Friday, Oct 22 2021 | Time 05:52 Hrs(IST)
Special Share

ನಾಳೆ ಸಂಸದ್‌ ಟಿವಿಗೆ ಪ್ರಧಾನಿ ಮೋದಿ ಚಾಲನೆ

ನವದೆಹಲಿ, ಸೆ 14(ಯುಎನ್‌ ಐ) ರಾಜ್ಯಸಭೆಯ ಸಭಾಪತಿಗಳೂ ಆಗಿರುವ ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ ಹಾಗೂ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ನಾಳೆ ಸಂಜೆ ಸಂಸತ್‌ ಭವನದ ಪ್ರಧಾನ ಸಮಿತಿ ಕೊಠಡಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸಂಸದ್‌ ಟಿವಿಗೆ ಜಂಟಿಯಾಗಿ ಚಾಲನೆ ನೀಡಲಿದ್ದಾರೆ.
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದಂದೇ ಸಂಸದ್‌ಟಿವಿಗೆ ಚಾಲನೆ ನೀಡುತ್ತಿರುವುದು ಕಾಕತಾಳೀಯವಾಗಿದೆ.
ಕಳೆದ ಫೆಬ್ರವರಿಯಲ್ಲಿ ಲೋಕಸಭೆ ಟಿವಿ, ರಾಜ್ಯ ಸಭೆ ಟಿವಿಯನ್ನು ವಿಲೀನ ಗೊಳಿಸಲು ನಿರ್ಧರಿಸಿ, ಮಾರ್ಚ್‌ನಲ್ಲಿ ಸಂಸದ್‌ ಟಿವಿಗೆ ಸಿಇಓ ನೇಮಕಗೊಳಿಸಲಾಗಿತ್ತು.

ಸಂಸದ್ ಟಿವಿಯಲ್ಲಿ ಪ್ರಾಥಮಿಕವಾಗಿ 4 ವಿಭಾಗಗಳಲ್ಲಿ ಕಾರ್ಯಕ್ರಮಗಳಿರಲಿವೆ. ಸಂಸತ್‌ ಹಾಗೂ ಪ್ರಜಾಪ್ರಭುತ್ವ ಸಂಸ್ಥೆಗಳ ಕಾರ್ಯನಿರ್ವಹಣೆ, ಆಡಳಿತ ಹಾಗೂ ಯೋಜನೆಗಳ ಅನುಷ್ಠಾನ, ಭಾರತದ ಇತಿಹಾಸ ಹಾಗೂ ಸಂಸ್ಕೃತಿ, ಸಮಕಾಲೀನ ಸ್ವರೂಪದ ಸಮಸ್ಯೆಗಳ ಕಾರ್ಯಕ್ರಮಗಳು ಬಿತ್ತರಗೊಳ್ಳಲಿವೆ.
ಯುಎನ್‌ ಐ ಕೆವಿಆರ್‌ 1734
More News
ಭಾರತದಲ್ಲಿ ಗಲ್ಲಿ ಕ್ರಿಕೆಟಿಗ; ಓಮನ್ ನಲ್ಲಿ ಸ್ಟಾರ್ ಆಟಗಾರ!

ಭಾರತದಲ್ಲಿ ಗಲ್ಲಿ ಕ್ರಿಕೆಟಿಗ; ಓಮನ್ ನಲ್ಲಿ ಸ್ಟಾರ್ ಆಟಗಾರ!

21 Oct 2021 | 1:28 PM

ಭಾರತದ ಗಲ್ಲಿ ಗಲ್ಲಿಗಳಲ್ಲಿ ಆಡುತ್ತಿದ್ದ ಹುಡುಗ ಈಗ ಓಮನ್ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ. ಟಿ-20 ವಿಶ್ವಕಪ್ ನ ಅರ್ಹತಾ ಪಂದ್ಯಗಳಲ್ಲಿ ಆಡುತ್ತಿರುವ ಜತೀಂದರ್ ಸಿಂಗ್, ಓಮನ್ ತಂಡದ ಸ್ಟಾರ್ ಆಟಗಾರನಾಗಿದ್ದಾನೆ.

 Sharesee more..