Sunday, Nov 28 2021 | Time 08:21 Hrs(IST)
Special Share

ಶಾರುಖ್ ಖಾನ್, ಅನನ್ಯ ಪಾಂಡೆ ನಿವಾಸಗಳ ಎನ್ ಸಿ ಬಿ ದಾಳಿ

ಮುಂಬೈ, ಅ 21 (ಯುಎನ್ಐ ) ಮಹತ್ವ ಬೆಳವಣಿಗೆಯಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಹಾಗೂ ನಟಿ ಅನನ್ಯ ಪಾಂಡೆ ಅವರ ನಿವಾಸಗಳ ಮೇಲೆ ಎನ್ ಸಿ ಬಿ ಅಧಿಕಾರ ಗಳ ತಂಡ ಇಂದು ಹಠಾತ್ ದಾಳಿ ನಡೆಸಿ, ನಡುಕ ಹುಟ್ಟಿಸಿದೆ.

ಇಂದು ಏಕಾಏಕಿ ಮುಂಬೈನ ಬಾಲಿವುಡ್ ನಟ ಶಾರುಖ್ ಖಾನ್ ಹಾಗೂ ನಟಿ ಅನನ್ಯಾ ಪಾಂಡೆ ನಿವಾಸಗಳ ಮೇಲೆ ಎನ್ ಸಿ ಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಡ್ರಗ್ಸ್ ಪ್ರಕರಣ ಸಂಬಂಧ ಪರಿಶೀಲನೆ ನಡೆಸಿ ಅನೇಕ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ನಟ ಶಾರುಖ್ ಖಾನ್ ಪುತ್ರನನ್ನು ಈಗಾಗಲೇ ಡ್ರಗ್ ಪ್ರಕರಣದಲ್ಲಿ ಎನ್ ಸಿ ಬಿ ಅಧಿಕಾರಿಗಳು ಬಂಧಿಸಿದ್ದಾರೆ. ಇದೆ 8ರಿಂದ ಮುಂಬೈನ ಅರ್ಥರ್ ರಸ್ತೆಯಲ್ಲಿನ ಜೈಲಿನಲ್ಲಿ ಆರ್ಯನ್ ಖಾನ್ ಇದ್ದಾರೆ. ಇದೇ ಸಂದರ್ಭದಲ್ಲಿ ನಟ ಶಾರುಖ್ ಖಾನ್ ಮನೆಯ ಮೇಲೆ ಎನ್ ಸಿ ಬಿ ಅಧಿಕಾರಿ ಇಂದು ದಾಳಿ ನಡೆಸಿರುವುದು ಭಾರಿ ಕೂತುಹಲಕ್ಕೆ ಕಾರಣವಾಗಿದೆ.

ಯುಎನ್ಐ ಕೆಎಸ್ ಆರ್ 1305