Monday, Oct 18 2021 | Time 22:56 Hrs(IST)
Karnataka Share

ಪಾಲಿಕೆ ಫಲಿತಾಂಶ ಸಮಾಧಾನ ತಂದಿದೆ: ಡಿ. ಕೆ . ಶಿವಕುಮಾರ್

ಹುಬ್ಬಳ್ಳಿ, ಸೆ 12 (ಯುಎನ್ಐ) ಕಲಬುರಗಿ, ಹುಬ್ಬಳ್ಳಿ-ಧಾರವಾಡದ ಪಾಲಿಕೆ ಚುನಾವಣಾ ಫಲಿತಾಂಶ ಸಮಾಧಾನ ತಂದಿದೆ. ತರೀಕೆರೆ, ಬೆಳಗಾವಿಯಲ್ಲಿ ನಾವು ಮೊದಲ ಬಾರಿಗೆ ಚಿಹ್ನೆ ಮೇಲೆ ಸ್ಪರ್ಧೆ ಮಾಡಿದ್ದು ಎದೆ ಗುಂದುವ ಅಗತ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಮಗೆ ಸಂಖ್ಯೆ ಕಡಿಮೆ ಬಂದಿರಬಹುದು, ನಮ್ಮ ಪಕ್ಷದ ಐವರು ಬಂಡಾಯ ಸದಸ್ಯರು ಗೆದ್ದಿದ್ದು, ಎಲ್ಲ ಒಟ್ಟಾಗಿ ಸೇರಿಸಿದರೆ ಕಾಂಗ್ರೆಸ್ ವಿಚಾರ, ನಿಲುವು ಹೊಂದಿರುವ ಅಭ್ಯರ್ಥಿಗಳಿಗೆ ಹೆಚ್ಚಿನ ಬೆಂಬಲ ದೊರಕಿದೆ ಎಂದರು.

ಬಿಜೆಪಿ ಕಳೆದ 15 ವರ್ಷಗಳಿಂದ ಆಡಳಿತ ಮಾಡುತ್ತಿದೆ. ಹಾಲಿ, ಮಾಜಿ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಇಲ್ಲಿನವರೇ ಆಗಿದ್ದರೂ ಬಿಜೆಪಿ ನಿರೀಕ್ಷಿತ ಸ್ಥಾನ ಗಳಲ್ಲಿ ಸಾಧನೆ ಮಾಡಲು ಆಗಿಲ್ಲ ಎಂದು ಅಧಿಕಾರ ದುರುಪಯೋಗ ಮಾಡಿಕೊಂಡು ತಮಗೆ ಬೇಕಾದ ರೀತಿಯಲ್ಲಿ ಮೀಸಲಾತಿ ನಿಗದಿ ಮಾಡಿದ್ದಾರೆ ಆದರೂ ಉತ್ತಮ ಫಲಿತಾಂಶ ನಮಗೆ ಸಮಾಧಾನ ತಂದಿದೆ ಎಂದರು.
ಈ ಫಲಿತಾಂಶ ಬಿಜೆಪಿ ಸರ್ಕಾರದ ಆಡಳಿತದ ಪರ ಬಂದಿದೆಯಾ? ಅಥವಾ ವಿರೋಧವಾಗಿ ಬಂದಿದೆಯಾ? ಎಂಬುದನ್ನು ಜಗದೀಶ್ ಶೆಟ್ಟರ್ ಹೇಳಬೇಕೆಂದರು. ಬಳ್ಳಾರಿ, ತೀರ್ಥಹಳ್ಳಿ, ರಾಮನಗರದಲ್ಲಿ ಫಲಿತಾಂಶ ಬಂದು ನಾಲ್ಕು ತಿಂಗಳಾಗಿದ್ದರೂ ಜನರ ಕೈಗೆ ಅಧಿಕಾರದೊರಕಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.
ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ನಾಯಕತ್ವ ಬದಲಾವಣೆ ಮಾಡುತ್ತಿರುವುದು ಕೋವಿಡ್ ಪರಿಸ್ಥಿತಿ ನಿರ್ವಹಣೆಯಲ್ಲಿ ವೈಫಲ್ಯ, , ಭ್ರಷ್ಟಾಚಾರ ಹೆಚ್ಚಾಗಿ ಉತ್ತಮ ಆಡಳಿತ ನೀಡಲು ಸಾಧ್ಯವಾಗಿಲ್ಲ ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿ ಎಂದರು. ರಾಜ್ಯದಲ್ಲಿ ಕೋವಿಡ್ ನಿಂದ 4 ಲಕ್ಷಕ್ಕೂ ಹೆಚ್ಚು ಜನ ಸತ್ತಿದ್ದು, ಸಾವಿನ ನಿಖರ ಸಂಖ್ಯೆಯ ಬಗ್ಗೆ ಆಡಿಟ್ ಮಾಡಬೇಕು . ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೋವಿಡ್ ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಪಡಿಸಿ ವಿಧಾನ ಮಂಡಲ ಅಧಿವೇಶನದಲ್ಲಿ ಹೋರಾಟ ಮಾಡುವುದಾಗಿ ಶಿವಕುಮಾರ್ ಹೇಳಿದರು.
ಯುಎನ್ಐ ಕೆಎಸ್ಆರ್ 2132
More News
ಸರ್ಕಾರದಿಂದಲೇ ಮೈಶುಗರ್ ಪುನಶ್ಚೇತನ

ಸರ್ಕಾರದಿಂದಲೇ ಮೈಶುಗರ್ ಪುನಶ್ಚೇತನ

18 Oct 2021 | 9:46 PM

ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆಯನ್ನು ಗುತ್ತಿಗೆಗೆ ನೀಡುವ ಸಚಿವ ಸಂಪುಟದ ನಿರ್ಣಯವನ್ನು ತಾತ್ಕಾಲಿಕವಾಗಿ ತಡೆ ಹಿಡಿದು, ಸರ್ಕಾರವೇ ನಡೆಸುವ ಪ್ರಯತ್ನ ಮಾಡಲಾಗುವುದು. ಕಾರ್ಖಾನೆಯ ಪುನರುಜ್ಜೀವನಕ್ಕಾಗಿ ತಜ್ಞರ ಸಮಿತಿ ರಚನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ತಿಳಿಸಿದರು

 Sharesee more..
1 ರಿಂದ 5ನೇ ತರಗತಿಗಳ ಆರಂಭಕ್ಕೆ ಹಸಿರು ನಿಶಾನೆ

1 ರಿಂದ 5ನೇ ತರಗತಿಗಳ ಆರಂಭಕ್ಕೆ ಹಸಿರು ನಿಶಾನೆ

18 Oct 2021 | 9:42 PM

1 ರಿಂದ 5 ರವರೆಗಿನ ತರಗತಿಗಳನ್ನು ನಡೆಸುವ ಬಗ್ಗೆ ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ಹೊರಡಿಸಿದೆ. ಇವುಗಳು ಹಾರಿಗೊಳ್ಳುವಂತೆ ಗಮನಹರಿಸುವುದು ಆಯಾ ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರ ಜವಾಬ್ದಾರಿಯಾಗಿದೆ. ಕೋವಿಡ್ ನಿಯಂತ್ರಣ ಕುರಿತಂತೆ ಸಂಬಂಧಿಸಿದ ಸಂಸ್ಥೆ ಸೂಚಿಸಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

 Sharesee more..
ತಗ್ಗಿದ ಕೋವಿಡ್ ಪ್ರಕರಣ; ಮತ್ತಷ್ಟೂ ಚಟುವಟಿಕೆಗೆ ಅನುಮತಿ

ತಗ್ಗಿದ ಕೋವಿಡ್ ಪ್ರಕರಣ; ಮತ್ತಷ್ಟೂ ಚಟುವಟಿಕೆಗೆ ಅನುಮತಿ

18 Oct 2021 | 9:39 PM

ಪ್ರಯಾಣಿಕರನ್ನು ಸ್ವಯಂಚಾಲಿತ ಥರ್ಮಲ್ ಪರೀಕ್ಷಾ ಕ್ಯಾಮೆರಾಗಳ ಮುಖಾಂತರ ತಪಾಸಣೆಗೊಳಪಡಿಸುವುದು ಅಗತ್ಯ ಎಂದು ಹೇಳಲಾಗಿದೆ. ಇಂಗ್ಲೆಡ್ ನಿಂದ ಬರುವ ಪ್ರಯಾಣಿಕರಿಗೆ ಕ್ವಾರಂಟೈನ್ ಅನ್ವಯಿಸುವ ಕುರಿತು ಕೇಂದ್ರ ಸರಕಾರ ಸೂಚಿಸಿರುವ ಮಾರ್ಗಸೂಚಿ ಅನುಸರಣೆ ಮುಂದುವರಿಯುತ್ತದೆ. ಇದರ ಬಗ್ಗೆ ಹೆಚ್ಚಿನ ಸ್ಪಷ್ಟೀಕರಣವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡುತ್ತದೆ ಎಂದು ಹೇಳಲಾಗಿದೆ.

 Sharesee more..
ಭಾರತದ ಕಾನೂನು ವಿಶ್ವದಲ್ಲೇ ಶ್ರೇಷ್ಠ: ರಾಜ್ಯಪಾಲ

ಭಾರತದ ಕಾನೂನು ವಿಶ್ವದಲ್ಲೇ ಶ್ರೇಷ್ಠ: ರಾಜ್ಯಪಾಲ

18 Oct 2021 | 9:27 PM

ದೇಶದ ಸಂವಿಧಾನ ಹಾಗೂ ಕಾನೂನು ವ್ಯವಸ್ಥೆ ಜಗತ್ತಿನಲ್ಲಿಯೇ ಶ್ರೇಷ್ಠವಾದದು. ಇದನ್ನು ಶ್ರೇಷ್ಠವಾಗಿಸುವಲ್ಲಿ ನಮ್ಮೆಲ್ಲರ ಕೊಡುಗೆ ಮುಖ್ಯ. ರಾಜ್ಯಪಾಲನಾಗಿ ಅಧಿಕಾರ ಸ್ವೀಕರಿಸಿದ ನಂತರ ಎರಡನೇ ಬಾರಿಗೆ ಹುಬ್ಬಳ್ಳಿ ಧಾರವಾಡಕ್ಕೆ ಭೇಟಿ ನೀಡುತ್ತಿದ್ದೇನೆ‌. ಕರ್ನಾಟಕ, ಕೃಷಿ ಹಾಗೂ ಕಾನೂನು ವಿಶ್ವವಿದ್ಯಾಲಯಗಳು ರಾಷ್ಟ್ರ ಮಟ್ಟದ ಉನ್ನತ ಶಿಕ್ಷಣ ಕೇಂದ್ರಗಳಾಗಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

 Sharesee more..

ನಗರದಲ್ಲಿ ಮತ್ತೊಂದು ಬೆಂಕಿ ಅವಘಡ

18 Oct 2021 | 6:20 PM

 Sharesee more..