವ ಸಂಬಂಧ ಏನು ಗೊತ್ತಾ? : ಚಾಟ್ ನಿಂದ ಬಹಿರಂಗವಾಯ್ತು ಡ್ರಗ್ಸ್ ಪೂರೈಕೆ ವಿಚಾರ

ಅನನ್ಯ ಪಾಂಡೆ ಆರ್ಯನ್ ಖಾನ್​ಗೂ ಇರುವ ಸಂಬಂಧ ಏನು ಗೊತ್ತಾ? : ಚಾಟ್ ನಿಂದ ಬಹಿರಂಗವಾಯ್ತು ಡ್ರಗ್ಸ್ ಪೂರೈಕೆ ವಿಚಾರ

22 Oct 2021 | 7:50 PM

ಮುಂಬೈ: ಅ, 22 (ಯುಎನ್‌ಐ) ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ.

 Sharesee more..
ಈ ಪುಟ್ಟ ಪೋರನ ದುಡಿಮೆ ತಿಂಗಳಿಗೆ 75 ಸಾವಿರ ರೂ  !

ಈ ಪುಟ್ಟ ಪೋರನ ದುಡಿಮೆ ತಿಂಗಳಿಗೆ 75 ಸಾವಿರ ರೂ !

22 Oct 2021 | 4:50 PM

ವಾಷಿಂಗ್ಟನ್ : ಅ, 22 (ಯುಎನ್‌ಐ) ಸಾಮಾಜಿಕ ಮಾಧ್ಯಮಗಳಲ್ಲಿ ರಾಜಕಾರಣಿಗಳು, ಸಿನಿಮಾ ನಟ-ನಟಿಯರು ತಮ್ಮದೇ ಆದ ಹವಾವನ್ನು ಕ್ರಿಯೇಟ್​ ಮಾಡಿರುತ್ತಾರೆ.

 Sharesee more..
ರೋಹಿಂಗ್ಯಾ ಗುಂಪುಗಳ ನಡುವೆ ಘರ್ಷಣೆ- ಸಾವು

ರೋಹಿಂಗ್ಯಾ ಗುಂಪುಗಳ ನಡುವೆ ಘರ್ಷಣೆ- ಸಾವು

22 Oct 2021 | 3:23 PM

ಢಾಕಾ,ಅ.

 Sharesee more..
ಮಧುಮಗಳ ಜೊತೆ ವೈರಲ್ ಆಗುತ್ತಿದೆ ನಾಯಿ

ಮಧುಮಗಳ ಜೊತೆ ವೈರಲ್ ಆಗುತ್ತಿದೆ ನಾಯಿ

22 Oct 2021 | 3:22 PM

ಅಮೆರಿಕಾ,ಅ.

 Sharesee more..