Friday, Oct 22 2021 | Time 05:13 Hrs(IST)
Sports Share

ಕೇನ್, ಜೇಸನ್ ಶೈನ್, ಸನ್ ವಿನ್

ದುಬೈ, ಸೆ.27 (ಯುಎನ್ಐ)- ಆರಂಭಿಕ ಆಟಗಾರ ಜೇಸನ್ ರಾಯ್ ಹಾಗೂ ನಾಯಕ ಕೇನ್ ವಿಲಿಯಮ್ಸನ್ ಅವರ ಭರ್ಜರಿ ಅರ್ಧಶತಕದ ಬಲದಿಂದ ಸನ್ ರೈಸರ್ಸ್ ಹೈದರಾಬಾದ್ ತಂಡ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 14ನೇ ಆವೃತ್ತಿಯ 40ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಏಳು ವಿಕೆಟ್ ಗಳಿಂದ ಮಣಿಸಿತು.

ಟಾಸ್ ಗೆದ್ದು ಬ್ಯಾಟ್ ಮಾಡಿದ ರಾಜಸ್ಥಾನ 20 ಓವರ್ ಗಳಲ್ಲಿ 5 ವಿಕೆಟ್‌ ಗೆ 164 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಸನ್ 18.3 ಓವರ್ ಗಳಲ್ಲಿ 3 ವಿಕೆಟ್ ಗೆ 167 ರನ್ ಸೇರಿಸಿ ಟೂರ್ನಿಯಲ್ಲಿ ಎರಡನೇ ಜಯ ದಾಖಲಿಸಿತು.

ರಾಜಸ್ಥಾನ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕ ಏವಾನ್ ಲೂಯಿಸ್ (6) ರನ್ ಕಲೆ ಹಾಕುವಲ್ಲಿ ವಿಫಲರಾದರು. ಎರಡನೇ ವಿಕೆಟ್ ಗೆ ಯಶಸ್ವಿ ಜೈಸ್ವಾಲ್ (36) ಹಾಗೂ ನಾಯಕ ಸಂಜು ಸ್ಯಾಮ್ಸನ್ ಜೋಡಿ ಭರ್ಜರಿ ಜೊತೆಯಾಟವನ್ನು ನೀಡಿತು. ಈ ಜೋಡಿ ತಂಡವನ್ನು ಆರಂಭಿಕ ಆಘಾತದಿಂದ ಮೇಲೆತ್ತುವಲ್ಲಿ ಸಫಲವಾಯಿತು. ಈ ಜೋಡಿ 45 ಎಸೆತಗಳಲ್ಲಿ 56 ರನ್ ಸೇರಿಸಿತು.

ಮಧ್ಯಮ ಕ್ರಮಾಂಕದಲ್ಲಿ ಲೈಮ್ ಲಿವಿಂಗ್ ಸ್ಟೋನ್ (4) ರನ್ ಕಲೆ ಹಾಕುವಲ್ಲಿ ವಿಫಲವಾಯಿತು.

ನಾಯಕ ಸಂಜು ಸ್ಯಾಮ್ಸನ್ ಹಾಗೂ ಮಹಿಪಾಲ್ ಲೋಮ್ರರ್ 55 ಎಸೆತಗಳಲ್ಲಿ 54 ರನ್ ಸೇರಿಸಿತು. ಸ್ಯಾಮ್ಸನ್ 7 ಬೌಂಡರಿ ಹಾಗೂ 3 ಸಿಕ್ಸರ್ ಸಹಾಯದಿಂದ 82 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಮಹಿಪಾಲ್ ಅಜೇಯ 29 ರನ್ ಸಿಡಿಸಿದರು.

ವೇಗಿ ಸಿದ್ಧಾರ್ಥ್ ಕೌಲ್ ಎರಡು, ಸಂದೀಪ್ ಶರ್ಮಾ, ಭುವನೇಶ್ವರ್ ಕುಮಾರ್ ಮತ್ತು ರಶೀದ್ ಖಾನ್ ತಲಾ ಒಂದು ವಿಕೆಟ್ ಕಬಳಿಸಿದರು.

ಗುರಿಯನ್ನು ಹಿಂಬಾಲಿಸಿದ ಸನ್ ತಂಡದ ಆರಂಭಿಕರಾದ ಜೇಸನ್ ರಾಯ್ ಹಾಗೂ ವೃದ್ಧಿಮನ್ ಸಹಾ ಜೋಡಿ ಮೊದಲ ವಿಕೆಟ್ ಗೆ 57 ರನ್ ಸೇರಿಸಿತು. ವೃದ್ಧಿಮನ್ ಸಹಾ 18 ರನ್ ಗಳಿಗೆ ವಿಕೆಟ್ ಒಪ್ಪಿಸಿದರು.

ಎರಡನೇ ವಿಕೆಟ್ ಗೆ ಕೇನ್ ಹಾಗೂ ರಾಯ್ ಜೋಡಿ ಭರ್ಜರಿ ಆಟದ ಪ್ರದರ್ಶನ ನೀಡಿತು. ಆರ್ ಆರ್ ಬೌಲರ್ ಗಳ ರಣ ತಂತ್ರವನ್ನು ಮೆಟ್ಟಿ ನಿಂತು ಬ್ಯಾಟ್ ಮಾಡಿದ ಜೋಡಿ ಅಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡಿಸಿತು. ಈ ಜೋಡಿ ಸಹ 57 ರನ್ ಗಳ ಕಾಣಿಕೆ ನೀಡಿತು. ರಾಯ್ 8 ಬೌಂಡರಿ, 1 ಸಿಕ್ಸರ್ ಸಹಾಯದಿಂದ 60 ರನ್ ಸೇರಿಸಿತು.

ಗೆಲುವಿನಲ್ಲಿ ಮಹತ್ವದ ಪಾತ್ರವನ್ನು ವಹಿಸಿದ ನಾಯಕ ಕೇನ್ ವಿಲಿಯಮ್ಸನ್ 41 ಎಸೆತಗಳಲ್ಲಿ ಅಜೇಯ 51 ರನ್ ಬಾರಿಸಿ ಅಬ್ಬರಿಸಿದರು. ಅಭಿಷೇಕ್ ಶರ್ಮಾ ಅಜೇಯ 21 ರನ್ ಬಾರಿಸಿದರು.

ಯುಎನ್ಐ ವಿಎನ್ಎಲ್ 2305
More News
ಭಾರತದಲ್ಲಿ ಗಲ್ಲಿ ಕ್ರಿಕೆಟಿಗ; ಓಮನ್ ನಲ್ಲಿ ಸ್ಟಾರ್ ಆಟಗಾರ!

ಭಾರತದಲ್ಲಿ ಗಲ್ಲಿ ಕ್ರಿಕೆಟಿಗ; ಓಮನ್ ನಲ್ಲಿ ಸ್ಟಾರ್ ಆಟಗಾರ!

21 Oct 2021 | 1:28 PM

ಭಾರತದ ಗಲ್ಲಿ ಗಲ್ಲಿಗಳಲ್ಲಿ ಆಡುತ್ತಿದ್ದ ಹುಡುಗ ಈಗ ಓಮನ್ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ. ಟಿ-20 ವಿಶ್ವಕಪ್ ನ ಅರ್ಹತಾ ಪಂದ್ಯಗಳಲ್ಲಿ ಆಡುತ್ತಿರುವ ಜತೀಂದರ್ ಸಿಂಗ್, ಓಮನ್ ತಂಡದ ಸ್ಟಾರ್ ಆಟಗಾರನಾಗಿದ್ದಾನೆ.

 Sharesee more..
ದ್ರಾವಿಡ್ ಆಯ್ಕೆಗೂ ಮುನ್ನ ಇಬ್ಬರು ಕ್ರಿಕೆಟ್ ದಿಗ್ಗಜರ ಜತೆ ಬಿಸಿಸಿಐ ಸಂಪರ್ಕ!

ದ್ರಾವಿಡ್ ಆಯ್ಕೆಗೂ ಮುನ್ನ ಇಬ್ಬರು ಕ್ರಿಕೆಟ್ ದಿಗ್ಗಜರ ಜತೆ ಬಿಸಿಸಿಐ ಸಂಪರ್ಕ!

21 Oct 2021 | 11:07 AM

ಭಾರತೀಯ ಕ್ರಿಕೆಟ್ ನ ಗೋಡೆ ಎಂದೇ ಕರೆಯಲ್ಪಡುವ ರಾಹುಲ್ ದ್ರಾವಿಡ್ ಬಿಸಿಸಿಐನಲ್ಲಿ ಹೊಸ ಜವಾಬ್ದಾರಿ ಹೊರುವುದು ಫಿಕ್ಸ್ ಆಗಿದೆ. ಭಾರತೀಯ ಕ್ರಿಕೆಟ್ ತಂಡದ ನೂತನ ಕೋಚ್ ಆಗಲಿರುವ ರಾಹುಲ್ ಅವರ ಹೆಸರು ಔಪಚಾರಿಕವಾಗಿ ಘೋಷಣೆ ಮಾಡೋದು ಮಾತ್ರ ಬಾಕಿ ಉಳಿದಿದೆ.

 Sharesee more..
ಟಿ-20 ವಿಶ್ವಕಪ್; ಸೂಪರ್ 12ರ ಘಟ್ಟಕ್ಕೆ ಜಿಗಿದ ಶ್ರೀಲಂಕಾ

ಟಿ-20 ವಿಶ್ವಕಪ್; ಸೂಪರ್ 12ರ ಘಟ್ಟಕ್ಕೆ ಜಿಗಿದ ಶ್ರೀಲಂಕಾ

21 Oct 2021 | 10:32 AM

ಐರ್ಲೆಂಡ್ ವಿರುದ್ಧ ಸಿಂಹಳೀಯರು ಸುಲಭ ಗೆಲುವು ದಾಖಲಿಸಿದ್ದಾರೆ. ಎರಡೂ ಪಂದ್ಯಗಳಲ್ಲಿ ವಿಜಯ ಸಾಧಿಸುವುದರ ಮೂಲಕ ಶ್ರೀಲಂಕಾ ಸೂಪರ್ 12 ಘಟ್ಟಕ್ಕೆ ಜಿಗಿಯಿತು.

 Sharesee more..
ಟಿ-20 ವಿಶ್ವಕಪ್; ಬೌಲಿಂಗ್ ಮಾಡಿದ ವಿರಾಟ್ ಕೊಹ್ಲಿ!

ಟಿ-20 ವಿಶ್ವಕಪ್; ಬೌಲಿಂಗ್ ಮಾಡಿದ ವಿರಾಟ್ ಕೊಹ್ಲಿ!

20 Oct 2021 | 7:55 PM

ದುಬೈ ಕ್ರಿಕೆಟ್ ಗ್ರೌಂಡ್ ನಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಅಚ್ಚರಿ ಕಾಣಿಸಿತು. ಅದುವೇ ವಿರಾಟ್ ಕೊಹ್ಲಿ ಬೌಲಿಂಗ್ ಮಾಡಿದ್ದು.

 Sharesee more..