Friday, Oct 22 2021 | Time 05:59 Hrs(IST)
Special Share

ತಾಲಿಬಾನ್ ನಾಯಕನೊಂದಿಗೆ ಭಾರತ ಮಾತುಕತೆ

ನವದೆಹಲಿ, ಆಗಸ್ಟ್ ೩೧(ಯು ಎನ್ ಐ) ಕತಾರ್‌ನಲ್ಲಿ ಭಾರತದ ರಾಯಭಾರಿಯಾಗಿರುವ ದೀಪಕ್ ಮಿತ್ತಲ್ ಅವರು ಇಂದು ದೋಹಾದಲ್ಲಿರುವ ತಾಲಿಬಾನ್‌ನ ರಾಜಕೀಯ ಕಚೇರಿಯ ಮುಖ್ಯಸ್ಥ ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟ್ಯಾನ್‌ಕಜೈ ಅವರನ್ನು ಭೇಟಿ ಮಾಡಿದ್ದರು.
ತಾಲಿಬಾನ್ ಕಡೆಯಿಂದ ಬಂದ ಕೋರಿಕೆ ಹಿನ್ನೆಲೆಯಲ್ಲಿ ದೋಹಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಲ್ಲಿ ಈ ಸಭೆ ನಡೆಯಿತು.
ಆಫ್ಘಾನಿಸ್ಥಾನದಲ್ಲಿ ಸಿಲುಕಿಕೊಂಡಿರುವ ಭಾರತೀಯ ನಾಗರಿಕರ ಸುರಕ್ಷತೆ, ಭದ್ರತೆ ಹಾಗೂ ಆದಷ್ಟು ಶೀಘ್ರ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಸಭೆಯಲ್ಲಿ ಚರ್ಚೆ ಕೇಂದ್ರೀಕೃತಗೊಂಡಿತ್ತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.
ಆಫ್ಘನ್ ರಾಷ್ಟ್ರೀಯರ ಪ್ರಯಾಣ, ವಿಶೇಷವಾಗಿ ಭಾರತಕ್ಕೆ ಭೇಟಿ ನೀಡಬೇಕೆಂಬ ಅಲ್ಪಸಂಖ್ಯಾತರ ವಿಷಯ ಕೂಡ ಚರ್ಚೆಗೆ ಬಂದಿತ್ತು ಎಂದು ತಿಳಿಸಿದೆ.
ಆಫ್ಘಾನಿಸ್ಥಾನದ ಪ್ರದೇಶದಲ್ಲಿ ಭಾರತ ವಿರೋಧಿ ಚಟುವಟಿಕೆಗಳಿಗೆ ಹಾಗೂ ಯಾವುದೇ ರೀತಿಯ ಭಯೋತ್ಪಾದನೆಗೆ ಬಳಸಬಾರದು ಎಂದು ಭಾರತದ ಕಳವಳವನ್ನು ರಾಯಭಾರಿ ದೀಪಕ್ ಮಿತ್ತಲ್ ಸಭೆಯಲ್ಲಿ ಪ್ರಸ್ತಾಪಿಸಿದರು.
ಭಾರತ ಎತ್ತಿರುವ ಎಲ್ಲ ವಿಷಯಗಳನ್ನು ಸಕಾರಾತ್ಮಕವಾಗಿ ಪರಿಹರಿಸಲಾಗುವುದು ಎಂದು ತಾಲಿಬಾನ್ ಪ್ರತಿನಿಧಿ ರಾಯಭಾರಿಗೆ ಭರವಸೆ ನೀಡಿದ್ದಾರೆ ಎಂದು ತಿಳಿಸಿದೆ.
ಯುಎನ್ ಐ ಕೆವಿಆರ್ ೧೯೨೫
More News
ಭಾರತದಲ್ಲಿ ಗಲ್ಲಿ ಕ್ರಿಕೆಟಿಗ; ಓಮನ್ ನಲ್ಲಿ ಸ್ಟಾರ್ ಆಟಗಾರ!

ಭಾರತದಲ್ಲಿ ಗಲ್ಲಿ ಕ್ರಿಕೆಟಿಗ; ಓಮನ್ ನಲ್ಲಿ ಸ್ಟಾರ್ ಆಟಗಾರ!

21 Oct 2021 | 1:28 PM

ಭಾರತದ ಗಲ್ಲಿ ಗಲ್ಲಿಗಳಲ್ಲಿ ಆಡುತ್ತಿದ್ದ ಹುಡುಗ ಈಗ ಓಮನ್ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ. ಟಿ-20 ವಿಶ್ವಕಪ್ ನ ಅರ್ಹತಾ ಪಂದ್ಯಗಳಲ್ಲಿ ಆಡುತ್ತಿರುವ ಜತೀಂದರ್ ಸಿಂಗ್, ಓಮನ್ ತಂಡದ ಸ್ಟಾರ್ ಆಟಗಾರನಾಗಿದ್ದಾನೆ.

 Sharesee more..