Monday, Sep 20 2021 | Time 07:50 Hrs(IST)
Sports Share

ಟೋಕಿಯೊ ಒಲಿಂಪಿಕ್ಸ್‌: 19 ಜನರಿಗೆ ಕೊರೋನಾ ಸೋಂಕು

ಟೋಕಿಯೊ, ಜು.23 (ಯುಎನ್ಐ)- ಟೋಕಿಯೊ ಒಲಿಂಪಿಕ್ಸ್‌ನ ಸಂಘಟನಾ ಸಮಿತಿಯು ಶುಕ್ರವಾರ ಕ್ರೀಡಾಕೂಟಕ್ಕೆ ಸಂಬಂಧಿಸಿದ 19 ಜನರಿಗೆ ಸೋಂಕು ತಗುಲಿದೆಯೆಂದು ದೃಢಪಡಿಸಿದ್ದು ಇದರಲ್ಲಿ ಒಲಿಂಪಿಕ್ ಗ್ರಾಮದಲ್ಲಿ ಮೂವರು ಸೇರಿದ್ದಾರೆ.

ಸಂಘಟಕರ ಪ್ರಕಾರ, ಮೂವರು ಕ್ರೀಡಾಪಟುಗಳು, ಮೂವರು ಪತ್ರಕರ್ತರು, ಒಲಿಂಪಿಕ್ ನಿಯೋಗದ 10 ಸದಸ್ಯರು ಮತ್ತು ಮೂವರು ಗುತ್ತಿಗೆದಾರರು ಕರೋನಾ ಪಾಸಿಟಿವ್ ಎಂದು ತಿಳಿದು ಬಂದಿದೆ. ಇದರೊಂದಿಗೆ, ಕ್ರೀಡಾಕೂಟಕ್ಕೆ ಸಂಬಂಧಿಸಿದ ಒಟ್ಟು ಸೋಂಕಿತ ಜನರ ಸಂಖ್ಯೆ 110 ಕ್ಕೆ ತಲುಪಿದೆ, ಇದರಲ್ಲಿ ಜಪಾನ್‌ನ 56 ನಾಗರಿಕರು ಮತ್ತು ಇತರ ದೇಶಗಳ 54 ಜನರು ಕೊರನಾಗೆ ತುತ್ತಾಗಿದ್ದಾರೆ.
ಯುಎನ್ಐ ವಿಎನ್ಎಲ್ 1915