Wednesday, Oct 20 2021 | Time 15:16 Hrs(IST)
Special Share

ಪಂಜಾಬ್ ನೂತನ ಮುಖ್ಯಮಂತ್ರಿ ಸುಕ್ಜಿಂದರ್ ಸಿಂಗ್ ರಾಂಧವಾ ?

ನವದೆಹಲಿ, ಸೆ 19(ಯುಎನ್‌ ಐ) - ಪಂಜಾಬ್ ನೂತನ ಮುಖ್ಯಮಂತ್ರಿಯಾಗಿ ಹಿರಿಯ ಕಾಂಗ್ರೆಸ್ ನಾಯಕ ಸುಕ್ಜಿಂದರ್ ಸಿಂಗ್ ರಾಂಧವಾ ಅವರ ಹೆಸರನ್ನು ಕಾಂಗ್ರೆಸ್‌ ವರಿಷ್ಟರು ಸೂಚಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಆದರೆ, ಇದನ್ನು ಅಧಿಕೃತವಾಗಿ ಘೋಷಿಸಬೇಕಿದೆ. ಹೊಸ ಮುಖ್ಯಮಂತ್ರಿ ಆಯ್ಕೆಗಾಗಿ ಪಕ್ಷದ ನಿಯೋಜಿತ ವೀಕ್ಷಕರು ರಾಹುಲ್ ಗಾಂಧಿಯೊಂದಿಗೆ ವಿಡಿಯೋ ಕಾಲ್‌ ನಲ್ಲಿ ಮಾತನಾಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಒಂದು ಹಂತದಲ್ಲಿ, ಪಿಪಿಸಿಸಿ ಮಾಜಿ ಮುಖ್ಯಸ್ಥ ಸುನಿಲ್ ಜಾಖರ್ ಅವರ ಹೆಸರು ಬಲವಾಗಿ ಕೇಳಿಬಂದಿತ್ತಾದರೂ, ಕೊನೆ ಕ್ಷಣದಲ್ಲಿ ಪಕ್ಷ ಮರುಪರಿಶೀಲಿಸಿದೆ ಎಂದು ಹೇಳಲಾಗಿದೆ . ಹಿಂದೂ ನಾಯಕನನ್ನು ಆಯ್ಕೆ ಮಾಡಬೇಕಾದರೆ ರಾಜ್ಯಸಭಾ ಸದಸ್ಯೆ ಅಂಬಿಕಾ ಸೋನಿ ಅವರನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಈ ಕ್ರಮದಲ್ಲಿ ಸಿಖ್ ನಾಯಕನಿಗೆ ಮುಖ್ಯಮಂತ್ರಿ ಹುದ್ದೆ ನೀಡುವಂತೆ ಅಂಬಿಕಾ ಸೋನಿ ವರಿಷ್ಟರಿಗೆ ಮನವಿ ಮಾಡಿದ್ದಾರೆ. ನವಜೋತ್ ಸಿಂಗ್ ಸಿಧು ಅವರ ಹೆಸರನ್ನು ವ್ಯಾಪಕವಾಗಿ ಪ್ರಚಾರ ಮಾಡಲಾಗಿಲ್ಲವಾದರೂ, ಅವರನ್ನು ಅಥವಾ ಅವರ ಅನುಯಾಯಿಗಳನ್ನು ಮುಖ್ಯಮಂತ್ರಿ ಎಂದು ಘೋಷಿಸಿದರೆ ವಿಧಾನಸಭೆಯಲ್ಲಿ ಕ್ಯಾಪ್ಟನ್ ಅಮರೀಂದರ್ ಸಿಂಗ್‌ ಬಲ ಪರೀಕ್ಷೆಗೆ ಒತ್ತಾಯಿಸುವ ಸಾಧ್ಯತೆಯನ್ನು ವರಿಷ್ಟರು ಪರಿಗಣಿಸಿದ್ದಾರೆ ಎಂದು ಹೇಳಲಾಗಿದೆ. ಈ ಕ್ರಮದಲ್ಲಿ ಸಿಖ್ ನಾಯಕ, ಸಂಪುಟ ಸಚಿವ ಸುಖಜಿಂದರ್ ಸಿಂಗ್ ರಾಂಧವಾ ಅವರ ಬಗ್ಗೆ ಕಾಂಗ್ರೆಸ್‌ ವರಿಷ್ಟರು ಒಲವು ತೋರುತ್ತಿದ್ದಾರೆ.
ಯುಎನ್‌ ಐ ಕೆವಿಆರ್‌ 1540