Monday, Sep 20 2021 | Time 08:06 Hrs(IST)
Sports Share

ಟೋಕಿಯೊ ಒಲಿಂಪಿಕ್ಸ್ , ಮೇರಿ ಕೋಮ್‌ ಫ್ಲಾಗ್‌ ಬೇರರ್‌

ನವದೆಹಲಿ, ಜುಲೈ 6( ಯುಎನ್‌ ಐ) ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತೆ, ಭಾರತೀಯ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಅವರಿಗೆ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ​​(ಐಒಎ) ಆಘಾತ ನೀಡಿದೆ. ಟೋಕಿಯೋದಲ್ಲಿ ಈ ತಿಂಗಳ 23 ರಂದು ಒಲಿಂಪಿಕ್ಸ್ ಪ್ರಾರಂಭವಾಗಲಿದ್ದು, ಮೊದಲ ದಿನ, ಎಲ್ಲ ದೇಶಗಳಿಗೆ ಸೇರಿದ ಕ್ರೀಡಾಪಟುಗಳು ಒಲಿಂಪಿಕ್ ಪೆರೇಡ್‌ನಲ್ಲಿ ಭಾಗವಹಿಸುತ್ತಾರೆ. ಈ ಉದ್ಘಾಟನಾ ಸಮಾರಂಭದಲ್ಲಿ ಭಾರತೀಯ ತಂಡದ ನಾಯಕತ್ವ ವಹಿಸುವ ಫ್ಲಾಗ್‌ ಬೇರರ್‌ ಆಗಿ ಪಿ.ವಿ ಸಿಂಧು ಗೆ ಖಂಡಿತವಾಗಿ ಅವಕಾಶ ಸಿಗಲಿದೆ ಎಂದು ಎಲ್ಲರೂ ನಿರೀಕ್ಷಿಸಿದ್ದರು.
ಆದರೆ, ಐ ಓ ಎ ಬಾಕ್ಸಿಂಗ್ ಚಾಂಪಿಯನ್ ಮೇರಿ ಕೋಮ್ ಹಾಗೂ ಭಾರತೀಯ ಪುರುಷರ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಅವರು ಫ್ಲಾಗ್‌ ಬೇರರ್‌ ಗಳೆಂದು ಘೋಷಿಸಿದೆ. . ಕಳೆದ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಪಿ ವಿ ಸಿಂಧು ಅವರಿಗೆ ಈ ಅವಕಾಶ ಸಿಗಲಿದೆ ಎಂದು ಮೊದಲು ವರದಿಯಾಗಿತ್ತು. ಆದರೆ ಐಓಎ ಅನಿರೀಕ್ಷಿತ ನಿರ್ಧಾರ ತೆಗೆದುಕೊಂಡಿದೆ. ಸಮಾರೋಪ ಸಮಾರಂಭದಲ್ಲಿ ಸ್ಟಾರ್ ಕುಸ್ತಿಪಟು ಭಜರಂಗ್ ಪೂನಿಯಾ ಫ್ಲಾಗ್‌ ಬೇರರ್‌ ಎಂದು ಪ್ರಕಟಿಸಲಾಗಿದೆ. ಎರಡೂ ಕಾರ್ಯಕ್ರಮಗಳಲ್ಲಿ ಪಿ.ವಿ ಸಿಂಧು ಹೆಸರು ಇಲ್ಲದಿರುವುದು ಬ್ಯಾಡ್ಮಿಂಟನ್ ಸಮುದಾಯವನ್ನು ಅಚ್ಚರಿಗೊಳಿಸಿದೆ. ಐಓಎ ತೆಗೆದುಕೊಂಡ ನಿರ್ಧಾರದ ಬಗ್ಗೆ ಟೀಕೆಗಳು ಕೇಳಿ ಬರುತ್ತಿವೆ.
ಯುಎನ್‌ ಐ ಕೆವಿಆರ್‌ 1101