Monday, Sep 20 2021 | Time 08:16 Hrs(IST)
National Share

ಶ್ಯಾಮಾ ಪ್ರಸಾದ್ ಸ್ಮರಿಸಿದ ಉಪ ರಾಷ್ಟ್ರಪತಿ

ಶ್ಯಾಮಾ ಪ್ರಸಾದ್ ಸ್ಮರಿಸಿದ ಉಪ ರಾಷ್ಟ್ರಪತಿ
ಶ್ಯಾಮಾ ಪ್ರಸಾದ್ ಸ್ಮರಿಸಿದ ಉಪ ರಾಷ್ಟ್ರಪತಿ

ನವದೆಹಲಿ, ಜುಲೈ 6 (ಯುಎನ್‌ಐ) ಭಾರತೀಯ ಜನ ಸಂಘ ಸಂಸ್ಥಾಪಕ ಡಾ.ಶ್ಯಾಮಾ ಪ್ರಸಾದ್ ಮುಖರ್ಜಿ ಅವರ ಜನ್ಮದಿನಂದು ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ಗೌರವ ಸಲ್ಲಿಸಿದ್ದಾರೆ.

"ದೂರದೃಷ್ಟಿಯ ರಾಜಕಾರಣಿ ಮತ್ತು ಧರ್ಮನಿಷ್ಠ ದೇಶಭಕ್ತ ಡಾ.ಶ್ಯಾಮಾ ಪ್ರಸಾದ್ ಜನ್ಮದಿನ” ಎಂದು ಉಪ ರಾಷ್ಟ್ರಪತಿ ಕಾರ್ಯಾಲಯ ಟ್ವೀಟ್ ಮಾಡಿದೆ.

"ಅವರು ರಾಷ್ಟ್ರದ ಸಮಗ್ರತೆಗಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು, ಅವರ ಆದರ್ಶವನ್ನು ಪಾಲಿಸುವುದು ಪ್ರತಿ ಪೀಳಿಗೆಯ ಜವಾಬ್ದಾರಿಯಾಗಿದೆ" ಎಂದು ಉಪ ರಾಷ್ಟ್ರಪತಿಯವರು ಹಿಂದಿಯಲ್ಲಿ ಮತ್ತೊಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.

ಶ್ಯಾಮಾ ಪ್ರಸಾದ್ ಮುಖರ್ಜಿ ರಾಜಕಾರಣಿ, ನ್ಯಾಯವಾದಿ ಮತ್ತು ಶಿಕ್ಷಣ ತಜ್ಞರಾಗಿದ್ದರು, ಅವರು ಜವಾಹರಲಾಲ್ ನೆಹರೂ ಅವರ ಸಂಪುಟದಲ್ಲಿ ಕೈಗಾರಿಕೆ ಮತ್ತು ಸರಬರಾಜು ಸಚಿವರಾಗಿ ಸೇವೆ ಸಲ್ಲಿಸಿದ್ದರು. ನಂತರ ಅವರು ಕಾಂಗ್ರೆಸ್ ತೊರೆದು 1951 ರಲ್ಲಿ ಭಾರತೀಯ ಜನ ಸಂಘವನ್ನು ಸ್ಥಾಪಿಸಿದರು, ಅದು ನಂತರ ಭಾರತೀಯ ಜನತಾ ಪಕ್ಷ ಬಿಜೆಪಿಯಾಗಿ ವಿಕಸನಗೊಂಡಿತು.

ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಅವರು 1901 ರ ಜುಲೈ 6 ರಂದು ಜನಿಸಿದರು. 1953 ರಲ್ಲಿ ಕಾಶ್ಮೀರಕ್ಕೆ ಹೋದಾಗ, ಅಲ್ಲಿ ಅವರನ್ನು ಬಂಧಿಸಲಾಯಿತು. 1953 ಜೂನ್ 23 ರಂದು ಬಂಧನದಲ್ಲಿರುವಾಗಲೇ ಮೃತಪಟ್ಟರು.

ಯುಎನ್ಐ ಎಸ್ಎ 1159