Friday, Oct 22 2021 | Time 06:02 Hrs(IST)
Special Share

ಸ್ವಾಮಿ ಪ್ರಭುಪಾದ ನಿಜವಾದ ದೇಶಭಕ್ತ: ಪ್ರಧಾನಿ ಮೋದಿ

ನವದೆಹಲಿ, ಸೆ 1(ಯುಎನ್‌ ಐ) ಭಕ್ತಿ ವೇದಾಂತ ಸ್ವಾಮಿ ಪ್ರಭುಪಾದರ 125 ನೇ ಜಯಂತಿಯ ಸ್ಮರಣಾರ್ಥ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 125 ರೂಗಳ ವಿಶೇಷ ನಾಣ್ಯವನ್ನು ಬುಧವಾರ ಬಿಡುಗಡೆ ಮಾಡಿದರು.
ವೀಡಿಯೋ ಕಾನ್ಫರೆನ್ಸ್ ಮೂಲಕ ಸ್ವಾಮಿ ಪ್ರಭು ಪಾದ ಜಯಂತಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಸಾಧನೆ ಎಂಬುದು ಸಂತೋಷ , ಸಂತೃಪ್ತಿಯ ಮಿಶ್ರಣದಂತಿರುತ್ತದೆ. ಆ ಅನುಭೂತಿಯನ್ನು ಪ್ರಪಂಚದಾದ್ಯಂತ ಕೋಟ್ಯಾಂತರ ಮಂದಿ ಶ್ರೀಕೃಷ್ಣ ಭಕ್ತರು, ಸ್ವಾಮಿ ಪ್ರಭು ಪಾದ ಭಕ್ತರು ಅನುಭವಿಸುತ್ತಿದ್ದಾರೆ ಎಂದು ಮೋದಿ ಹೇಳಿದರು.
ಸ್ವಾಮಿ ಪ್ರಭು ಪಾದಜೀ ಕೇವಲ ಅತೀಂದ್ರಿಯ ಭಕ್ತ ಮಾತ್ರವಲ್ಲದೆ, ಅವರು ನಿಜವಾದ ದೇಶ ಭಕ್ತ ಎಂದು ಬಣ್ಣಿಸಿದರು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು ಅಸಹಕಾರ ಚಳುವಳಿಯನ್ನು ಬೆಂಬಲಿಸಿ, ಸ್ಕಾಟಿಷ್ ಕಾಲೇಜಿನಿಂದ ಡಿಪ್ಲೊಮಾ ಪಡೆದು ಕೊಳ್ಳಲು ನಿರಾಕರಿಸಿದ್ದರು ಅವರ ಕಲ್ಪನೆಯಿಂದ ಹುಟ್ಟಿದ ಇಸ್ಕಾನ್, ಲಕ್ಷಾಂತರ ಜನರಿಗೆ ಪರಿಹಾರ ಮಾರ್ಗವಾಗಿ ರೂಪುಗೊಂಡಿದೆ ಎಂದರು.
ಪ್ರಸ್ತುತ ಪ್ರಪಂಚದ ವಿವಿಧ ದೇಶಗಳಲ್ಲಿ ನೂರಾರು ಇಸ್ಕಾನ್ ದೇವಾಲಯಗಳಿವೆ. ಅದೆಷ್ಟೋ ಗುರುಕುಲಗಳು ಭಾರತೀಯ ಸಂಸ್ಕೃತಿಯನ್ನು ಜೀವಂತವಾಗಿರಿಸುತ್ತಿವೆ ಎಂದು ಮೋದಿ ನುಡಿದರು. ಭಾರತ ದೇಶಕ್ಕೆ ವಿಶ್ವಾಸ ಎಂದರೆ ಉತ್ಸಾಹ, ಉತ್ಸಾಹ, ಉಲ್ಲಾಸ ಹಾಗೂ ಮಾನವೀಯತೆಯಲ್ಲಿ ನಂಬಿಕೆ ಎಂದು ಇಸ್ಕಾನ್ ಜಗತ್ತಿಗೆ ಹೇಳಿದೆ ಎಂದು ಮೋದಿ ನುಡಿದರು.
ಭಕ್ತಿ ಕಾಲದ ಸಾಮಾಜಿಕ ಕ್ರಾಂತಿ ಇಲ್ಲವಾಗಿದ್ದರೆ, ಭಾರತ ಇಂದು ಎಲ್ಲಿ ಇರುತ್ತಿತ್ತೋ.. ಯಾವ ರೂಪದಲ್ಲಿರುತ್ತಿತ್ತೋ ಎಂದು ತಿಳಿಯದು ಎಂದು ವಿದ್ವಾಂಸರು ಈಗ ಊಹಿಸುತ್ತಿದ್ದಾರೆ. ಪ್ರಪಂಚದಾದ್ಯಂತ ಇಸ್ಕಾನ್‌ ಮೂಲಕ ಹರೆ ಕೃಷ್ಣ ಚಳುವಳಿಯನ್ನು ವಿಶ್ವಕ್ಕೆ ಕೊಂಡೊಯ್ದಿತು ಶ್ರೀಮದ್‌ ಭಗವದ್‌ ಗೀತೆಯಂತಹ ಅನೇಕ ವೈದಿಕ ಸಾಹಿತ್ಯಗಳನ್ನು ಜಗತ್ತಿಗೆ ಪರಿಚಯಿಸಿದರು ಎಂದು ಮೋದಿ ಹೇಳಿದರು. ಪ್ರಪಂಚದಾದ್ಯಂತ 100 ಕ್ಕೂ ಹೆಚ್ಚು ದೇವಸ್ಥಾನಗಳನ್ನು ಸ್ಥಾಪಿಸಿದ ಸ್ವಾಮಿ ಪ್ರಭುದಾಸ, ಭಕ್ತಿ ಯೋಗದ ಬಗ್ಗೆ ಅನೇಕ ಪುಸ್ತಕಗಳನ್ನು ರಚಿಸಿದ್ದಾರೆ ಎಂದರು.
ಯುಎನ್‌ ಐ ಕೆವಿಆರ್‌ 19.44
More News
ಭಾರತದಲ್ಲಿ ಗಲ್ಲಿ ಕ್ರಿಕೆಟಿಗ; ಓಮನ್ ನಲ್ಲಿ ಸ್ಟಾರ್ ಆಟಗಾರ!

ಭಾರತದಲ್ಲಿ ಗಲ್ಲಿ ಕ್ರಿಕೆಟಿಗ; ಓಮನ್ ನಲ್ಲಿ ಸ್ಟಾರ್ ಆಟಗಾರ!

21 Oct 2021 | 1:28 PM

ಭಾರತದ ಗಲ್ಲಿ ಗಲ್ಲಿಗಳಲ್ಲಿ ಆಡುತ್ತಿದ್ದ ಹುಡುಗ ಈಗ ಓಮನ್ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ. ಟಿ-20 ವಿಶ್ವಕಪ್ ನ ಅರ್ಹತಾ ಪಂದ್ಯಗಳಲ್ಲಿ ಆಡುತ್ತಿರುವ ಜತೀಂದರ್ ಸಿಂಗ್, ಓಮನ್ ತಂಡದ ಸ್ಟಾರ್ ಆಟಗಾರನಾಗಿದ್ದಾನೆ.

 Sharesee more..