Friday, Oct 22 2021 | Time 04:40 Hrs(IST)
Sports Share

ಭಾನುವಾರದ ಮಜಾ ಹೆಚ್ಚಿಸಲಿದೆ ಕೆಕೆಆರ್-ಆರ್ ಸಿಬಿ ಫೈಟ್

ಅಬುಧಾಬಿ, ಸೆ.19 (ಯುಎನ್ಐ)- ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿ ಅಭಿಮಾನಿಗಳ ಮನ ಗೆದ್ದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎರಡನೇ ಚರಣದ ಮೊದಲ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆಣಸಾಟ ನಡೆಸಲಿದ್ದು, ಭಾನುವಾರದ ಮಜಾ ಹೆಚ್ಚಿಸಲಿದೆ.

ಈ ಪಂದ್ಯವು ಟೂರ್ನಿಯ 31ನೇ ಪಂದ್ಯವಾಗಿದ್ದು, ಈ ಪಂದ್ಯವನ್ನು ಗೆದ್ದು ಪೂರ್ಣ ಅಂಕ ಕಲೆ ಹಾಕುವತ್ತ ಉಭಯ ತಂಡಗಳಯು ಚಿತ್ತ ನೆಟ್ಟಿವೆ. ಆರ್ ಸಿಬಿ ತಂಡ ಆಡಿದ ಏಳು ಪಂದ್ಯಗಳಲ್ಲಿ 5 ಜಯ, 2 ಸೋಲು ಕಂಡಿದ್ದು, 10 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಇನ್ನು ಕೋಲ್ಕತ್ತಾ ತಂಡ ಇಷ್ಟೇ ಪಂದ್ಯಗಳಿಂದ 2 ಜಯ, 5 ಸೋಲು ಕಂಡಿದ್ದು, 4 ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ.

ಆರಂಭಿಕರಾಗಿ ಕಾಣಿಸಿಕೊಳ್ಳುವ ವಿರಾಟ್ ಕೊಹ್ಲಿ ರನ್ ಮಹಲ್ ಕಟ್ಟ ಬೇಕಿದೆ. ಇವರು ಇಂಗ್ಲೆಂಡ್ ನಲ್ಲಿ ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾಗಿದ್ದರು. ಅಬುದಾಬಿ ಅಂಗಳದಲ್ಲಿ ಮಿಂಚಿನ ಬ್ಯಾಟಿಂಗ್ ನಡೆಸಬೇಕಿದೆ. ಇನ್ನು ಕನ್ನಡಿಗ ದೇವದತ್ ಪಡಿಕ್ಕಲ್ ತಮ್ಮ ಚೇತೇಹಾರಿ ಪ್ರದರ್ಶನದಿಂದ ಅಬ್ಬರಿಸಬೇಕಿದೆ. ಮಧ್ಯಮ ಕ್ರಮಾಂಕದಲ್ಲಿ ಎಬಿಡಿ ವಿಲಿಯರ್ಸ್ ಹಾಗೂ ಗ್ಲೇನ್ ಮ್ಯಾಕ್ಸ್ ವೆಲ್ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬ ಬಲ್ಲ ಆಟಗಗಾರರು.

ಇನ್ನು ಆರ್ ಸಿಬಿ ಬೌಲಿಂಗ್ ನಲ್ಲಿ ಹರ್ಷಲ್ ಪಟೇಲ್ ಎದುರಾಳಿಗಳನ್ನು ಕಾಡಬಲ್ಲರು. ಇವರು ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಪಡೆದವರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದು ಭರವಸೆ ಮೂಡಿಸಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಅನುಭವ ಹೊಂದಿರುವ ಮೊಹಮ್ಮದ್ ಸಿರಾಜ್ ಲಯ ಬದ್ಧ ದಾಳಿ ನಡೆಸಬಲ್ಲರು. ನ್ಯೂಜಿಲೆಂಡ್ ವೇಗಿ ಕೈಲ್ ಜೇಮಿಸನ್ ಸಹ ತಮ್ಮ ಶಿಸ್ತು ಬದ್ಧ ದಾಳಿ ನಡೆಸಿ ತಂಡಕ್ಕೆ ನೆರವಾಗಬಲ್ಲರು. ಯಜುವೇಂದ್ರ ಚಹಾಲ್ ಸ್ಪಿನ್ ಮೋಡಿ ನಡೆಸಬೇಕಿದೆ.

ಕೆಕೆಆರ್ ಪರ ಆರಂಭಿಕರಾಗಿ ಕಾಣಿಸಿಕೊಳ್ಳುವ ನಿತೀಶ್ ರಾಣಾ ಹಾಗೂ ಶುಭಮನ್ ಗಿಲ್ ದೊಡ್ಡ ಜೊತೆಯಾಟದ ಕಾಣಿಕೆ ನೀಡಬೇಕಿದೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಆಡುವ ರಾಹುಲ್ ತ್ರಿಪಾಠಿ, ನಾಯಕ ಇಯಾನ್ ಮಾರ್ಗನ್ ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟ್ ಮಾಡಬೇಕಿದೆ. ಆಲ್ ರೌಂಡರ್ ಆಂಡ್ರಿ ರಸೆಲ್, ಸುನಿಲ್ ನರೈನ್ ನೆಲಕಚ್ಚಿ ನಿಂತು ಬ್ಯಾಟ್ ಮಾಡುವ ಅವಶ್ಯಕತೆ ಇದೆ. ಅಂದಾಗ ಮಾತ್ರ ದೊಡ್ಡ ಮೊತ್ತದ ಕನಸು ನನಸಾಗುತ್ತದೆ.

ವೇಗದ ದಾಳಿಯಲ್ಲಿ ಕಾಣಿಸಿಕೊಳ್ಳುವ ಪ್ರಸಿದ್ಧ ಕೃಷ್ಣ ಎಲ್ಲರ ಚಿತ್ತ ಕದ್ದಿದ್ದಾರೆ. ಆರಂಭದಲ್ಲಿ ಹಾಗೂ ಕೊನೆಯ ಓವರ್ ಗಳಲ್ಲಿ ಬಿಗುವಿನ ದಾಳಿ ನಡೆಸಬಲ್ಲರು. ಶಿವಮ್ ಮಾವಿ ಎದುರಾಳಿಗಳನ್ನು ಕಾಡಬಲ್ಲರು. ಸ್ಪಿನ್ ಬೌಲರ್ ಗಳಲ್ಲಿ ವರುಣ್ ಚಕ್ರವರ್ತಿ ಹಾಗೂ ಸುನಿಲ್ ನರೈನ್ ತಮ್ಮ ಮೋಡಿಯಿಂದ ಬ್ಯಾಟ್ಸ್ ಮನ್ ಗಳನ್ನು ಕಾಡಬೇಕಿದೆ.

ಯುಎನ್ಐ ವಿಎನ್ಎಲ್ 2011
More News
ಭಾರತದಲ್ಲಿ ಗಲ್ಲಿ ಕ್ರಿಕೆಟಿಗ; ಓಮನ್ ನಲ್ಲಿ ಸ್ಟಾರ್ ಆಟಗಾರ!

ಭಾರತದಲ್ಲಿ ಗಲ್ಲಿ ಕ್ರಿಕೆಟಿಗ; ಓಮನ್ ನಲ್ಲಿ ಸ್ಟಾರ್ ಆಟಗಾರ!

21 Oct 2021 | 1:28 PM

ಭಾರತದ ಗಲ್ಲಿ ಗಲ್ಲಿಗಳಲ್ಲಿ ಆಡುತ್ತಿದ್ದ ಹುಡುಗ ಈಗ ಓಮನ್ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ. ಟಿ-20 ವಿಶ್ವಕಪ್ ನ ಅರ್ಹತಾ ಪಂದ್ಯಗಳಲ್ಲಿ ಆಡುತ್ತಿರುವ ಜತೀಂದರ್ ಸಿಂಗ್, ಓಮನ್ ತಂಡದ ಸ್ಟಾರ್ ಆಟಗಾರನಾಗಿದ್ದಾನೆ.

 Sharesee more..
ದ್ರಾವಿಡ್ ಆಯ್ಕೆಗೂ ಮುನ್ನ ಇಬ್ಬರು ಕ್ರಿಕೆಟ್ ದಿಗ್ಗಜರ ಜತೆ ಬಿಸಿಸಿಐ ಸಂಪರ್ಕ!

ದ್ರಾವಿಡ್ ಆಯ್ಕೆಗೂ ಮುನ್ನ ಇಬ್ಬರು ಕ್ರಿಕೆಟ್ ದಿಗ್ಗಜರ ಜತೆ ಬಿಸಿಸಿಐ ಸಂಪರ್ಕ!

21 Oct 2021 | 11:07 AM

ಭಾರತೀಯ ಕ್ರಿಕೆಟ್ ನ ಗೋಡೆ ಎಂದೇ ಕರೆಯಲ್ಪಡುವ ರಾಹುಲ್ ದ್ರಾವಿಡ್ ಬಿಸಿಸಿಐನಲ್ಲಿ ಹೊಸ ಜವಾಬ್ದಾರಿ ಹೊರುವುದು ಫಿಕ್ಸ್ ಆಗಿದೆ. ಭಾರತೀಯ ಕ್ರಿಕೆಟ್ ತಂಡದ ನೂತನ ಕೋಚ್ ಆಗಲಿರುವ ರಾಹುಲ್ ಅವರ ಹೆಸರು ಔಪಚಾರಿಕವಾಗಿ ಘೋಷಣೆ ಮಾಡೋದು ಮಾತ್ರ ಬಾಕಿ ಉಳಿದಿದೆ.

 Sharesee more..
ಟಿ-20 ವಿಶ್ವಕಪ್; ಸೂಪರ್ 12ರ ಘಟ್ಟಕ್ಕೆ ಜಿಗಿದ ಶ್ರೀಲಂಕಾ

ಟಿ-20 ವಿಶ್ವಕಪ್; ಸೂಪರ್ 12ರ ಘಟ್ಟಕ್ಕೆ ಜಿಗಿದ ಶ್ರೀಲಂಕಾ

21 Oct 2021 | 10:32 AM

ಐರ್ಲೆಂಡ್ ವಿರುದ್ಧ ಸಿಂಹಳೀಯರು ಸುಲಭ ಗೆಲುವು ದಾಖಲಿಸಿದ್ದಾರೆ. ಎರಡೂ ಪಂದ್ಯಗಳಲ್ಲಿ ವಿಜಯ ಸಾಧಿಸುವುದರ ಮೂಲಕ ಶ್ರೀಲಂಕಾ ಸೂಪರ್ 12 ಘಟ್ಟಕ್ಕೆ ಜಿಗಿಯಿತು.

 Sharesee more..
ಟಿ-20 ವಿಶ್ವಕಪ್; ಬೌಲಿಂಗ್ ಮಾಡಿದ ವಿರಾಟ್ ಕೊಹ್ಲಿ!

ಟಿ-20 ವಿಶ್ವಕಪ್; ಬೌಲಿಂಗ್ ಮಾಡಿದ ವಿರಾಟ್ ಕೊಹ್ಲಿ!

20 Oct 2021 | 7:55 PM

ದುಬೈ ಕ್ರಿಕೆಟ್ ಗ್ರೌಂಡ್ ನಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಅಚ್ಚರಿ ಕಾಣಿಸಿತು. ಅದುವೇ ವಿರಾಟ್ ಕೊಹ್ಲಿ ಬೌಲಿಂಗ್ ಮಾಡಿದ್ದು.

 Sharesee more..