Monday, Sep 20 2021 | Time 08:35 Hrs(IST)
National Share

ಜಿಯೊ ಟೀವಿಯಲ್ಲಿ ಅಮರನಾಥ ಆರತಿಯ ನೇರಪ್ರಸಾರ

ಜಿಯೊ ಟೀವಿಯಲ್ಲಿ ಅಮರನಾಥ ಆರತಿಯ ನೇರಪ್ರಸಾರ
ಜಿಯೊ ಟೀವಿಯಲ್ಲಿ ಅಮರನಾಥ ಆರತಿಯ ನೇರಪ್ರಸಾರ

ಜಮ್ಮು, ಜುಲೈ 16(ಯುಎನ್‍ಐ)- ದೂರ ಸಂಪರ್ಕ ಸೇವಾ ಸಂಸ್ಥೆ ರಿಲಯನ್ಸ್ ಜಿಯೊದ ಜಿಯೊ ಟೀವಿ, ಶ್ರೀ ಅಮರನಾಥ ದೇಗುಲದ ಆರತಿಯನ್ನು ನೇರಪ್ರಸಾರವನ್ನು ಮಾಡುತ್ತಿದೆ.ಸದ್ಯದ ಪರಿಸ್ಥಿತಿಯಲ್ಲಿ ಭಕ್ತರು ಈ ಪವಿತ್ರ ದೇವಾಲಯಕ್ಕೆ ನೇರವಾಗಿ ಭೇಟಿ ನೀಡಿ ದರ್ಶನ ಪಡೆಯಲು ಸಾಧ್ಯವಿಲ್ಲವಾದ್ದರಿಂದ ಭಕ್ತರ ಅನುಕೂಲಕ್ಕಾಗಿ ಜಿಯೊ ಟೀವಿ ಈ ನೇರಪ್ರಸಾರ ಮಾಡುತ್ತಿದೆ.ಕಡಿದಾದ ಭೂಪ್ರದೇಶ ಮತ್ತು ಸವಾಲಿನ ಪರಿಸ್ಥಿತಿಯಲ್ಲಿಯೂ ಕಂಪನಿಯು, ನೇರಪ್ರಸಾರಕ್ಕೆ ಅಗತ್ಯವಿರುವ ನೆಟ್‌ವರ್ಕ್‌ ವ್ಯವಸ್ಥೆ ಮತ್ತು ಮೂಲಭೂತ ಸೌಕರ್ಯಗಳನ್ನು ಅತ್ಯಲ್ಪ ಅವಧಿಯಲ್ಲಿಯೇ ಸ್ಥಾಪಿಸಿದೆ.ಭಕ್ತರಿಗೆ ನೇರವಾಗಿ ಬಂದು ದರ್ಶನ ಪಡೆದಷ್ಟೇ ಒಳ್ಳೆಯ ಅನುಭವ ಕೊಡುವ ನಿಟ್ಟಿನಲ್ಲಿ, ಶ್ರೀ ಅಮರನಾಥ ದೇವಾಲಯ ಸಮಿತಿಯ ಆರಂಭಿಸಿದ ವಿವಿಧ ಆನ್‌ಲೈನ್‌ ಸೇವೆಗಳನ್ನು ಕಳೆದ ವಾರ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಉದ್ಘಾಟಿಸಿದ್ದಾರೆ.‘ಕೋವಿಡ್ –19 ಸಾಂಕ್ರಾಮಿಕ ರೋಗದ ಕಾರಣದಿಂದ ಈ ವರ್ಷ ಲಕ್ಷಾಂತರ ಜನರಿಗೆ ಪವಿತ್ರ ಶ್ರೀ ಅಮರನಾಥ ಗುಹಾಲಿಂಗ ದೇಗುಲಕ್ಕೆ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ದೇವಸ್ಥಾನ ಸಮಿತಿಯು, ವರ್ಚುವಲ್‌ ವಿಧಾನದಲ್ಲಿ ದರ್ಶನ, ಹವನ ಮತ್ತು ಪ್ರಸಾದದ ಸೌಲಭ್ಯವನ್ನು ಪಡೆದುಕೊಳ್ಳಲು ವ್ಯವಸ್ಥೆ ಮಾಡಿದೆ. ದರ್ಶನ, ಹವನ, ಪ್ರಸಾದ ಮತ್ತು ಅರ್ಚಕರನ್ನೂ ಭಕ್ತರು ಆನ್‌ಲೈನ್‌ನಲ್ಲಿಯೇ ತಮ್ಮ ಹೆಸರಿನಲ್ಲಿ ಬುಕ್ ಮಾಡಿಕೊಳ್ಳಬಹುದಾಗಿದೆ. ನಂತರ ಪ್ರಸಾದವನ್ನು ಅವರ ಮನೆಬಾಗಿಲಿಗೆ ತಲುಪಿಸಲಾಗುವುದು' ಎಂದು ದೇವಸ್ಥಾನ ಸಮಿತಿಯ ವಕ್ತಾರರು ತಿಳಿಸಿದ್ದಾರೆ.ಆನ್‌ಲೈನ್‌ ಸೇವೆಯನ್ನು ಆರಂಭಿಸಿರುವ ಕಾರಣ ವಿಶ್ವದಾದ್ಯಂತ ಇರುವ ಶಿವನ ಭಕ್ತರು ಆನ್‌ಲೈನ್‌ನಲ್ಲಿಯೇ ಪೂಜೆ, ಹವನಗಳನ್ನು ಮಾಡಿಸುತ್ತಿದ್ದಾರೆ.ಈಗ ರಿಲಯನ್ಸ್ ಜಿಯೊ, ಜಿಯೊ ಟೀವಿಯಲ್ಲಿ ಅಮರನಾಥ ದೇಗುಲದ ಆರತಿಯ ನೇರಪ್ರಸಾರವನ್ನು ಪರಿಚಯಿಸುವ ಮೂಲಕ ಭಕ್ತರಿಗೆ ತನ್ಮಯಗೊಳಿಸುವ ಅನುಭವ ನೀಡುತ್ತಿದೆ. ವಿವಿಧ ಆಪ್‌ಗಳ ಮೂಲಕ ಒದಗಿಸಲಾಗುವ ಈ ಸೇವೆಯಿಂದ ದೇಶದಾದ್ಯಂತ ಲಕ್ಷಾಂತರ ಭಕ್ತರಿಗೆ ಸಹಾಯವಾಗಲಿದೆ.ಕೊರೊನಾ ಸಾಂಕ್ರಾಮಿಕದ ಕಾರಣಕ್ಕೆ 2021ರ ಅಮರನಾಥ ಯಾತ್ರೆಯನ್ನು ಅಮರನಾಥ ದೇಗುಲ ಸಮಿತಿಯು ರದ್ದುಗೊಳಿಸಿತ್ತು. ಹಾಗಾಗಿ ಭಕ್ತರು ಈ ವರ್ಷ ಈ ಪವಿತ್ರ ಯಾತ್ರಾಸ್ಥಳದ ದರ್ಶನ ಪಡೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಭಕ್ತರು ಈ ಯಾತ್ರಾಸ್ಥಳದ ಜೊತೆಗಿನ ಸಂಬಂಧವನ್ನು ಮುಂದುವರಿಸುವ ನಿಟ್ಟಿನಲ್ಲಿ ಜಿಯೊ ಡಿಜಿಟಲ್‌ ಲೈಫ್ ಬೆಂಬಲದೊಂದಿಗೆ ಜಿಯೊ ಸಂಸ್ಥೆಯು ಆರತಿಯ ನೇರಪ್ರಸಾರ ಆರಂಭಿಸಿದೆ. ಜಿಯೊ ಟೀವಿಯಲ್ಲಿ ಈ ನೇರಪ್ರಸಾರವಾಗುತ್ತಿದ್ದು, ಜಿಯೊಮೀಟ್‌ನ ಮೂಲಕ ಭಕ್ತರು ತಮ್ಮ ಅರ್ಚಕರ ಜೊತೆಯಲ್ಲಿ ದೇಗುಲದ ವರ್ಚುವಲ್‌ ಪೂಜಾಕೊಠಡಿಯಲ್ಲಿ ಸೇರಿ, ಅವರ ಹೆಸರು ಮತ್ತು ಗೋತ್ರಗಳನ್ನು ಹೇಳಿ ಹವನ, ಪೂಜೆ ನಡೆಸಲು ಸಾಧ್ಯವಿದೆ.ಇದಲ್ಲದೆ, ಜಿಯೊ ಸಾವ್‌ನಲ್ಲಿ ಶ್ರೀ ಅಮರನಾಥ ದೇವರ ಭಜನೆ, ಭಕ್ತಿಗೀತೆಗಳನ್ನು ಒಳಗೊಂಡ 'ಚಲೋ ಅಮರನಾಥ್' ಎಂಬ ಪ್ಲೇಲಿಸ್ಟ್ ಕೂಡ ಲಭ್ಯವಿದೆ.ಜಿಯೊಚಾಟ್‌ನಲ್ಲಿರುವ ಅಮರನಾಥ ದರ್ಶನ ವಾಹಿನಿಯು ನೇರಪ್ರಸಾರ, ಆರತಿಯ ಸಮಯ, ಕೊಡುಗೆಗಳು ಮತ್ತು ದೇಣಿಗೆಯನ್ನು ಸಲ್ಲಿಸುವ ವಿಧಾನಗಳ ಕುರಿತಾದ ಮಾಹಿತಿ ಲಭ್ಯವಿದೆ. ಅಲ್ಲದೆ ಆರತಿಯ ನೇರ ಮತ್ತು ಮುದ್ರಿತ ಪ್ರಸಾರಗಳೂ ಇರುತ್ತವೆ.'ಬಹಳ ಕಷ್ಟಕರವಾದ ಪ್ರದೇಶದಲ್ಲಿ, ಸವಾಲಿನ ಪರಿಸ್ಥಿತಿಯಲ್ಲಿ, ಜಿಯೊ ಮೂಲಭೂತ ಸೌಕರ್ಯಗಳು, ವ್ಯವಸ್ಥೆ ಮತ್ತು ಆರತಿಯ ನೇರಪ್ರಸಾರಕ್ಕೆ ಅಗತ್ಯವಿರುವ ಬ್ಯಾಂಡ್‌ವಿಡ್ತ್‌ಗಳನ್ನು ಸ್ಥಾಪಿಸಿದೆ. ಬೇರೆ ಬೇರೆ ಫ್ಲಾಟ್‌ಫಾರಂಗಳಲ್ಲಿ ಮತ್ತು ಆಪ್‌ಗಳ ಮೂಲಕ ಅತ್ಯಂತ ಕಡಿಮೆ ಅವಧಿಯಲ್ಲಿ ಜಿಯೊ ಇಷ್ಟೊಂದು ಒಳ್ಳೆಯ ಸೇವೆಗಳನ್ನು ಒದಗಿಸುತ್ತಿರುವುದು ಶ್ಲಾಘನೀಯ' ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.ಲೈವ್ ಮತ್ತು ಕ್ಯಾಚ್-ಅಪ್ ಟೀವಿ ಅಪ್ಲಿಕೇಶನ್ ಆದ ಜಿಯೋ ಟೀವಿ, 650ಕ್ಕೂ ಹೆಚ್ಚು ವಿವಿಧ ಪ್ರಕಾರಗಳ ವಾಹಿನಿಗಳನ್ನು ಹೊಂದಿದೆ. ದೇಗುಲದಿಂದ ಆರತಿಯ ನೇರಪ್ರಸಾರ ಮಾಡಲಿಕ್ಕಾಗಿಯೇ ಜಿಯೊಟೀವಿಯಲ್ಲಿ ಶ್ರೀ ಅಮರನಾಥ ದೇಗುಲ ಸಮಿತಿಯು ದರ್ಶನ ವಾಹಿನಿಯನ್ನು ಪರಿಚಯಿಸಿದೆ.ನಿರ್ದಿಷ್ಟ ಸಮಯದಲ್ಲಿ ವೀಕ್ಷಕರು ಆರತಿಯ ನೇರಪ್ರಸಾರವನ್ನು ವೀಕ್ಷಿಸಬಹುದು. ಮುದ್ರಿತ ಕಾರ್ಯಕ್ರಮವನ್ನು ದಿನದ ಯಾವ ಹೊತ್ತಿನಲ್ಲಿ ಬೇಕಾದರೂ ಜಿಯೊಟೀವಿಯಲ್ಲಿ ವೀಕ್ಷಿಸಬಹುದಾಗಿದೆ. ಪ್ರತಿದಿನ ಬೆಳಿಗ್ಗೆ 6ರಿಂದ 6.30 ಮತ್ತು ಸಂಜೆ 5ರಿಂದ 5.30ಕ್ಕೆ ಎರಡು ಮಹಾ ಆರತಿಗಳು ನಡೆಯುತ್ತವೆ.ಆನ್‌ಲೈನ್‌ನಲ್ಲಿ ಅಮರನಾಥಲಿಂಗದ ದರ್ಶನ ಪಡೆಯಲು, ತಮ್ಮ ಹೆಸರಿನಲ್ಲಿ ಫೂಜೆ ಮಾಡಿಸಲು ಭಕ್ತರು, ದೇವಸ್ಥಾನದ ಸಮಿತಿಯ ಮೊಬೈಲ್‌ ಆಪ್‌ನಲ್ಲಿ www.shriamarnathjishrine.com ವೆಬ್‌ಸೈಟ್‌ನಲ್ಲಿ 'Book Online Pooja / Hawan / Prasad' ವಿಭಾಗಕ್ಕೆ ಭೇಟಿ ನೀಡಬೇಕು. ಬುಕ್ಕಿಂಗ್ ಪ್ರಕ್ರಿಯೆಗಳು ಮುಗಿದ ನಂತರ ಭಕ್ತರಿಗೆ ಜಿಯೊಮೀಟ್‌ನ ವರ್ಚುವಲ್‌ ರೂಮ್‌ನ ಲಿಂಕ್‌ ಅನ್ನು ಕಳಿಸಿಕೊಡಲಾಗುತ್ತದೆ. ನಿಗದಿಪಡಿಸಿದ ಸಮಯಕ್ಕೆ ಭಕ್ತರು ಆ ರೂಮ್‌ಗೆ ಜಾಯಿನ್ ಆಗಿ ಅರ್ಚಕರು ನಡೆಸುವ ಪೂಜೆ, ಹವನಗಳಲ್ಲಿ ಭಾಗಿಯಾಗಬಹುದು.ಯುಎನ್ಐ ಎಸ್ಎಲ್ಎಸ್ 2100