Wednesday, Sep 29 2021 | Time 04:28 Hrs(IST)
business economy Share

ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 58 ಅಂಕ ಏರಿಕೆ

ಮುಂಬೈ, ಜುಲೈ 7 (ಯುಎನ್‌ಐ) – ಹಣಕಾಸು, ಆರೋಗ್ಯ ರಕ್ಷಣೆ ಸೇರಿದಂತೆ ಕೆಲ ವಲಯಗಳ ಷೇರುಗಳಿಗೆ ಖರೀದಿ ಬೆಂಬಲ ವ್ಯಕ್ತವಾದ ಹಿನ್ನೆಲೆಯಲ್ಲಿ ಮುಂಬೈ ಷೇರು ವಿನಿಮಯ ಕೇಂದ್ರ(ಬಿಎಸ್‍ಇ)ದ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್, ಬುಧವಾರ ಆರಂಭಿಕ ವಹಿವಾಟಿನಲ್ಲಿ 58 ಅಂಕ ಏರಿಕೆ ಕಂಡು 52,919.71 ಕ್ಕೆ ತಲುಪಿದೆ.
ಆದರೆ, ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ(ಎನ್‍ಎಸ್‍ಇ)ದ ಸೂಚ್ಯಂಕ ನಿಫ್ಟಿ ಸ್ಥಿರವಾಗಿತ್ತು.
ನಿಫ್ಟಿ ಆರಂಭಿಕ ವಹಿವಾಟಿನಲ್ಲಿ ಕನಿಷ್ಠ ಮತ್ತು ಗರಿಷ್ಠ ಕ್ರಮವಾಗಿ 15,833.20 ಮತ್ತು 15,762.05 ರಲ್ಲಿತ್ತು.
ಸೆನ್ಸೆಕ್ಸ್, ಆರಂಭಿಕ ವಹಿವಾಟಿನಲ್ಲಿ ಕನಿಷ್ಠ ಮತ್ತು ಗರಿಷ್ಠ ಕ್ರಮವಾಗಿ 53,006 ಮತ್ತು 52,751.76 ರಲ್ಲಿತ್ತು.

ಪ್ರಮುಖ 30 ಕಂಪೆನಿಗಳ ಷೇರುಗಳ ಪೈಕಿ 16 ಏರಿಕೆ ಕಂಡರೆ, 14 ಕಂಪೆನಿಗಳ ಷೇರುಗಳು ಕುಸಿದಿವೆ.
ಲಾಭ ಗಳಿಸಿದ ಪ್ರಮುಖ ಷೇರುಗಳ ಪೈಕಿ ಎಚ್‍ ಡಿಎಫ್‍ ಸಿ, ಏಷ್ಯನ್‍ ಪೇಂಟ್ಸ್‍ , ಬಜಾಜ್ ಫಿನ್‌ಸರ್ವ್, ಸನ್‍ ಫಾರ್ಮಾ, ಐಟಿಸಿ ಸೇರಿವೆ.
ನಷ್ಟ ಕಂಡ ಪ್ರಮುಖ ಷೇರುಗಳ ಪೈಕಿ, ಟೆಕ್ ಮಹೀಂದ್ರಾ, ಟೈಟಾನ್, ಅಲ್ಟ್ರಾಸೆಮ್ಕೊ ಮತ್ತು ಇನ್ಫೋಸಿಸ್‍ ಸೇರಿವೆ.
ಯುಎನ್‍ಐ ಎಸ್‍ ಎಲ್‍ ಎಸ್‍ 1125