Thursday, Oct 28 2021 | Time 23:49 Hrs(IST)
Sports Share

ಡೆಲ್ಲಿ ಸಂಘಟಿತ ಆಟಕ್ಕೆ ಒಲಿದ ಜಯ

ಅಬುಧಾಬಿ, ಸೆ.25 (ಯುಎನ್ಐ)- ಸಂಘಟಿತ ಆಟದ ಪ್ರದರ್ಶನ ನೀಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್ ನ 14ನೇ ಆವೃತಿಯ 36ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು 33 ರನ್ ಗಳಿಂದ ಮಣಿಸಿ, ರಿಷಭ್ ಪಂತ್ ಪಡೆ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಬಡ್ತಿ ಪಡೆದಿದೆ.

ಮೊದಲು ಬ್ಯಾಟ್ ಮಾಡಿದ ದೆಹಲಿ ಕ್ಯಾಪಿಟಲ್ಸ್ 20 ಓವರ್ ಗಳಲ್ಲಿ 6 ವಿಕೆಟ್ ಗೆ 154 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ರಾಜಸ್ಥಾನ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 121 ರನ್ ಕಲೆ ಹಾಕಿ ಸೋಲು ಕಂಡಿದೆ. ಡೆಲ್ಲಿ ತಂಡ ಆಡಿದ 10 ಪಂದ್ಯಗಳಲ್ಲಿ 8 ಜಯ ಸಾಧಿಸಿದ್ದು, 10 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ರಾಜಸ್ಥಾನ 9 ಪಂದ್ಯಗಳಲ್ಲಿ 8 ಅಂಕ ಕಲೆ ಹಾಕಿದೆ.

ದೆಹಲಿ ಪರ ಅನ್ರಿಕ್ ನಾರ್ಟ್ಜೆ ಎರಡು, ಅವೇಶ್ ಖಾನ್, ರವಿಚಂದ್ರನ್ ಅಶ್ವಿನ್, ಕಾಗಿಸೊ ರಬಾಡಾ ಮತ್ತು ಅಕ್ಸರ್ ಪಟೇಲ್ ತಲಾ ಒಂದೊಂದು ವಿಕೆಟ್ ಪಡೆದರು.

ರಾಜಸ್ಥಾನ ತಂಡವು ಅತ್ಯಂತ ಕಳಪೆ ಆರಂಭವನ್ನು ಹೊಂದಿತ್ತು. ವಿದೇಶಿ ಆಟಗಾರರಾದ ಲಿಯಾಮ್ ಲಿವಿಂಗ್ ಸ್ಟೋನ್ ಮತ್ತು ಡೇವಿಡ್ ಮಿಲ್ಲರ್ ಅವರ ವಿಕೆಟ್ ಸೇರಿದಂತೆ ಮೂರು ವಿಕೆಟ್ ಗಳು 17 ರನ್ ಬಿದ್ದಿತು. ನಾಯಕ ಸಂಜು ಸ್ಯಾಮ್ಸನ್ ತಂಡವನ್ನು ಒಂದು ತುದಿ ಹಿಡಿದು ಬ್ಯಾಟ್ ಮಾಡಿದರು. ಅವರು ಕೊನೆಯವರೆಗೂ ಕ್ರೀಸ್‌ನಲ್ಲಿದ್ದರೂ, ತಂಡಕ್ಕೆ ಗೆಲುವಿನ ಮಾಲೆ ತೊಡಿಸುವಲ್ಲಿ ವಿಫಲರಾದರು. ಅವರು 53 ಎಸೆತಗಳಲ್ಲಿ ಎಂಟು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ ಅಜೇಯ 70 ರನ್ ಗಳಿಸಿದರು.

ಡೆಲ್ಲಿ ಪರ ಶ್ರೇಯಸ್ ಅಯ್ಯರ್ 43 ರನ್, ಶಿಮ್ರಾನ್ ಹೆಟ್ಮಿಯರ್ 28 ಮತ್ತು ರಿಷಭ್ ಪಂತ್ 24 ರನ್ ಗಳಿಸಿದರು. ಲಲಿತಾ ಯಾದವ್ ಅಜೇಯ 14, ಅಕ್ಷರ್ ಪಟೇಲ್ 12 ರನ್ ಬಾರಿಸಿ ತಂಡಕ್ಕೆ ಆಧಾರವಾದರು.

ರಾಜಸ್ಥಾನ ಪರ ಮುಷ್ತಾಫಿಜುರ್ ರಹಮಾನ್, ಚೇತನ್ ಸಕಾರಿಯಾ ತಲಾ ಎರಡು ವಿಕೆಟ್ ಕಬಳಿಸಿದರು.

ಯುಎನ್ಐ ವಿಎನ್ಎಲ್ 2112
More News
ಟಿ-20 ವಿಶ್ವಕಪ್; ವಿರಾಟ್ ಕೊಹ್ಲಿ ಪಡೆಗೆ ಗುಡ್ ನ್ಯೂಸ್!

ಟಿ-20 ವಿಶ್ವಕಪ್; ವಿರಾಟ್ ಕೊಹ್ಲಿ ಪಡೆಗೆ ಗುಡ್ ನ್ಯೂಸ್!

28 Oct 2021 | 10:58 AM

ದುಬೈ, ಅ 28 (ಯುಎನ್ಐ) ಟೀಮ್ ಇಂಡಿಯಾ ಪಾಲಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ.

 Sharesee more..
ಟಿ-20 ವಿಶ್ವಕಪ್: ಆಸ್ಟ್ರೇಲಿಯಾ V/s ಶ್ರೀಲಂಕಾ - ಸಂಜೆ 7;30ಕ್ಕೆ ಪಂದ್ಯ

ಟಿ-20 ವಿಶ್ವಕಪ್: ಆಸ್ಟ್ರೇಲಿಯಾ V/s ಶ್ರೀಲಂಕಾ - ಸಂಜೆ 7;30ಕ್ಕೆ ಪಂದ್ಯ

28 Oct 2021 | 10:29 AM

ಟ್ವೆಂಟಿ ಟ್ವೆಂಟಿ ವಿಶ್ವಕಪ್ ನ 22ನೇ ಪಂದ್ಯ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ಮಧ್ಯೆ ಇವತ್ತು ಅತ್ಯಂತ ಮಹತ್ವದ ಪಂದ್ಯ ನಡೆಯಲಿದೆ. ಉಭಯ ತಂಡಗಳು ಸಂಜೆ 7:30ಕ್ಕೆ ದುಬೈನಲ್ಲಿ ಸೆಣಸಲಿವೆ.

 Sharesee more..

"ಓವರ್ ಸ್ಮಾರ್ಟ್ ಬೇಡ" ಲೈವ್ ಟಿವಿ ಶೋದಲ್ಲಿ ಶೋಯೆಬ್ ಅಖ್ತರ್ ಗೆ "ಗೆಟ್ ಔಟ್"!

27 Oct 2021 | 1:42 PM

ಟೀಮ್ ಇಂಡಿಯಾ ವಿರುದ್ಧ ಗೆದ್ಮೇಲೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಟಿವಿ ಶೋಗಳಲ್ಲಿ ಠಿಕಾಣಿ ಹೂಡಿದ್ದಾರೆ. ಲೈವ್ ಕಾರ್ಯಕ್ರಮಗಳಲ್ಲಿ ತಾವೇ ದೊಡ್ಡ ಸ್ಟಾರ್ ಗಳು ಅನ್ನೋ ಕೊಂಬುಗಳು ಅವರಿಗೆ ಬಂದ್ಬಿಟ್ಟಿವೆ. ಭಾರತದ ಕೊಹ್ಲಿ ಪಡೆ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ.

 Sharesee more..
ಟಿ-20 ವಿಶ್ವಕಪ; ನ್ಯೂಜಿಲೆಂಡ್ ತಂಡಕ್ಕೆ ಮತ್ತೊಂದು ಶಾಕ್! ಲಾಕಿ ಫರ್ಗುಸನ್ ಔಟ್

ಟಿ-20 ವಿಶ್ವಕಪ; ನ್ಯೂಜಿಲೆಂಡ್ ತಂಡಕ್ಕೆ ಮತ್ತೊಂದು ಶಾಕ್! ಲಾಕಿ ಫರ್ಗುಸನ್ ಔಟ್

27 Oct 2021 | 12:17 PM

ನ್ಯೂಜಿಲೆಂಡ್ ಕ್ರಿಕೆಟ್ ತಂಡ ಶಾಕ್ ಮೇಲೆ ಶಾಕ್ ಗೆ ಗುರಿಯಾಗುತ್ತಿದೆ. ಮಂಗಳವಾರ ಪಾಕಿಸ್ತಾನ ವಿರುದ್ಧ ಸೋಲಿನ ನಂತರ ಈಗ ಮತ್ತೊಂದು ಸುದ್ದಿ ಕಿವೀಸ್ ತಂಡಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

 Sharesee more..