Monday, Sep 20 2021 | Time 08:10 Hrs(IST)
Sports Share

ವಿಂಡೀಸ್ ಗೆ ಭರ್ಜರಿ ಗೆಲುವು

ಸೆಂಟ್ ಜಾರ್ಜ್, ಜು.2 (ಯುಎನ್ಐ)- ಅನುಭವಿ ಆಲ್ ರೌಂಡರ್ ಕೀರನ್ ಪೋಲಾರ್ಡ್ (51 ರನ್, 24ಕ್ಕೆ 1) ಇವರ ಭರ್ಜರಿ ಆಟದ ನೆರವಿನಿಂದ ವೆಸ್ಟ್ ಇಂಡೀಸ್ ನಾಲ್ಕನೇ ಟಿ-20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿ, ಐದು ಪಂದ್ಯಗಳ ಸರಣಿಯಲ್ಲಿ 2-2 ರಿಂದ ಸಮಬಲ ಸಾಧಿಸಿದೆ.

ಮೊದಲು ಬ್ಯಾಟ್ ಮಾಡಿದ ವಿಂಡೀಸ್ 20 ಓವರ್ ಗಳಲ್ಲಿ 6 ವಿಕೆಟ್ ಗೆ 167 ರನ್ ಸೇರಿಸಿತು. ಗುರಿಯನ್ನು ಹಿಂಬಾಲಿಸಿದ ದಕ್ಷಿಣ ಆಫ್ರಿಕಾ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 146 ರನ್ ಕಲೆ ಹಾಕಿ ಸೋಲು ಕಂಡಿತು.

ವೆಸ್ಟ್ ಇಂಡೀಸ್ ಪರ ಲಿಂಡ್ಲೆ ಸಿಮನ್ಸ್ 47, ನಿಕೋಲಸ್ ಪೋರನ್ 16, ಫಾಬಿಯಾನ್ ಅಲೇನ್ 19 ರನ್ ಸಿಡಿಸಿ ತಂಡದ ಮೊತ್ತ ಹೆಚ್ಚಿಸಿದರು. ಅನುಭವಿ ಕೀರನ್ 25 ಎಸೆತಗಳಲ್ಲಿ 2 ಬೌಂಡರಿ, 5 ಸಿಕ್ಸರ್ ಸಹಾಯದಿಂದ ಅಜೇಯ 51 ರನ್ ಸೇರಿಸಿ ತಂಡಕ್ಕೆ ನೆರವಾದರು.

ದಕ್ಷಿಣ ಆಫ್ರಿಕಾದ ಪರ ಜಾರ್ಜ್ ಲಿಂಡೆ ಹಾಗೂ ತಬ್ರೇಜ್ ಶಂಶಿ ತಲಾ ಎರಡು ವಿಕೆಟ್ ಉರುಳಿಸಿದರು.

ಗುರಿಯನ್ನು ಹಿಂಬಾಲಿಸಿದ ದಕ್ಷಿಣ ಆಫ್ರಿಕಾ ತಂಡದ ಆರಂಭಿಕ ಕ್ವಿಂಟನ್ ಡಿಕಾಕ್ 43 ಎಸೆತಗಳಲ್ಲಿ 60 ರನ್ ಬಾರಿಸಿ ಬ್ರಾವೊಗೆ ವಿಕೆಟ್ ಒಪ್ಪಿಸಿದರು. ಉಳಿದಂತೆ ಐಡೆನ್ ಮಾರ್ಕ್ರಮ್ 20, ಡೇವಿಡ್ ಮಿಲ್ಲರ್ 12, ಕಗಿಸೊ ರಬಾಡ 16 ರನ್ ಬಾರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು.

ಆತಿಥೇಯ ತಂಡದ ಪರ ಡ್ವೇನ್ ಬ್ರಾವೋ 4, ಆಂಡ್ರಿ ರಸೆಲ್ 2 ವಿಕೆಟ್ ಪಡೆದರು.

ಯುಎನ್ಐ ವಿಎನ್ಎಲ್ 1951