Monday, Sep 20 2021 | Time 08:24 Hrs(IST)
National Share

ಮಾಜಿ ಕೇಂದ್ರ ಸಚಿವ ಕುಮಾರಮಂಗಳಂ ಪತ್ನಿ ಬರ್ಬರ ಕೊಲೆ

ನವದೆಹಲಿ, ಜುಲೈ 7(ಯುಎನ್ಐ) ಕೇಂದ್ರದ ಮಾಜಿ ಸಚಿವ ಪಿ.ಆರ್. ಕುಮಾರಮಂಗಳಂ ಅವರ ಪತ್ನಿ ಕಿಟ್ಟು ಕುಮಾರಮಂಗಲಂ ಅವರನ್ನು ದೆಹಲಿಯ ಮನೆಯಲ್ಲಿ ಬೀಕರವಾಗಿ ಕೊಲೆ ಮಾಡಲಾಗಿದೆ. ಈ ಸುದ್ದಿ ದೆಹಲಿ ಜನರನ್ನು ಬೆಚ್ಚಿ ಬೀಳಿಸಿದೆ.
ಕುಮಾರಮಂಗಲಂ ಪತ್ನಿ ಕಿಟ್ಟು ಕುಮಾರಮಂಗಲಂ ಕಳದೆ ರಾತ್ರಿ ವಸಂತ ವಿಹಾರದಲ್ಲಿರುವ ನಿವಾಸದಲ್ಲಿ ಹತ್ಯೆಯಾಗಿರುವ ಕುರಿತು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಕರಣಕ್ಕೆ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಲಾಗಿದ್ದು, ಮತ್ತಿಬ್ಬರಿಗಾಗಿ ಶೋಧನೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ ರಾತ್ರಿ 9 ಗಂಟೆ ಸುಮಾರಿಗೆ ಈಘಟನೆ ಜರುಗಿದೆ ಮನೆಯಲ್ಲಿ ದರೋಡೆ ನಡೆಯುವ ಸಂದರ್ಭದಲ್ಲಿ ಹತ್ಯೆ ನಡೆದಿದೆ ಎನ್ನಲಾಗಿದೆ. ಅವರ ಪತಿ ಪಿಆರ್ ಕುಮಾರಮಂಗಲಂ ಅವರು ಪಿ. ವಿ. ನರಸಿಂಹರಾವ್ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದು ಬಳಿಕ ಬಿಜೆಪಿಗೆ ಸೇರ್ಪಡೆಯಾಗಿದ್ದರು. ವಾಜಪೇಯಿ ಸಂಪುಟದಲ್ಲೂ ಇಂಧನ ಖಾತೆ ಸಹಾಯಕ ಸಚಿವರಾಗಿಯೂ ಅವರು ಕೆಲಸ ಮಾಡಿದ್ದರು.
ಯುಎನ್ಐ ಕೆಎಸ್ಆರ್ 0852