Monday, Sep 20 2021 | Time 08:01 Hrs(IST)
National Share

ಪುದುಚೇರಿಯಲ್ಲಿ 232ನೇ ಫ್ರಾನ್ಸ್ ರಾಷ್ಟ್ರೀಯ ದಿನ ಆಚರಣೆ

ಪುದುಚೇರಿ, ಜುಲೈ 14(ಯುಎನ್ಐ)- ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ 232ನೇ ಫ್ರಾನ್ಸ್ ರಾಷ್ಟ್ರೀಯ ದಿನವನ್ನು ಬುಧವಾರ ಆಚರಿಸಲಾಯಿತು.
ಕೊರೊನಾ ವೈರಸ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಯಾವುದೇ ಅತಿಥಿಗಳನ್ನು ಆಹ್ವಾನಿಸದೆ ಸರಳ ರೀತಿಯಲ್ಲಿ ಆಚರಿಸಲಾಯಿತು.
ಪುದುಚೇರಿಯಲ್ಲಿನ ಫ್ರಾನ್ಸ್ ಕೌನ್ಸಲ್‍ ಜನರಲ್ ಮೆ ಲಿಸ್ ಟಲ್ಬೊಟ್ ಬರ್ರೆ ಮತ್ತು ಲೆಫ್ಟಿನೆಂಟ್ ಜನರಲ್ ಡಾ ತಮಿಳ್‍ ಸೈ ಸೌಂದರರಾಜನ್‍ ಪರವಾಗಿ ಉಪ ಕಲೆಕ್ಟರ್ ಕೆ ಮುರಳೀಧರನ್‍ ಅವರು ಗೌಬೆಟ್ ಅವೆನ್ಯೂದಲ್ಲಿನ ‘ಆಕ್ಸ್ ಮೊರ್ಟಸ್‍’ (ಯೋಧರರ ಸ್ಮಾರಕ)ದಲ್ಲಿ ಪುಷ್ಪಗುಚ್ಛವಿರಿಸಿ ಗೌರವ ಸಲ್ಲಿಸದರು.
ಕೇಂದ್ರಾಡಳಿತ ಪುದುಚೇರಿ ಆಡಳಿತಕ್ಕೆ ದೂರದ ಕೇರಳದಲ್ಲಿನ ಮಾಹೆ, ಆಂಧ್ರಪ್ರದೇಶದ ಯಾನಂ ಮತ್ತು ತಮಿಳುನಾಡಿನ ಕರೈಕಲ್‍ ಸೇರಿವೆ.
ಯುಎನ್‍ಐ ಎಸ್ಎಲ್ಎಸ್ 1120