Wednesday, Oct 20 2021 | Time 16:49 Hrs(IST)
Special Share

ರಾಹುಲ್‌ ಓರ್ವ 'ಇಚ್ಛಾಧಾರಿ' ಹಿಂದೂ: ನರೋತ್ತಮ್‌ ಮಿಶ್ರಾ

ಭೂಪಾಲ್‌, ಸೆ 16 (ಯುಎನ್ಐ) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಓರ್ವ 'ಇಚ್ಛಾಧಾರಿ' ಹಿಂದೂ ಎಂದು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಲೇವಡಿ ಮಾಡಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಟೀಕಿಸುವ ರಾಹುಲ್‌ ಹೇಳಿಕೆಯ ವಿರುದ್ಧ ಕಿಡಿಕಾರಿರುವ ಮಿಶರ್ರಾ, ಈ ಸಂಬಂಧ ಎಫ್ಐಆರ್‌ ದಾಖಲಿಸಬಹುದೇ ಎಂಬ ಬಗ್ಗೆ ಕಾನೂನು ಅಭಿಪ್ರಾಯ ಪಡೆಯುವುದಾಗಿ ತಿಳಿಸಿದರು.
ರಾಹುಲ್‌ ಗಾಂಧಿ ತಮ್ಮ ಇಚ್ಛೆಯಂತೆ ಧರ್ಮ ಬದಲಿಸುತ್ತಾರೆ. ಅಗತ್ಯಬಿದ್ದಾಗ 'ಧಾರ್ಮಿಕ ಪ್ರವಾಸ' ಕೈಗೊಳ್ಳುತ್ತಾರೆ. ಇಲ್ಲಿಯವರೆಗೆ, ಅವರನ್ನು ಅಪಕ್ವ ಎಂದು ಕಡೆಗಣಿಸುತ್ತಿದ್ದೆವು. ಆದರೆ, ಅವರು ಆರ್‌ಎಸ್‌ಎಸ್‌ ವಿರುದ್ಧ ಮಾತನಾಡಿರುವುದು ಎಲ್ಲರಿಗೂ ಬೇಸರ ತಂದಿದೆ. ಇದು ಅವರ ವಿದೇಶಿ ಮೂಲದ ಪ್ರತಿಬಿಂಬವಾಗಿದೆ ಎಂದರು.
ಯುಎನ್ಐ ಎಸ್ಎಚ್ 1659