Sunday, Sep 19 2021 | Time 23:06 Hrs(IST)
National Share

ಮುಂದಿನ ತಿಂಗಳು ಕೇರಳ- ದುಬೈ ವಿಮಾನ ಸಂಚಾರ

ನವದೆಹಲಿ , ಜೂನ್ 25 (ಯುಎನ್ಐ) ಕೊರೊನಾ ಎರಡನೆ ಅಲೆಯ ಕಾರಣ ಸ್ಥಗಿತವಾಗಿದ್ದ ಕೇರಳ- ದುಬೈಗೆ ವಿಮಾನ ಸಂಚಾರ ಮುಂದಿನ ತಿಂಗಳ 7 ರಿಂದ ಆರಂಭವಾಗಲಿದೆ. ಎಂದು ಫ್ಲೈ ದುಬೈ ಮತ್ತು ಎಮಿರೇಟ್ಸ್ ಏರ್ ಹೇಳಿವೆ.
ಸೇವೆಗಳ ಪುನಾರಂಭಕ್ಕೆ ಸಂಬಂಧಿಸಿ ನಾಗರಿಕ ವಿಮಾನಯಾನ ಪ್ರಾಧಿಕಾರದಿಂದ ಸಮ್ಮತಿ ದೊರಕಿದೆ. ವಿಮಾನಗಳು  ಜುಲೈ 7ರಿಂದ ಕೇರಳದಿಂದ ದುಬೈಗೆ, ಜುಲೈ 3ರಿಂದ ಹೈದರಾಬಾದ್ ಗೆ ವಿಮಾನ ಸಂಚರಿಸಲಿವೆ. ಲಸಿಕೆ ಪಡೆದವರಿಗಷ್ಟೆ ವಿಮಾನ ಸಂಚಾರಕ್ಕೆ ಅವಕಾಶವಿರುತ್ತದೆ ಎಂದೂ ಯುಎಇ ಸರ್ಕಾರ ಹೇಳಿದೆ.
ಯುಎನ್ಐ ಕೆಎಸ್ಆರ್ 2233