Sunday, Sep 26 2021 | Time 17:37 Hrs(IST)
Entertainment Share

ನಿರ್ದೇಶಕ ಇಂದ್ರಜಿತ್ ಲಂಕೇಶ್ ಮನೆಗೆ ಭದ್ರತೆ

ಬೆಂಗಳೂರು, ಜುಲೈ 16(ಯುಎನ್ಐ) ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಸ್ನೇಹಿತರ ವಿರುದ್ಧ ಹಲ್ಲೆ ಆರೋಪ ಮಾಡಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮನೆಗೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ.

ದರ್ಶನ್ ಮತ್ತು ಸ್ನೇಹಿತರು ಮೈಸೂರಿನ ಸಂದೇಶ್ ನಾಗರಾಜ್ ಒಡೆತನದ ದಿ ಪ್ರಿನ್ಸ್ ಹೋಟೆಲ್ ನಲ್ಲಿ ನೌಕರನಿಗೆ ಹಲ್ಲೆ ಮಾಡಿದ್ದಾರೆ ಎಂದು ಇಂದ್ರಜಿತ್ ಗುರುವಾರ ಆರೋಪ ಮಾಡಿದ್ದರು. ಇದು ದರ್ಶನ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಈ ಹಿನ್ನೆಲೆಯಲ್ಲಿ ಕೋರಮಂಗಲದಲ್ಲಿರುವ ಇಂದ್ರಜಿತ್ ನಿವಾಸದ ಮುಂದೆ ಗಲಾಟೆಗಳು ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆಯ ಕ್ರಮವಾಗಿ ಭದ್ರತೆ ಒದಗಿಸಿದ್ದಾರೆ. ಇಂದು ಕೂಡಾ ಇಂದ್ರಜಿತ್ ಸುದ್ದಿಗೋಷ್ಠಿ ನಡೆಸುವ ಸಾಧ್ಯತೆಯಿದೆ.
ಏತನ್ಮಧ್ಯೆ ದರ್ಶನ್ ಮೈಸೂರಿಗೆ ತೆರಳಿದ್ದು, ಜಿಲ್ಲಾಡಳಿತ ಅನುಮತಿ ನೀಡಿದಲ್ಲಿ ಚಾಮುಂಡಿ ಬೆಟ್ಟದಲ್ಲಿ ದೇವಿಯ ದರ್ಶನ ಪಡೆಯಲಿದ್ದಾರೆ. ಅಲ್ಲದೆ ಹಲ್ಲೆ ಆರೋಪ ಕುರಿತು ಸುದ್ದಿಗೋಷ್ಠಿ ನಡೆಸುವ ನಿರೀಕ್ಷೆಯಿದೆ.
ಯುಎನ್ಐ ಎಸ್ಎ 1149
More News

ಗಾನ ಕೋಗಿಲೆಯ ವಿದಾಯಕ್ಕೆ ಒಂದು ವರ್ಷ

25 Sep 2021 | 4:48 PM

 Sharesee more..

ಡಾರ್ಲಿಂಗ್ ಕೃಷ್ಣಾಗೆ ಮೇಘಾ ಶೆಟ್ಟಿ ಜೋಡಿ!

25 Sep 2021 | 3:59 PM

 Sharesee more..

"ಬಾಬು ಮಾರ್ಲಿ" ಮುಂದಿನ ತಿಂಗಳು ತೆರೆಗೆ

24 Sep 2021 | 4:45 PM

 Sharesee more..