Monday, Oct 18 2021 | Time 22:02 Hrs(IST)
Karnataka Share

ರಾಷ್ಟ್ರಧ್ವಜ ನೇಯ್ಗೆಗಾರರ ಸಮಸ್ಯೆ ಆಲಿಕೆ

ರಾಷ್ಟ್ರಧ್ವಜ ನೇಯ್ಗೆಗಾರರ ಸಮಸ್ಯೆ ಆಲಿಕೆ

ಬೆಂಗಳೂರು: ಆ. 29 (ಯು.ಎನ್.ಐ.) ಹುಬ್ಬಳ್ಳಿ ಬೆಂಗೇರಿಯಲ್ಲಿನ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ ರಾಷ್ಟ್ರಧ್ವಜ ನೇಯ್ಗೆ ಕೇಂದ್ರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಭಾನುವಾರ ಭೇಟಿ ನೀಡಿದ್ದರು.63 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಯು 900 ಮಂದಿಗೆ ಉದ್ಯೋಗ ಕಲ್ಪಿಸಿದೆ. 30 ಮಂದಿ ಮಹಿಳೆಯರು ಕೆಲಸ ಮಾಡುತ್ತಿರುವ ಸಂಸ್ಥೆಯ ರಾಷ್ಟ್ರಧ್ವಜ ತಯಾರಿಕಾ ಕೇಂದ್ರವು ದೇಶದ ಮೂಲೆ, ಮೂಲೆಗಳಿಗೂ ರಾಷ್ಟ್ರಧ್ವಜ ಪೂರೈಸುತ್ತಿದೆ. ಇದು ಭಾರತೀಯ ಮಾನಕ ಸಂಸ್ಥೆಯಿಂದ ಮಾನ್ಯತೆ ಪಡೆದ ದೇಶದ ಏಕೈಕ ಸಂಸ್ಥೆಯಾಗಿದೆ.ಇಂಥ ಹೆಗ್ಗಳಿಕೆ ಹೊಂದಿರುವ ಸಂಸ್ಥೆಗೆ ಇಂದು ಭೇಟಿ ನೀಡಿದ ಡಿ.ಕೆ. ಶಿವಕುಮಾರ್ ಅವರು, ರಾಷ್ಟ್ರಧ್ವಜ ತಯಾರಿಕೆ ಪ್ರಕ್ರಿಯೆಯನ್ನು ವೀಕ್ಷಿಸಿದರು. ರಾಷ್ಟ್ರಧ್ವಜಕ್ಕೆ ಸ್ವತಃ ಇಸ್ತ್ರಿ ಮಾಡುವ ಮೂಲಕ ಆ ಪ್ರಕ್ರಿಯೆಯಲ್ಲಿ ಸಾಂಕೇತಿಕವಾಗಿ ಪಾಲ್ಗೊಂಡರು. ಜತೆಗೆ ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕೇಳಿ ತಿಳಿದುಕೊಂಡರು.ಕೊರೋನಾ ಲಾಕ್ ಡೌನ್ ಪರಿಣಾಮವಾಗಿ ಸಂಸ್ಥೆಯ ಉತ್ಪಾದನಾ, ಮಾರಾಟ ಮಳಿಗೆಗಳ ಸಿಬ್ಬಂದಿ ಸಮರ್ಪಕ ಕೆಲಸವಿಲ್ಲದೆ ಜೀವನ ಸಾಗಿಸಲು ಆಗಿರುವ ತೊಂದರೆಗಳ ಬಗ್ಗೆ ಅಲ್ಲಿನ ಸಿಬ್ಬಂದಿ ಸಂಕಷ್ಟ ತೋಡಿಕೊಂಡರು. ಸಾಂಪ್ರದಾಯಿಕ ವೃತ್ತಿನಿರತರಿಗೆ ನೀಡಿರುವ ಪರಿಹಾರವನ್ನು ತಮಗೂ ಸಿಗುವಂತಾಗಲು ಸರಕಾರದ ಮೇಲೆ ಒತ್ತಡ ತರುವಂತೆ ಶಿವಕುಮಾರ್ ಅವರಲ್ಲಿ ಮನವಿ ಮಾಡಿದರು.ಇದರ ಜತೆಗೆ, ಕರ್ನಾಟಕ ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿಯು ಬಾಕಿ ಅನುದಾನ ಬಿಡುಗಡೆ ಮಾಡದೆ ಇರುವುದರಿಂದ ಆಗಿರುವ ಅನಾನುಕೂಲದ ಬಗ್ಗೆ ಸಂಸ್ಥೆಯ ಮೇಲ್ವಿಚಾರಕರು ವಿವರಿಸಿದರು. ಈ ಬಗ್ಗೆ ಸರಕಾರದ ಮೇಲೆ ಒತ್ತಡ ತರುವುದಾಗಿ ಶಿವಕುಮಾರ್ ಅವರು ಭರವಸೆ ನೀಡಿದರು.ಡಿ.ಕೆ. ಶಿವಕುಮಾರ್ ಅವರು ಅಲ್ಲಿಂದ ತೆರಳುವ ಮುನ್ನ, ಭಾರತದ ಉನ್ನತ ಪರಂಪರೆಯ ಭಾಗವಾಗಿರುವ ಈ ಸಂಸ್ಥೆಗೆ ಭೇಟಿ ನೀಡಿದ್ದು ತಮಗೆ ಹೆಮ್ಮೆ ತಂದಿದೆ. ಇಲ್ಲಿನ ಸಿಬ್ಬಂದಿಯ ದೇಶಸೇವೆ ಸ್ತುತ್ಯಾರ್ಹ. ಅವರ ಸೇವೆಗೆ ನಮಿಸುತ್ತೇನೆ ಎಂದು ಸಂಸ್ಥೆಯ ಸಂದರ್ಶಕರ ಪುಸ್ತಕದಲ್ಲಿ ತಮ್ಮ ಹಸ್ತಾಕ್ಷರದಲ್ಲಿ ದಾಖಲಿಸಿದರು.ಮಾಜಿ ಸಚಿವ ವೀರಣ್ಣ ಮತ್ತಿಕಟ್ಟಿ, ಕುಲದೀಪ್ ರಾಯ್ ಶರ್ಮಾ, ಪ್ರಸಾದ ಅಬ್ಬಯ್ಯ, ನೇರಳಕೇರಿ, ಶರಣಪ್ಪ ಕೋಟಗಿ, ಸದಾನಂದ ಮತ್ತಿತರರು ಜತೆಗಿದ್ದರು.UNI, KR

More News
1 ರಿಂದ 5ನೇ ತರಗತಿಗಳ ಆರಂಭಕ್ಕೆ ಹಸಿರು ನಿಶಾನೆ

1 ರಿಂದ 5ನೇ ತರಗತಿಗಳ ಆರಂಭಕ್ಕೆ ಹಸಿರು ನಿಶಾನೆ

18 Oct 2021 | 9:42 PM

1 ರಿಂದ 5 ರವರೆಗಿನ ತರಗತಿಗಳನ್ನು ನಡೆಸುವ ಬಗ್ಗೆ ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ಹೊರಡಿಸಿದೆ. ಇವುಗಳು ಹಾರಿಗೊಳ್ಳುವಂತೆ ಗಮನಹರಿಸುವುದು ಆಯಾ ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರ ಜವಾಬ್ದಾರಿಯಾಗಿದೆ. ಕೋವಿಡ್ ನಿಯಂತ್ರಣ ಕುರಿತಂತೆ ಸಂಬಂಧಿಸಿದ ಸಂಸ್ಥೆ ಸೂಚಿಸಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

 Sharesee more..
ತಗ್ಗಿದ ಕೋವಿಡ್ ಪ್ರಕರಣ; ಮತ್ತಷ್ಟೂ ಚಟುವಟಿಕೆಗೆ ಅನುಮತಿ

ತಗ್ಗಿದ ಕೋವಿಡ್ ಪ್ರಕರಣ; ಮತ್ತಷ್ಟೂ ಚಟುವಟಿಕೆಗೆ ಅನುಮತಿ

18 Oct 2021 | 9:39 PM

ಪ್ರಯಾಣಿಕರನ್ನು ಸ್ವಯಂಚಾಲಿತ ಥರ್ಮಲ್ ಪರೀಕ್ಷಾ ಕ್ಯಾಮೆರಾಗಳ ಮುಖಾಂತರ ತಪಾಸಣೆಗೊಳಪಡಿಸುವುದು ಅಗತ್ಯ ಎಂದು ಹೇಳಲಾಗಿದೆ. ಇಂಗ್ಲೆಡ್ ನಿಂದ ಬರುವ ಪ್ರಯಾಣಿಕರಿಗೆ ಕ್ವಾರಂಟೈನ್ ಅನ್ವಯಿಸುವ ಕುರಿತು ಕೇಂದ್ರ ಸರಕಾರ ಸೂಚಿಸಿರುವ ಮಾರ್ಗಸೂಚಿ ಅನುಸರಣೆ ಮುಂದುವರಿಯುತ್ತದೆ. ಇದರ ಬಗ್ಗೆ ಹೆಚ್ಚಿನ ಸ್ಪಷ್ಟೀಕರಣವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡುತ್ತದೆ ಎಂದು ಹೇಳಲಾಗಿದೆ.

 Sharesee more..
ಭಾರತದ ಕಾನೂನು ವಿಶ್ವದಲ್ಲೇ ಶ್ರೇಷ್ಠ: ರಾಜ್ಯಪಾಲ

ಭಾರತದ ಕಾನೂನು ವಿಶ್ವದಲ್ಲೇ ಶ್ರೇಷ್ಠ: ರಾಜ್ಯಪಾಲ

18 Oct 2021 | 9:27 PM

ದೇಶದ ಸಂವಿಧಾನ ಹಾಗೂ ಕಾನೂನು ವ್ಯವಸ್ಥೆ ಜಗತ್ತಿನಲ್ಲಿಯೇ ಶ್ರೇಷ್ಠವಾದದು. ಇದನ್ನು ಶ್ರೇಷ್ಠವಾಗಿಸುವಲ್ಲಿ ನಮ್ಮೆಲ್ಲರ ಕೊಡುಗೆ ಮುಖ್ಯ. ರಾಜ್ಯಪಾಲನಾಗಿ ಅಧಿಕಾರ ಸ್ವೀಕರಿಸಿದ ನಂತರ ಎರಡನೇ ಬಾರಿಗೆ ಹುಬ್ಬಳ್ಳಿ ಧಾರವಾಡಕ್ಕೆ ಭೇಟಿ ನೀಡುತ್ತಿದ್ದೇನೆ‌. ಕರ್ನಾಟಕ, ಕೃಷಿ ಹಾಗೂ ಕಾನೂನು ವಿಶ್ವವಿದ್ಯಾಲಯಗಳು ರಾಷ್ಟ್ರ ಮಟ್ಟದ ಉನ್ನತ ಶಿಕ್ಷಣ ಕೇಂದ್ರಗಳಾಗಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

 Sharesee more..

ನಗರದಲ್ಲಿ ಮತ್ತೊಂದು ಬೆಂಕಿ ಅವಘಡ

18 Oct 2021 | 6:20 PM

 Sharesee more..

ಬಿಜೆಪಿ ಸರಕಾರ ಜನತೆಗೆ ಶಾಪ : ಡಿಕೆಶಿ ವಾಗ್ದಾಳಿ

18 Oct 2021 | 5:51 PM

 Sharesee more..