Wednesday, Oct 20 2021 | Time 15:24 Hrs(IST)
Special Share

ನಾಳೆ ಪ್ರಯಾಗ್‌ರಾಜ್‌ಗೆ ರಾಷ್ಟ್ರಪತಿ ಕೋವಿಂದ್‌ ಭೇಟಿ

ಪ್ರಯಾಗ್‌ರಾಜ್‌, ಸೆ 10 (ಯುಎನ್ಐ) ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಶನಿವಾರ ಸಂಗಮ್ ನಗರಕ್ಕೆ ಭೇಟಿ ನೀಡಲಿದ್ದು, ಅಲ್ಲಿ ಅಲಹಾಬಾದ್ ಹೈಕೋರ್ಟ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಸ್ಥಳೀಯ ಪ್ರಾಧಿಕಾರದ ಪ್ರಕಾರ, ಕೋವಿಂದ್‌ ಅವರು ಸುಮಾರು ಆರು ಗಂಟೆಗಳ ಕಾಲ ಪ್ರಯಾಗರಾಜ್‌ನಲ್ಲಿ ಉಳಿಯಲಿದ್ದಾರೆ. ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್.ವಿ.ರಮಣ ಮತ್ತು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ರಾಷ್ಟ್ರಪತಿಗಳು ತಮ್ಮ ವಿಶೇಷ ವಿಮಾನದಲ್ಲಿ 10.30 ಕ್ಕೆ ಬಮ್ರೌಲಿ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಾರೆ ಮತ್ತು ಅಲ್ಲಿಂದ ಅವರು ಹೆಲಿಕಾಪ್ಟರ್ ಮೂಲಕ ಪೊಲೊ ಮೈದಾನವನ್ನು ತಲುಪಲಿದ್ದಾರೆ.
ಅವರು ಮೊದಲು ಪೊಲೊ ಮೈದಾನದಿಂದ ರಸ್ತೆಯ ಮೂಲಕ ಸರ್ಕ್ಯೂಟ್ ಹೌಸ್‌ಗೆ ಹೋಗುತ್ತಾರೆ. ಅಲ್ಲಿ ಕೆಲಕಾಲ ತಂಗಿದ ನಂತರ, ಅವರು ನೇರವಾಗಿ ಹೈಕೋರ್ಟ್‌ಗೆ ತಲುಪಲಿದ್ದಾರೆ.
ಯುಪಿ ಗವರ್ನರ್ ಆನಂದಿಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ರಾಜ್ಯ ಕಾನೂನು ಸಚಿವ ಬ್ರಿಜೇಶ್ ಪಾಠಕ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ರಾಷ್ಟ್ರಪತಿ ಕೋವಿಂದ್ ಅವರು ಬಹುಮಟ್ಟದ ಪಾರ್ಕಿಂಗ್ ಮತ್ತು ರಾಜ್ಯ ಸರ್ಕಾರದಿಂದ ಅನುಮೋದನೆ ಪಡೆದ ವಕೀಲರ ಪರಿಷತ್‌, ಗ್ರಂಥಾಲಯ ಮತ್ತು ಸಭಾಂಗಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಇದರಲ್ಲಿ, ವಕೀಲರಿಗಾಗಿ ಸುಮಾರು 2600 ಚೇಂಬರ್‌ಗಳನ್ನು ನಿರ್ಮಿಸಲಾಗುವುದು, ಇದಕ್ಕಾಗಿ ರಾಜ್ಯ ಸರ್ಕಾರವು 600 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.
ಹೈಕೋರ್ಟ್ ವಕೀಲರ ಸಂಘದ ಗ್ರಂಥಾಲಯ ಸಭಾಂಗಣಕ್ಕೂ ರಾಷ್ಟ್ರಪತಿ ಭೇಟಿ ನೀಡಲಿದ್ದಾರೆ. ಅದೇ ಸಮಯದಲ್ಲಿ, ವಕೀಲ ಎಬಿ ಸರನ್ ಅವರ ತೈಲ ವರ್ಣಚಿತ್ರವನ್ನು ಸಹ ಸಮರ್ಪಿಸಲಾಗುವುದು.
ಈ ಸಂದರ್ಭದಲ್ಲಿ, ಜಾಲ್ವಾ ಪ್ರದೇಶದಲ್ಲಿ ನಿರ್ಮಿಸಲಿರುವ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಶಿಲಾನ್ಯಾಸವನ್ನು ಕೂಡ ನೆರವೇರಿಸಲಾಗುತ್ತದೆ.
ಕಾರ್ಯಕ್ರಮದ ಹಿನ್ನೆಲೆಯಲ್ಲಿ ಗಾಳಿಪಟ ಮತ್ತು ಡ್ರೋನ್‌ಗಳ ಹಾರಾಟವನ್ನು ಹೈಕೋರ್ಟ್, ಸರ್ಕ್ಯೂಟ್ ಹೌಸ್, ಬಮ್ರೌಲಿ, ಪೊಲೊಗ್ರೌಂಡ್ ಪ್ರದೇಶದಲ್ಲಿ ಮತ್ತು ಸುತ್ತಮುತ್ತ ನಿಷೇಧಿಸಲಾಗಿದೆ.
ಯುಎನ್ಐ ಎಸ್ಎಚ್ 1836