Sunday, Oct 24 2021 | Time 02:10 Hrs(IST)
International Share

ಗಿನಿಯ ನಾಗರಿಕರ ಸುರಕ್ಷತೆಗೆ ಬಂಡುಕೋರರ ಭರವಸೆ

ಕೊನಾಕ್ರಿ, ಸೆಪ್ಟೆಂಬರ್ 6 (ಯುಎನ್‌ಐ/ಸ್ಪುಟ್ನಿಕ್) ಗಿನಿ ದೇಶದಲ್ಲಿ ಭಾನುವಾರ ದಂಗೆಯ ಬಳಿಕ, ಸ್ಥಳೀಯ ನಿವಾಸಿಗಳ ಸುರಕ್ಷತೆಯ ಬಗ್ಗೆ ಬಂಡುಕೋರರು ಭರವಸೆ ನೀಡಿದ್ದಾರೆ.
ರಾಷ್ಟ್ರೀಯ ರ್ಯಾಲಿ ಮತ್ತು ಅಭಿವೃದ್ಧಿ ಸಮಿತಿ ಸಿಎನ್‌ಆರ್‌ಡಿ ಈ ಕುರಿತು ಖಚಿತಪಡಿಸಿದೆ ಎಂದು ಹೇಳಲಾಗಿದೆ.
ಭಾನುವಾರ, ಗಿನಿಯ ಅಧ್ಯಕ್ಷೀಯ ಅರಮನೆಯ ಮೇಲೆ ಬಂಡುಕೋರರು ದಾಳಿ ನಡೆಸಿ, ಅಧ್ಯಕ್ಷ ಆಲ್ಫಾ ಕಾಂಡಯನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದಂಗೆಯ ನಾಯಕ, ಮಮ್ಮಡಿ ಡೌಂಬೌಯಾ, ಸರ್ಕಾರವನ್ನು ವಿಸರ್ಜಿಸುವುದಾಗಿ ಘೋಷಿಸಿದ್ದಲ್ಲದೆ, ರಾಷ್ಟ್ರವ್ಯಾಪಿ ಕರ್ಫ್ಯೂ ಜಾರಿಗೊಳಿಸಿದ್ದಾರೆ. ಸ್ಥಳೀಯ ಗವರ್ನರ್‌ಗಳನ್ನು ಮತ್ತು ಪ್ರಿಫೆಕ್ಟ್‌ಗಳನ್ನು ಮಿಲಿಟರಿ ಸದಸ್ಯರೊಂದಿಗೆ ಬದಲಾಯಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. "ಶಾಂತಿಯುತ ನಾಗರಿಕರ ಹಾಗೂ ಅವರ ಆಸ್ತಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗುವುದು. ಒಳಾಂಗಣದ ಎಲ್ಲಾ ಘಟಕಗಳು ಶಾಂತವಾಗಿರಲು ಮತ್ತು ರಾಜಧಾನಿ ಕೊನಕ್ರಿ ಕಡೆಗೆ ಚಲನೆಯನ್ನು ತಪ್ಪಿಸಲು ಕೇಳಲಾಗುತ್ತದೆ" ಎಂದು ಸಿಎನ್‌ಆರ್‌ಡಿ ಹೇಳಿಕೆ ತಿಳಿಸಿದೆ.
ನಿರ್ಗಮಿತ ಮಂತ್ರಿಗಳು, ಕಾಂಡೆಯ ಕ್ಯಾಬಿನೆಟ್ ಸದಸ್ಯರು ಮತ್ತು ಇತರ ಉನ್ನತ ಅಧಿಕಾರಿಗಳನ್ನು ಸೋಮವಾರ ಬೆಳಿಗ್ಗೆ 11 ಗಂಟೆಗೆ ಬಂಡುಕೋರರು ಕರೆಯುವ ಸಭೆಗೆ ಆಹ್ವಾನಿಸಿದ್ದಾರೆ ಎಂದು ಸಿಎನ್ ಆರ್ ಡಿ ತಿಳಿಸಿದೆ. "ಹಾಜರಾಗಲು ಯಾವುದೇ ನಿರಾಕರಣೆಯನ್ನು ಸಿಎನ್‌ಆರ್‌ಡಿ ವಿರುದ್ಧದ ಬಂಡಾಯವೆಂದು ಪರಿಗಣಿಸಲಾಗುತ್ತದೆ" ಎಂದು ಬಂಡುಕೋರರು ತಮ್ಮ ಹೇಳಿಕೆಯಲ್ಲಿ ಒತ್ತಿ ಹೇಳಿದ್ದಾರೆ. ಎಲ್ಲಾ ಗಿನಿಯ ಅಧಿಕಾರಿಗಳನ್ನು ಸೋಮವಾರ ಕೆಲಸಕ್ಕೆ ಮರಳುವಂತೆ ಕರೆ ನೀಡಿದರು. ಹಿಂದಿನ ಭಾನುವಾರ, ದಂಗೆಯ ನಾಯಕ, ಮಮ್ಮಡಿ ಡೌಂಬೌಯಾ, ಸರ್ಕಾರವನ್ನು ವಿಸರ್ಜಿಸುವುದರ ಜೊತೆಗೆ ಸಂವಿಧಾನವನ್ನು ರದ್ದುಗೊಳಿಸುವುದಾಗಿ ಮತ್ತು ಗಡಿಯನ್ನು ಮುಚ್ಚುವುದಾಗಿ ಘೋಷಿಸಿದ್ದಾರೆ. ಅಧ್ಯಕ್ಷರು ಬಂಡುಕೋರರೊಂದಿಗೆ ಸುರಕ್ಷಿತ ಸ್ಥಳದಲ್ಲಿ ಉಳಿದಿದ್ದಾರೆ ಮತ್ತು ವೈದ್ಯರಿಂದ ಪರೀಕ್ಷಿಸಲಾಗಿದೆ ಎಂದು ಡೌಂಬೌಯ ಹೇಳಿದ್ದಾರೆ.
ಅಧ್ಯಕ್ಷ ಆಲ್ಫಾ ಕಾಂಡೆ ಅವರು ಗಿನಿಯಲ್ಲಿ ಕಳೆದ ವರ್ಷ ನಡೆದ ಚುನಾವಣೆಯಲ್ಲಿ ತಮ್ಮ ವಿವಾದಾತ್ಮಕ ಮೂರನೇ ಅವಧಿಯನ್ನು ಗೆದ್ದರು, ಸಂವಿಧಾನಕ್ಕೆ ತಿದ್ದುಪಡಿ ತರುವ ನಿರ್ಧಾರದ ನಂತರ, ರಾಷ್ಟ್ರೀಯ ಜನಾಭಿಪ್ರಾಯ ಸಂಗ್ರಹದ ಮೂಲಕ ಸಂವಿಧಾನವನ್ನು ಬದಲಿಸಿದರೂ ಇದು ದೇಶದಲ್ಲಿ ಅಶಾಂತಿಯನ್ನು ಹುಟ್ಟುಹಾಕಿತು.
ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಗಿನಿಯ ಬಂಡಾಯ ಸೇನೆಯ ಬೆಂಬಲಿಗರು ಭಾನುವಾರ ದಂಗೆಯ ನಂತರ ರಾಜಧಾನಿ ಕೊನಕ್ರಿಯ ಬೀದಿಗಿಳಿದರು. ಬೀದಿಗಳಲ್ಲಿ ಜನರು ಸೇನೆಯನ್ನು ಹೊಗಳಿ ಘೋಷಣೆಗಳನ್ನು ಕೂಗುತ್ತಿದ್ದರು.
ವಿಶ್ವಸಂಸ್ಥೆ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್, ಪಶ್ಚಿಮ ಆಫ್ರಿಕಾ ರಾಜ್ಯಗಳ ಆರ್ಥಿಕ ಸಮುದಾಯ ಇಕೋವಾಸ್ ಸೇರಿದಂತೆ ಹಲವು ದೇಶಗಳು ಭಾನುವಾರ ಗಿನಿಯಾದಲ್ಲಿ ನಡೆದ ದಂಗೆಯನ್ನು ಖಂಡಿಸಿದ್ದಾರೆ. ಮತ್ತು ಬಂಡುಕೋರರು ದೇಶದ ಅಧ್ಯಕ್ಷರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ.
ಇಕೋವಾಸ್ - ECOWAS ಗಿನಿಯಾದಲ್ಲಿ ಸಾಂವಿಧಾನಿಕ ಕ್ರಮವನ್ನು ಪುನಃಸ್ಥಾಪಿಸಲು ಕರೆ ನೀಡಿದ್ದು, ಬಂಡಾಯಗಾರರಿಗೆ ನಿರ್ಬಂಧಗಳ ಮೂಲಕ ಬೆದರಿಕೆ ಹಾಕಿದೆ.
ಯುಎನ್ಐ ಎಸ್ಎ 0640
More News
ಭುಗಿಲೆದ್ದ ಹಿಂಸಾಚಾರ – ಪಾಕಿಸ್ತಾನದಲ್ಲಿ ನಾಲ್ವರು ಸಾವು

ಭುಗಿಲೆದ್ದ ಹಿಂಸಾಚಾರ – ಪಾಕಿಸ್ತಾನದಲ್ಲಿ ನಾಲ್ವರು ಸಾವು

23 Oct 2021 | 12:27 PM

ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಪಾಕಿಸ್ತಾನದಲ್ಲಿ ಸರಣಿ ಪ್ರತಿಭಟನೆಗಳು ಆರಂಭಗೊಂಡಿವೆ. ಇಸ್ಲಾಮಿಸ್ಟ್ ಹಾಗೂ ಭದ್ರತಾ ಪಡೆಗಳ ಮಧ್ಯೆ ನಡದೆ ಘರ್ಷಣೆಯಲ್ಲಿ ಇಬ್ಬರು ಪೊಲೀಸರು ಸಾವಿಗೀಡಾಗಿದ್ದಾರೆ. ಇನ್ನಿಬ್ಬರು ಇಸ್ಲಾಮಿಸ್ಟ್ ಹೋರಾಟಗಾರರು ಅಸುನೀಗಿದ್ದಾರೆ.

 Sharesee more..
ಅನನ್ಯ ಪಾಂಡೆ ಆರ್ಯನ್ ಖಾನ್​ಗೂ ಇರುವ ಸಂಬಂಧ ಏನು ಗೊತ್ತಾ? : ಚಾಟ್ ನಿಂದ ಬಹಿರಂಗವಾಯ್ತು ಡ್ರಗ್ಸ್ ಪೂರೈಕೆ ವಿಚಾರ

ಅನನ್ಯ ಪಾಂಡೆ ಆರ್ಯನ್ ಖಾನ್​ಗೂ ಇರುವ ಸಂಬಂಧ ಏನು ಗೊತ್ತಾ? : ಚಾಟ್ ನಿಂದ ಬಹಿರಂಗವಾಯ್ತು ಡ್ರಗ್ಸ್ ಪೂರೈಕೆ ವಿಚಾರ

22 Oct 2021 | 7:50 PM

ಮುಂಬೈ: ಅ, 22 (ಯುಎನ್‌ಐ) ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ.

 Sharesee more..
ಈ ಪುಟ್ಟ ಪೋರನ ದುಡಿಮೆ ತಿಂಗಳಿಗೆ 75 ಸಾವಿರ ರೂ  !

ಈ ಪುಟ್ಟ ಪೋರನ ದುಡಿಮೆ ತಿಂಗಳಿಗೆ 75 ಸಾವಿರ ರೂ !

22 Oct 2021 | 4:50 PM

ವಾಷಿಂಗ್ಟನ್ : ಅ, 22 (ಯುಎನ್‌ಐ) ಸಾಮಾಜಿಕ ಮಾಧ್ಯಮಗಳಲ್ಲಿ ರಾಜಕಾರಣಿಗಳು, ಸಿನಿಮಾ ನಟ-ನಟಿಯರು ತಮ್ಮದೇ ಆದ ಹವಾವನ್ನು ಕ್ರಿಯೇಟ್​ ಮಾಡಿರುತ್ತಾರೆ.

 Sharesee more..
ರೋಹಿಂಗ್ಯಾ ಗುಂಪುಗಳ ನಡುವೆ ಘರ್ಷಣೆ- ಸಾವು

ರೋಹಿಂಗ್ಯಾ ಗುಂಪುಗಳ ನಡುವೆ ಘರ್ಷಣೆ- ಸಾವು

22 Oct 2021 | 3:23 PM

ಢಾಕಾ,ಅ.

 Sharesee more..
ಮಧುಮಗಳ ಜೊತೆ ವೈರಲ್ ಆಗುತ್ತಿದೆ ನಾಯಿ

ಮಧುಮಗಳ ಜೊತೆ ವೈರಲ್ ಆಗುತ್ತಿದೆ ನಾಯಿ

22 Oct 2021 | 3:22 PM

ಅಮೆರಿಕಾ,ಅ.

 Sharesee more..