Sunday, Nov 28 2021 | Time 08:25 Hrs(IST)
Special Share

ಕೇಂದ್ರ ಸರ್ಕಾರಿ 'ಉದ್ಯೋಗಿಗಳಿಗೆ' ದೀಪಾವಳಿ ಬೋನಸ್

ನವದೆಹಲಿ, ಅ 20 (ಯು ಎನ್‌ ಐ) ಕೇಂದ್ರ ಸರ್ಕಾರ ತನ್ನ ಉದ್ಯೋಗಿಗಳಿಗೆ ಸಿಹಿ ಸುದ್ದಿ ನೀಡಿದೆ. ಗ್ರೂಪ್‌ -ಸಿ, ಗ್ರೂಪ್‌ - ಬಿ ನಾನ್‌ ಗೆಜೆಟೆಡ್ ಉದ್ಯೋಗಿಗಳಿಗೆ ತಾತ್ಕಾಲಿಕ ಬೋನಸ್ ನೀಡಲು ನಿರ್ಧರಿಸಿರುವುದಾಗಿ ಪ್ರಕಟಿಸಿದೆ.
30 ದಿನಗಳ ಸರಾಸರಿ ವೇತನಕ್ಕೆ ಸಮಾನವಾಗಿ ಬೋನಸ್ ನೀಡಲಾಗುತ್ತದೆ. ಪ್ರತಿ ಉದ್ಯೋಗಿಗೆ ಕನಿಷ್ಠ ರೂ. 6,908 ಬೋನಸ್ ಲಭಿಸುವ ಅವಕಾಶವಿದೆ. ಉದ್ಯೋಗಿಗಳ ಕಾರ್ಯಕ್ಷಮತೆ ಆಧಾರಿತ ಬೋನಸ್ ಯೋಜನೆಗಳ ಮೂಲಕ ಪ್ರಯೋಜನ ಪಡೆಯದ ಉದ್ಯೋಗಿಗಳಿಗೆ ಈ ಯೋಜನೆ ಅನ್ವಯಿಸುತ್ತದೆ. ಈ ಸಂಬಂಧ ಕೇಂದ್ರ ಹಣಕಾಸು ಸಚಿವಾಲಯ, ಸರ್ಕಾರದ ವಿವಿದ ಸಚಿವಾಲಯಗಳಿಗೆ ಆದೇಶ ಹೊರಡಿಸಿದೆ.
ಯುಎನ್‌ ಐ ಕೆವಿಆರ್‌ 8.32