Monday, Nov 29 2021 | Time 07:25 Hrs(IST)
Sports Share

ಕೀನ್ಯಾ ಅಥ್ಲೀಟ್‌ ಸಂಶಯಾಸ್ಪದ ಸಾವು

ನೈರೋಬಿ, ಅ 14(ಯುಎನ್‌ ಐ) ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ (2017, 2019) 10,000 ಮೀಟರ್ ಓಟದಲ್ಲಿ ಎರಡು ಕಂಚಿನ ಪದಕ ಗೆದ್ದಿದ್ದ ಕೀನ್ಯಾದ ಮಹಿಳಾ ಓಟಗಾರ್ತಿ ಆಗ್ನೆಸ್ ಟೆರೋಪ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.
25 ವರ್ಷದ ಆಗ್ನೆಸ್, ತಮ್ಮ ಮನೆಯಲ್ಲಿ ಮೃತಪಟ್ಟಿದ್ದಾರೆ. ಆದರೆ, ಆಕೆಯ ಸಾವಿಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ ಎಂದು ಕೀನ್ಯಾ ಟ್ರ್ಯಾಕ್ ಫೆಡರೇಶನ್ ಹೇಳಿದೆ.
ಆಗ್ನೆಸ್ ಮನೆಯಲ್ಲಿಯೇ ನಿಗೂಢವಾಗಿ ಸಾವನ್ನಪ್ಪಿರುವ ಹಿನ್ನಲೆಯಲ್ಲಿ ಕಾನ್ಫೆಡರೇಶನ್ ಆಫ್ ಟ್ರ್ಯಾಕ್ಸ್ ... ಆಕೆಯ ಪತಿಯ ಬಗ್ಗೆ ಸಂಶಯ ವ್ಯಕ್ತಪಡಿಸಿದೆ. ಕಳೆದ ಆಗಸ್ಟ್‌ನಲ್ಲಿ ಕೊನೆಗೊಂಡ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಅವರು 5000 ಮೀಟರ್ ಓಟದಲ್ಲಿ ನಾಲ್ಕನೇ ಸ್ಥಾನ ಪಡೆದ್ದರು.
ಯುಎನ್‌ ಐ ಕೆವಿಆರ್‌ 7.44
More News
ಜೂನಿಯರ್ ಹಾಕಿ ವಿಶ್ವಕಪ್: ಭಾರತಕ್ಕೆ 8-2 ಅಂತರದಲ್ಲಿ ಪೋಲೆಂಡ್ ವಿರುದ್ಧ ಗೆಲುವು – ಕ್ವಾರ್ಟರ್ ಫೈನಲ್ ಗೆ ಲಗ್ಗೆ ಇಟ್ಟ ಇಂಡಿಯಾ

ಜೂನಿಯರ್ ಹಾಕಿ ವಿಶ್ವಕಪ್: ಭಾರತಕ್ಕೆ 8-2 ಅಂತರದಲ್ಲಿ ಪೋಲೆಂಡ್ ವಿರುದ್ಧ ಗೆಲುವು – ಕ್ವಾರ್ಟರ್ ಫೈನಲ್ ಗೆ ಲಗ್ಗೆ ಇಟ್ಟ ಇಂಡಿಯಾ

28 Nov 2021 | 11:12 AM

ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಜೂನಿಯರ್ ಹಾಕಿ ವಿಶ್ವಕಪ್‌ನಲ್ಲಿ ಭಾರತ ಮೂರನೇ ಪಂದ್ಯದಲ್ಲಿ ಪೋಲೆಂಡ್ ಅನ್ನು 8-2 ಗೋಲುಗಳಿಂದ ಸೋಲಿಸಿ ಕ್ವಾರ್ಟರ್ ಫೈನಲ್‌ಗೆ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ.

 Sharesee more..
ಅಪಾಯದಲ್ಲಿ ಭಾರತ ಕ್ರಿಕೆಟ್ ತಂಡದ ದಕ್ಷಿಣ ಆಫ್ರಿಕಾ ಪ್ರವಾಸ!

ಅಪಾಯದಲ್ಲಿ ಭಾರತ ಕ್ರಿಕೆಟ್ ತಂಡದ ದಕ್ಷಿಣ ಆಫ್ರಿಕಾ ಪ್ರವಾಸ!

28 Nov 2021 | 10:23 AM

ದಕ್ಷಿಣ ಆಫ್ರಿಕಾದಲ್ಲಿ ಕರೊನಾ ಹೊಸ ತಳಿ ಓಮಿಕ್ರಾನ್ ಭೀತಿ ಸೃಷ್ಟಿ ಮಾಡಿದೆ. ಹಾಂಗ್ ಕಾಂಗ್, ದಕ್ಷಿಣ ಆಫ್ರಿಕಾ ಮತ್ತು ಬೋಟ್ಸ್ವಾನಾದಲ್ಲಿ 50 ಸೋಂಕಿತ ಪ್ರಕರಣಗಳು ಕಂಡುಬಂದಿವೆ. ಇಲ್ಲಿಯವರೆಗೆ ಭಾರತದಲ್ಲಿ ಈ ಹೊಸ ರೂಪಾಂತರಿಯ ಯಾವುದೇ ಪ್ರಕರಣ ಕಂಡುಬಂದಿಲ್ಲ. ಇದೆಲ್ಲದರ ನಡುವೆ ಮುಂದಿನ ತಿಂಗಳು ಭಾರತ ಕ್ರಿಕೆಟ್ ತಂಡದ ದಕ್ಷಿಣ ಆಫ್ರಿಕಾ ಪ್ರವಾಸ ಆರಂಭವಾಗುತ್ತಿದೆ.

 Sharesee more..
ಓಮಿಕ್ರಾನ್ ಎಫೆಕ್ಟ್ ; ಮಹಿಳಾ ವಿಶ್ವಕಪ್ ನ ಅರ್ಹತಾ ಪಂದ್ಯಗಳು ರದ್ದು!

ಓಮಿಕ್ರಾನ್ ಎಫೆಕ್ಟ್ ; ಮಹಿಳಾ ವಿಶ್ವಕಪ್ ನ ಅರ್ಹತಾ ಪಂದ್ಯಗಳು ರದ್ದು!

27 Nov 2021 | 6:17 PM

ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕರೊನಾ ಹೊಸ ರೂಪಾಂತರಿಯಿಂದಾಗಿ ಜಿಂಬಾಬ್ವೆಯಲ್ಲಿ ನಡೆಯಬೇಕಿದ್ದ ಮಹಿಳಾ ಕ್ರಿಕೆಟ್ ವಿಶ್ವಕಪ್ ನ ಅರ್ಹತಾ ಪಂದ್ಯಗಳನ್ನು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ರದ್ದುಪಡಿಸಿದೆ.

 Sharesee more..

ಬರೋಡ ತಂಡದ ನಾಯಕತ್ವ ತ್ಯಜಿಸಿದ ಕೃನಾಲ್ ಪಾಂಡ್ಯ

27 Nov 2021 | 3:06 PM

 Sharesee more..