Friday, Oct 22 2021 | Time 04:54 Hrs(IST)
Sports Share

ಕಿಂಗ್ಸ್ ಬಲೆಗೆ ಬಿದ್ದ ಸನ್, ಬಿಷ್ಣೋಯಿಗೆ 3 ವಿಕೆಟ್

ಶಾರ್ಜಾ, ಸೆ.25 (ಯುಎನ್ಐ)- ಸ್ಪಿನ್ ಬೌಲರ್ ರವಿ ಬಿಷ್ಣೋಯಿ (24ಕ್ಕೆ 3) ಹಾಗೂ ಮೊಹಮ್ಮದ್ ಶಮಿ (14ಕ್ಕೆ 2) ಇವರುಗಳ ಭರ್ಜರಿ ಬೌಲಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ ಐದು ರನ್ ಗಳಿಂದ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿ, ರೋಚಕ ಜಯ ಸಾಧಿಸಿದೆ.

ಮೊದಲು ಬ್ಯಾಟ್ ಮಾಡಿದ ಪಂಜಾಬ್ 20 ಓವರ್ ಗಳಲ್ಲಿ 7 ವಿಕೆಟ್ ಗೆ 125 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಸನ್ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 120 ರನ್ ಕಲೆ ಹಾಕಿ ಸೋಲು ಕಂಡಿತು.

ಮೊದಲು ಬ್ಯಾಟ್ ಮಾಡಿದ ಪಂಜಾಬ್ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕ ಮಯಾಂಕ್ ರನ್ ಕಲೆ ಹಾಕುವಲ್ಲಿ ವಿಫಲರಾದರು. ಸ್ಟಾರ್ ಆಟಗಾರರಾದ ಕೆ.ಎಲ್ ರಾಹುಲ್ (21) ಹಾಗೂ ಕ್ರಿಸ್ ಗೇಲ್ (14) ದೊಡ್ಡ ರನ್ ಕಲೆ ಹಾಕುವಲ್ಲಿ ಎಡವಿದರು. ಮಧ್ಯಮ ಕ್ರಮಾಂಕದಲ್ಲಿ ಐಡೇನ್ ಮಾರ್ಕನ್ ಸೊಗಸಾದ ಬ್ಯಾಟಿಂಗ್ ನಡೆಸಿದರು. ಇವರು 32 ಎಸೆತಗಳಲ್ಲಿ 2 ಬೌಂಡರಿ ಸೇರಿದಂತೆ 27 ರನ್ ಬಾರಿಸಿದರು.

ಉಳಿದಂತೆ ನಿಕೋಲಸ್ ಪೋರನ್ (8), ದೀಪಕ್ ಹೂಡಾ (13), ಹರ್ಪ್ರೀತ್ ಬ್ರಾರ್ (ಅಜೇಯ 18) ನಾತನ್ ಇಲ್ಲಿಸ್ (12) ರನ್ ಕಲೆ ಹಾಕಿ ಮೊತ್ತವನ್ನು ಹಿಗ್ಗಿಸಿದರು.

ಸನ್ ಪರ ಆಲ್ ರೌಂಡರ್ ಜೇಸನ್ ಹೋಲ್ಡರ್ ಮೂರು ವಿಕೆಟ್ ಕಬಳಿಸಿದರೆ, ಸಂದೀಪ್ ಶರ್ಮಾ, ಭುವನೇಶ್ವರ್ ಕುಮಾರ್, ರಶೀದ್ ಖಾನ್,ಅಬ್ದುಲ್ ಸಮದ್ ತಲಾ ಒಂದು ವಿಕೆಟ್ ಕಬಳಿಸಿದರು.

ಗುರಿಯನ್ನು ಹಿಂಬಾಲಿಸಿದ ಸನ್ ತಂಡದ ಸ್ಟಾರ್ ಆಟಗಾರ ಡೇವಿಡ್ ವಾರ್ನರ್ ಮಹತ್ವದ ಪಂದ್ಯದಲ್ಲಿ ರನ್ ಕಲೆ ಹಾಕುವಲ್ಲಿ ಎಡವಿದರು. ನಾಯಕ ಕೇನ್ ವಿಲಿಯಮ್ಸನ್ (1), ಕನ್ನಡಿಗ ಮನೀಶ್ ಪಾಂಡೆ (12), ಕೇದಾರ್ ಜಾದವ್ (12) ಪಂಜಾಬ್ ಬೌಲರ್ ಗಳ ತಂತ್ರಕ್ಕೆ ಪ್ರತ್ಯುತ್ತರ ನೀಡಲಿಲ್ಲ.

ಆಲ್ ರೌಂಡರ್ ಜೇಸನ್ ಹೋಲ್ಡರ್ ಅವರು ಮನಮೋಹಕ ಬ್ಯಾಟಿಂಗ್ ನಡೆಸಿದರು. ಇವರು 29 ಎಸೆತಗಳಲ್ಲಿ 5 ಸಿಕ್ಸರ್ ಸಹಾಯದಿಂದ 47 ರನ್ ಬಾರಿಸಿ ಸೋಲಿನಲ್ಲಿ ಮಿಂಚಿದರು.
ಪಂಜಾಬ್ ಪರ ಮೊಹಮ್ಮದ್ ಶಮಿ 14 ರನ್ ನೀಡಿ ಎರಡು ವಿಕೆಟ್ ಪಡೆದರು. ಸ್ಪಿನ್ ಬೌಲರ್ ರವಿ ಬಿಷ್ಣೋಯಿ 24 ರನ್ ನೀಡಿ ಮೂರು ವಿಕೆಟ್ ಕಬಳಿಸಿದರು.

ಯುಎನ್ಐ ವಿಎನ್ಎಲ್ 2313
More News
ಭಾರತದಲ್ಲಿ ಗಲ್ಲಿ ಕ್ರಿಕೆಟಿಗ; ಓಮನ್ ನಲ್ಲಿ ಸ್ಟಾರ್ ಆಟಗಾರ!

ಭಾರತದಲ್ಲಿ ಗಲ್ಲಿ ಕ್ರಿಕೆಟಿಗ; ಓಮನ್ ನಲ್ಲಿ ಸ್ಟಾರ್ ಆಟಗಾರ!

21 Oct 2021 | 1:28 PM

ಭಾರತದ ಗಲ್ಲಿ ಗಲ್ಲಿಗಳಲ್ಲಿ ಆಡುತ್ತಿದ್ದ ಹುಡುಗ ಈಗ ಓಮನ್ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ. ಟಿ-20 ವಿಶ್ವಕಪ್ ನ ಅರ್ಹತಾ ಪಂದ್ಯಗಳಲ್ಲಿ ಆಡುತ್ತಿರುವ ಜತೀಂದರ್ ಸಿಂಗ್, ಓಮನ್ ತಂಡದ ಸ್ಟಾರ್ ಆಟಗಾರನಾಗಿದ್ದಾನೆ.

 Sharesee more..
ದ್ರಾವಿಡ್ ಆಯ್ಕೆಗೂ ಮುನ್ನ ಇಬ್ಬರು ಕ್ರಿಕೆಟ್ ದಿಗ್ಗಜರ ಜತೆ ಬಿಸಿಸಿಐ ಸಂಪರ್ಕ!

ದ್ರಾವಿಡ್ ಆಯ್ಕೆಗೂ ಮುನ್ನ ಇಬ್ಬರು ಕ್ರಿಕೆಟ್ ದಿಗ್ಗಜರ ಜತೆ ಬಿಸಿಸಿಐ ಸಂಪರ್ಕ!

21 Oct 2021 | 11:07 AM

ಭಾರತೀಯ ಕ್ರಿಕೆಟ್ ನ ಗೋಡೆ ಎಂದೇ ಕರೆಯಲ್ಪಡುವ ರಾಹುಲ್ ದ್ರಾವಿಡ್ ಬಿಸಿಸಿಐನಲ್ಲಿ ಹೊಸ ಜವಾಬ್ದಾರಿ ಹೊರುವುದು ಫಿಕ್ಸ್ ಆಗಿದೆ. ಭಾರತೀಯ ಕ್ರಿಕೆಟ್ ತಂಡದ ನೂತನ ಕೋಚ್ ಆಗಲಿರುವ ರಾಹುಲ್ ಅವರ ಹೆಸರು ಔಪಚಾರಿಕವಾಗಿ ಘೋಷಣೆ ಮಾಡೋದು ಮಾತ್ರ ಬಾಕಿ ಉಳಿದಿದೆ.

 Sharesee more..
ಟಿ-20 ವಿಶ್ವಕಪ್; ಸೂಪರ್ 12ರ ಘಟ್ಟಕ್ಕೆ ಜಿಗಿದ ಶ್ರೀಲಂಕಾ

ಟಿ-20 ವಿಶ್ವಕಪ್; ಸೂಪರ್ 12ರ ಘಟ್ಟಕ್ಕೆ ಜಿಗಿದ ಶ್ರೀಲಂಕಾ

21 Oct 2021 | 10:32 AM

ಐರ್ಲೆಂಡ್ ವಿರುದ್ಧ ಸಿಂಹಳೀಯರು ಸುಲಭ ಗೆಲುವು ದಾಖಲಿಸಿದ್ದಾರೆ. ಎರಡೂ ಪಂದ್ಯಗಳಲ್ಲಿ ವಿಜಯ ಸಾಧಿಸುವುದರ ಮೂಲಕ ಶ್ರೀಲಂಕಾ ಸೂಪರ್ 12 ಘಟ್ಟಕ್ಕೆ ಜಿಗಿಯಿತು.

 Sharesee more..
ಟಿ-20 ವಿಶ್ವಕಪ್; ಬೌಲಿಂಗ್ ಮಾಡಿದ ವಿರಾಟ್ ಕೊಹ್ಲಿ!

ಟಿ-20 ವಿಶ್ವಕಪ್; ಬೌಲಿಂಗ್ ಮಾಡಿದ ವಿರಾಟ್ ಕೊಹ್ಲಿ!

20 Oct 2021 | 7:55 PM

ದುಬೈ ಕ್ರಿಕೆಟ್ ಗ್ರೌಂಡ್ ನಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಅಚ್ಚರಿ ಕಾಣಿಸಿತು. ಅದುವೇ ವಿರಾಟ್ ಕೊಹ್ಲಿ ಬೌಲಿಂಗ್ ಮಾಡಿದ್ದು.

 Sharesee more..