Wednesday, Dec 8 2021 | Time 23:47 Hrs(IST)
Sports Share

ವಿಶ್ವ ಟೇಬಲ್ ಟೆನಿಸ್ ಶ್ರೇಯಾಂಕ, ಪೊಯಸ್ ಜೈನ್ ನಂ 1

ನವದೆಹಲಿ, ಅ 20 (ಯುಎನ್‌ ಐ) - ಭಾರತೀಯ ಟೇಬಲ್ ಟೆನಿಸ್ (ಟಿಟಿ) ಯುವ ತಾರೆ ಪೊಯಸ್ ಜೈನ್ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಅಂತರರಾಷ್ಟ್ರೀಯ ಟಿ ಟಿ ಫೆಡರೇಶನ್ ವಿಶ್ವ ಶ್ರೇಯಾಂಕದಲ್ಲಿ 17 ವರ್ಷದೊಳಗಿನ ಬಾಲಕರ ಸಿಂಗಲ್ಸ್‌ನಲ್ಲಿ ವಿಶ್ವ ನಂಬರ್ ಒನ್ ಶ್ರೇಯಾಂಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಪೋಯಸ್ ಜೈನ್ ಇತ್ತೀಚಿಗೆ ಮೂರು ಅಂತರಾಷ್ಟ್ರೀಯ ಟೈಟಲ್ಸ್‌ ಗೆದ್ದಿದ್ದಾರೆ. ಮಾನವ ಠಕ್ಕರ್ ( ಅಂಡರ್-‌ 21) ನಂತರ ಐ ಟಿ ಟಿ ಎಫ್ ಶ್ರೇಯಾಂಕದಲ್ಲಿ ನಂಬರ್ ಒನ್ ಸ್ಥಾನ ಪಡೆದ ಎರಡನೇ ಭಾರತೀಯ ಆಟಗಾರ ಪೋಯಸ್ ಜೈನ್ ಎಂಬುದು ವಿಶೇಷ
ವಿಶ್ವ ಜಿಮ್ನಾಸ್ಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಜಿಮ್ನಾಸ್ಟ್ ಬುದ್ಧ ಅರುಣ ರೆಡ್ಡಿ ವಾಲ್ಟ್ ವಿಭಾಗದ ಅಂತಿಮ ಸ್ಪರ್ಧೆಗೆ ಅರ್ಹತೆ ಪಡೆಯಲು ಸಾಧ್ಯವಾಗಿಲ್ಲ.. ಜಪಾನ್‌ನಲ್ಲಿ ನಡೆದ ಮೆಗಾ ಈವೆಂಟ್‌ನಲ್ಲಿ ಅರುಣಾ ರೆಡ್ಡಿ ಅವರು 13.353 ಅಂಕಗಳೊಂದಿಗೆ 11 ನೇ ಸ್ಥಾನ ಪಡೆದರು. ಅಗ್ರ 8 ಸ್ಥಾನ ಪಡೆದವರಿಗೆ ಫೈನಲ್‌ ಗೆ ಸ್ಥಾನ ಲಭ್ಯವಾಗಲಿದೆ. ಮೂವರು ಆಟಗಾರರು ಅಗ್ರ -8 ರಿಂದ ಹೊರಬಿದ್ದರೆ ಮಾತ್ರ ಅರುಣಾ ರೆಡ್ಡಿಗೆ ಫೈನಲ್‌ನಲ್ಲಿ ಸ್ಪರ್ಧಿಸುವ ಅವಕಾಶ ಲಭ್ಯವಾಗಬಹುದು.
ಯುಎನ್‌ ಐ ಕೆವಿಆರ್‌ 9.53