Wednesday, Dec 8 2021 | Time 23:43 Hrs(IST)
Entertainment Share

ಹಿರಿಯ ನಟಿ ಮಿನೂ ಮುಮ್ತಾಜ್ ನಿಧನ

ಹಿರಿಯ ನಟಿ ಮಿನೂ ಮುಮ್ತಾಜ್ ನಿಧನ
ಮುಂಬೈ, ಅ. 23 (ಯುಎನ್ಐ) ಬಾಲಿವುಡ್ ಹಿರಿಯ ನಟಿ, ದಿವಂಗತ ಹಾಸ್ಯನಟ ಮೆಹಮೂದ್ ಅವರ ಸಹೋದರಿ ಮಿನೂ ಮುಮ್ತಾಜ್ ಶನಿವಾರ ಮುಂಜಾನೆ ಕೆನಡಾದಲ್ಲಿ ನಿಧನರಾದರು. ಅವರಿಗೆ 79 ವರ್ಷ ವಯಸ್ಸಾಗಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

'ರೇಷ್ಮಿ ಸಲ್ವಾರ್ವಾಲಿ ಹುಡುಗಿ' ಎಂದೇ ಖ್ಯಾತರಾಗಿದ್ದದ ಮಿನೂ, ಅವರ ನಿಜವಾದ ಹೆಸರು ಮಾಲಿಕುನಿಸಾ, ನೃತ್ಯಗಾರ್ತಿಯಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿ ವಿವಿಧ ವೇದಿಕೆ ಕಾರ್ಯಕ್ರಮಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದರು.
ಒ ಪಿ ನಯ್ಯರ್ ಅವರ ಸೂಪರ್ ಹಿಟ್ ಡಾನ್ಸ್ ಡ್ಯುಯೆಟ್ ‘ರೇಶ್ಮಿ ಸಲ್ವಾರ್ ಕುರ್ತಾ ಜಾಲಿ ಕಾ. . ‘ಹಾಡಿಗೆ ಆಶಾ ಬೋಂಸ್ಲೆ, ಶಂಶಾದ್ ಬೇಗಂ ದನಿಯಾದರೆ, ಮಿನೂ ಹಾಗೂ 2020ರಲ್ಲಿ ವಿಧಿವಶರಾದ ಜೈಬುನ್ನಿಸಾ ಖಾನ್ ಅಲಿಯಾಸ್ ಕುಂಕುಮ್ ಹೆಜ್ಜೆ ಹಾಕಿದ್ದರು.

ಮಿನೂ ಮುಮ್ತಾಜ್ ಅವರು ಕೆನಡಾದಲ್ಲಿ ನಿಧನರಾಗಿದ್ದಾರೆ. ಅವರ ಅಂತಿಮ ವಿಧಿಗಳನ್ನು ಅಲ್ಲಿಯೇ ನಡೆಸಲಾಗುವುದು ಎಂದು ಆಕೆಯ ಸಹೋದರ ಮತ್ತು ಮಾಜಿ ನಟ ಅನ್ವರ್ ಅಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

"ಸಾಖಿಯಾ ಆಜ್ ಮುಝೆ ನೀಂದ್ ನಹಿನ್ ಆಯೇಗಿ", "ಜಾ ರೇ, ಜಾ ರೇ" ಮತ್ತು "ಮುಖ್ಯ ತುಮ್ಹಿಸೆ ಪುಚ್ಛತಿ ಹೂಂ, ತುಮ್ಸೆ ಪ್ಯಾರ್ ಕ್ಯುನ್ ಹೈ" ನಂತಹ ಜನಪ್ರಿಯ ಹಾಡುಗಳೊಂದಿಗೆ ಮಿನೂ ಕ್ಯಾಬರೆ ಸೇರಿದಂತೆ ವಿವಿಧ ಬಗೆಯ ಹಾಡುಗಳಿಗೆ ಲೀಲಾಜಾಲವಾಗಿ ನರ್ತಿಸುತ್ತಿದ್ದರು.

ಕಪ್ಪು-ಬಿಳುಪು ಯುಗದ ಬಹುಪಾಲು ಅಗ್ರ ತಾರೆಯರೊಂದಿಗೆ ಕೆಲಸ ಮಾಡಿದ ನಂತರ ಆರಂಭಿಕದ ಬಣ್ಣದ ಚಿತ್ರಗಳಲ್ಲಿ ಅಶೋಕ್ ಕುಮಾರ್, ದಿಲೀಪ್ ಕುಮಾರ್, ದೇವ್ ಆನಂದ್, ಗುರು ದತ್, ಕಿಶೋರ್ ಕುಮಾರ್, ರಾಜ್ ಕಪೂರ್, ರಾಜ್ ಕುಮಾರ್, ಬಾಲರಾಜ್ ಸಾಹ್ನಿ, ಪ್ರದೀಪ್ ಕುಮಾರ್ , ರಾಜೇಂದ್ರ ಕುಮಾರ್, ಸುರಯ್ಯ, ಗೀತಾ ದತ್, ಮಧುಬಾಲಾ, ಮೀನಾ ಕುಮಾರಿ, ವಹೀದಾ ರೆಹಮಾನ್, ಸಾಧನಾ, ಬೀನಾ ರೈ, ನೂತನ್, ವೈಜಂತಿಮಾಲಾ ಬಾಲಿ, ಹಾಸ್ಯನಟರಾದ ಜಾನಿ ವಾಕರ್, ಓಂ ಪ್ರಕಾಶ್, ಮೆಹಮೂದ್, ಮತ್ತು ಅನೇಕ ಕಲಾವಿದರೊಡನೆ 75ಕ್ಕೂ ಹೆಚ್ಚು ಚಿತ್ರಗಳಲ್ಲಿ ಮಿನೂ ತೆರೆ ಹಂಚಿಕೊಂಡಿದ್ದಾರೆ.

ಯುಎನ್ಐ ಎಸ್ಎ 1835
More News
ಜಾಕ್ವೆಲಿನ್ ಫರ್ನಾಂಡಿಸ್ ವಿದೇಶಿ ಪ್ರವಾಸಕ್ಕೆ ತಡೆ; ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಾಲಿವುಡ್ ನಟಿ

ಜಾಕ್ವೆಲಿನ್ ಫರ್ನಾಂಡಿಸ್ ವಿದೇಶಿ ಪ್ರವಾಸಕ್ಕೆ ತಡೆ; ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಾಲಿವುಡ್ ನಟಿ

06 Dec 2021 | 7:01 AM

ಮುಂಬೈ, ಡಿ 6 (ಯುಎನ್ಐ) ಭಾನುವಾರ ಸಂಜೆ ಮುಂಬೈ ವಿಮಾನ ನಿಲ್ದಾಣದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ವಿದೇಶಕ್ಕೆ ತೆರಳದಂತೆ ತಡೆಹಿಡಿಯಲಾಗಿದೆ.

 Sharesee more..