Wednesday, Sep 29 2021 | Time 03:19 Hrs(IST)
business economy Share

ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 300 ಅಂಕ ಜಿಗಿತ

ಮುಂಬೈ, ಜುಲೈ 5 (ಯುಎನ್‌ಐ) – ಎಲ್ಲ ವಲಯಗಳ ಷೇರುಗಳಿಗೆ ಖರೀದಿ ಬೆಂಬಲ ವ್ಯಕ್ತವಾದ ಹಿನ್ನೆಲೆಯಲ್ಲಿ ಮುಂಬೈ ಷೇರು ವಿನಿಮಯ ಕೇಂದ್ರ(ಬಿಎಸ್‍ಇ)ದ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್, ಸೋಮವರಾ ಆರಂಭಿಕ ವಹಿವಾಟಿನಲ್ಲಿ 346.19 ಅಂಕ ಏರಿಕೆ ಕಂಡು 52,830.86 ಕ್ಕೆ ತಲುಪಿದೆ. ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ(ಎನ್‍ಎಸ್‍ಇ)ದ ಸೂಚ್ಯಂಕ ನಿಫ್ಟಿ ಸಹ 103 ಅಂಕ ಏರಿಕೆ ಕಂಡು 15,825.20 ಕ್ಕೆ ತಲುಪಿದೆ.

ಸೆನ್ಸೆಕ್ಸ್, ಆರಂಭಿಕ ವಹಿವಾಟಿನಲ್ಲಿ ಕನಿಷ್ಠ ಮತ್ತು ಗರಿಷ್ಠ ಕ್ರಮವಾಗಿ 52,871.29 ಮತ್ತು 52,604.35ರಲ್ಲಿತ್ತು.

ನಿಫ್ಟಿ ಆರಂಭಿಕ ವಹಿವಾಟಿನಲ್ಲಿ ಕನಿಷ್ಠ ಮತ್ತು ಗರಿಷ್ಠ ಕ್ರಮವಾಗಿ 15,833.20 ಮತ್ತು 15,762.05 ರಲ್ಲಿತ್ತು.

ಪ್ರಮುಖ 30 ಕಂಪೆನಿಗಳ ಷೇರುಗಳ ಪೈಕಿ 27 ಏರಿಕೆ ಕಂಡರೆ, 3 ಕಂಪೆನಿಗಳ ಷೇರುಗಳು ಕುಸಿದಿವೆ.

ಲಾಭ ಗಳಿಸಿದ ಪ್ರಮುಖ ಷೇರುಗಳ ಪೈಕಿ ಬಜಾಜ್ ಫಿನ್‌ಸರ್ವ್, ಎಲ್ ಆಂಡ್ ಟಿ, ಎಚ್‌ಡಿಎಫ್‌ಸಿ ಬ್ಯಾಂಕ್, ಮಾರುತಿ ಸುಜುಕಿ ಮತ್ತು ಬಜಾಜ್ ಆಟೋ ಸೇರಿವೆ.

ನಷ್ಟ ಕಂಡ ಪ್ರಮುಖ ಷೇರುಗಳೆಂದರೆ, ಟೆಕ್ ಮಹೀಂದ್ರಾ, ನೆಸ್ಲೆ ಇಂಡಿಯಾ, ಟೈಟಾನ್, ಡಾ.ರೆಡ್ಡೀಸ್ ಲ್ಯಾಬ್.

ಯುಎನ್‍ಐ ಎಸ್ಎಲ್ಎಸ್ 1205