Wednesday, Jan 26 2022 | Time 18:50 Hrs(IST)
Sports Share

ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸ.. ಹೊಸ ವೇಳಾಪಟ್ಟಿ

ಮುಂಬೈ, ಡಿ 6(ಯುಎನ್‌ ಐ) - ಕೊರೊನಾ ಹೊಸ ರೂಪಾಂತರಿ "ಓಮಿಕ್ರಾನ್‌" ಭೀತಿ ಹಿನ್ನೆಲೆಯಲ್ಲಿ ಸಂದಿಗ್ದತೆಗೆ ಸಿಲುಕಿದ್ದ ಟೀಮ್ ಇಂಡಿಯಾದ ದಕ್ಷಿಣ ಆಫ್ರಿಕಾ ಪ್ರವಾಸ ಕೊನೆಗೂ ನಿಗಧಿಗೊಂಡಿದೆ. ಮೂರು ಟೆಸ್ಟ್, ಮೂರು ಏಕದಿನ ಪಂದ್ಯಗಳ ಸರಣಿಗಾಗಿ ಭಾರತ ತಂಡ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣ ಬೆಳೆಸಲಿದೆ. ಆದರೆ, ಈ ಮೊದಲು ನಿಗದಿಪಡಿಸಿದಂತೆ ಡಿಸೆಂಬರ್ 17 ರ ಬದಲಿಗೆ ಡಿಸೆಂಬರ್ 26 ರಿಂದ ಸರಣಿ ಪ್ರಾರಂಭವಾಗಲಿದೆ. ಅದೇ ರೀತಿ ನಾಲ್ಕು ಪಂದ್ಯಗಳ ಟಿ- 20 ಸರಣಿಯನ್ನು ಸದ್ಯಕ್ಕೆ ಮುಂದೂಡಲಾಗಿದೆ.
ಟೀಂ ಇಂಡಿಯಾ ಪ್ರವಾಸದ ಹಿನ್ನೆಲೆಯಲ್ಲಿ ಟೆಸ್ಟ್, ಏಕದಿನ ಸರಣಿಗೆ ಸಂಬಂಧಿಸಿದ ಹೊಸ ವೇಳಾಪಟ್ಟಿಯನ್ನು ಕ್ರಿಕೆಟ್ ದಕ್ಷಿಣ ಆಫ್ರಿಕಾ ಸೋಮವಾರ ಪ್ರಕಟಿಸಿದೆ. T-20 ಸರಣಿಯನ್ನು ಹೊಸ ವರ್ಷದಲ್ಲಿ ನಡೆಸಲು ಯೋಜಿಸುತ್ತಿದ್ದು ಅದರ ವಿವರ ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು ಎಂದು ಹೇಳಿದೆ. ತವರಿನಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಟೀಂ ಇಂಡಿಯಾ ಟೆಸ್ಟ್ ಸರಣಿ ಗೆದ್ದಿರುವುದು ಗೊತ್ತೇ ಇದೆ. ಈ ಕ್ರಮಾಂಕದಲ್ಲಿ ಕೊಹ್ಲಿ ಸೇನೆ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದೆ.
ದಕ್ಷಿಣ ಆಫ್ರಿಕಾ - ಟೀಮ್ ಇಂಡಿಯಾ ಸರಣಿ - ಹೊಸ ವೇಳಾಪಟ್ಟಿ
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್- ಮೂರು ಟೆಸ್ಟ್ ಪಂದ್ಯಗಳು:
ಡಿಸೆಂಬರ್ 26-30: ಸೂಪರ್‌ಸ್ಪೋರ್ಟ್ ಪಾರ್ಕ್-ಸೆಂಚುರಿಯನ್
ಜನವರಿ 03-07: ಇಂಪೀರಿಯಲ್ ವಾಂಡರರ್ಸ್ - ಜೋಹಾನ್ಸ್‌ಬರ್ಗ್
ಜನವರಿ 11-15: ಸಿಕ್ಸ್ ಗನ್ ಗನ್ ಗ್ರಿಲ್ ನ್ಯೂಲ್ಯಾಂಡ್ಸ್ - ಕೇಪ್ ಟೌನ್
ಏಕದಿನ ಸರಣಿ ವೇಳಾಪಟ್ಟಿ
ಜನವರಿ 19: ಯುರೋಲಾಕ್ಸ್ ಬೋಲ್ಯಾಂಡ್ ಪಾರ್ಕ್-ಪರ್ಲ್
ಜನವರಿ 21: ಯುರೋಲಾಕ್ಸ್ ಬೋಲ್ಯಾಂಡ್ ಪಾರ್ಕ್-ಪರ್ಲ್
ಜನವರಿ 23: ಸಿಕ್ಸ್ ಗನ್ ಗನ್ ಗ್ರಿಲ್ ನ್ಯೂಲ್ಯಾಂಡ್ಸ್ - ಕೇಪ್ ಟೌನ್
ಯುಎನ್‌ ಐ ಕೆವಿಆರ್‌ 9.32
There is no row at position 0.