Sunday, Oct 24 2021 | Time 01:09 Hrs(IST)
International Share

ಗಿನಿ: ಬಂಡುಕೋರರಿಂದ ರಾಷ್ಟ್ರವ್ಯಾಪಿ ಕರ್ಫ್ಯೂ ಘೋಷಣೆ

ಕೊನಾಕ್ರಿ, ಸೆ. 06 (ಯುಎನ್ಐ/ಸ್ಪುಟ್ನಿಕ್) ಗಿನಿಯ ಬಂಡುಕೋರರು ಅಧ್ಯಕ್ಷ ಆಲ್ಫಾ ಕಾಂಡೆಯನ್ನು ವಶಪಡಿಸಿಕೊಂಡ ಬೆನ್ನಲ್ಲೇ ರಾಷ್ಟ್ರವ್ಯಾಪಿ ಕರ್ಫ್ಯೂ ಘೋಷಿಸಿದ್ದಾರೆ ಎಂದು ಫ್ರೆಂಚ್ ಮಾಧ್ಯಮ ವರದಿ ಮಾಡಿದೆ. "ಮುಂದಿನ ಸೂಚನೆ ಬರುವವರೆಗೂ ಕರ್ಫ್ಯೂ ಸ್ಥಾಪಿಸಲಾಗಿದೆ” ಎಂದು , ಔಸ್ಟ್-ಫ್ರಾನ್ಸ್ ದಿನಪತ್ರಿಕೆ ಭಾನುವಾರ ತಡವಾಗಿ ವರದಿ ಮಾಡಿದೆ.
ಬಂಡುಕೋರರು ತಾವು ಸ್ಥಳೀಯ ಗವರ್ನರ್‌ಗಳನ್ನು ಮತ್ತು ಪ್ರಾಧ್ಯಾಪಕರನ್ನು ಸೈನಿಕರನ್ನಾಗಿ ಬದಲಾಯಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ನುವಾರ ಗಿನಿ ಅಧ್ಯಕ್ಷರ ಮೇಲೆ ದಾಳಿ ಮಾಡಿರುವ ಬಂಡುಕೋರರು ಸೋಮವಾರ ಬೆಳಿಗ್ಗೆ ಕ್ಯಾಬಿನೆಟ್ ಮಂತ್ರಿಗಳು ಮತ್ತು ಇತರ ಉನ್ನತ ಅಧಿಕಾರಿಗಳ ಸಭೆಯನ್ನು ಕರೆದಿದ್ದಾರೆ.
ಅಧ್ಯಕ್ಷ ಆಲ್ಫಾ ಕಾಂಡೆಯವರು ದಂಗೆಯ ನಾಯಕ, ಮಮ್ಮಡಿ ಡೌಂಬೌಯ ವಶದಲ್ಲಿದ್ದಾರೆ. ಬಂಡುಕೋರರು ಸರ್ಕಾರವನ್ನು ವಿಸರ್ಜಿಸುವುದರ ಜೊತೆಗೆ ಸಂವಿಧಾನವನ್ನು ರದ್ದುಗೊಳಿಸುವುದಾಗಿ ಮತ್ತು ಗಡಿಯನ್ನು ಮುಚ್ಚುವುದಾಗಿ ಘೋಷಿಸಿದ್ದಾರೆ.
ವಿಶ್ವಸಂಸ್ಥೆ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರಸ್ ಗಿನಿಯಾ ದಂಗೆಯನ್ನು ಖಂಡಿಸಿದ್ದು, ಅಧ್ಯಕ್ಷರನ್ನು ಬಿಡುಗಡೆ ಮಾಡುವಂತೆ ಟ್ವಿಟರ್ ಮೂಲಕ ಭಾನುವಾರ ಒತ್ತಾಯಿಸಿದ್ದಾರೆ.
ಅಧ್ಯಕ್ಷ ಆಲ್ಫಾ ಕಾಂಡೆ, ಸಂವಿಧಾನಕ್ಕೆ ತಿದ್ದುಪಡಿ ತರುವ ನಿರ್ಧಾರ ನಂತರ ರಾಷ್ಟ್ರೀಯ ಜನಾಭಿಪ್ರಾಯ ಸಂಗ್ರಹದ ಮೂಲಕ ಸಂವಿಧಾನವನ್ನು ಬದಲಿಸಿದರೂ ಇದು ದೇಶದಲ್ಲಿ ಅಶಾಂತಿಯನ್ನು ಹುಟ್ಟುಹಾಕಿತು. ಗಿನಿಯ ಬಂಡಾಯ ಸೇನೆಯ ಬೆಂಬಲಿಗರು ಭಾನುವಾರ ದಂಗೆಯ ನಂತರ ರಾಜಧಾನಿ ಕೊನಕ್ರಿಯ ಬೀದಿಗಿಳಿದರು. ಬೀದಿಗಳಲ್ಲಿ ಜನರು ಸೇನೆಯನ್ನು ಹೊಗಳಿ ಘೋಷಣೆಗಳನ್ನು ಕೂಗುತ್ತಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಯುಎನ್ಐ ಎಸ್ಎ 0651
More News
ಭುಗಿಲೆದ್ದ ಹಿಂಸಾಚಾರ – ಪಾಕಿಸ್ತಾನದಲ್ಲಿ ನಾಲ್ವರು ಸಾವು

ಭುಗಿಲೆದ್ದ ಹಿಂಸಾಚಾರ – ಪಾಕಿಸ್ತಾನದಲ್ಲಿ ನಾಲ್ವರು ಸಾವು

23 Oct 2021 | 12:27 PM

ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಪಾಕಿಸ್ತಾನದಲ್ಲಿ ಸರಣಿ ಪ್ರತಿಭಟನೆಗಳು ಆರಂಭಗೊಂಡಿವೆ. ಇಸ್ಲಾಮಿಸ್ಟ್ ಹಾಗೂ ಭದ್ರತಾ ಪಡೆಗಳ ಮಧ್ಯೆ ನಡದೆ ಘರ್ಷಣೆಯಲ್ಲಿ ಇಬ್ಬರು ಪೊಲೀಸರು ಸಾವಿಗೀಡಾಗಿದ್ದಾರೆ. ಇನ್ನಿಬ್ಬರು ಇಸ್ಲಾಮಿಸ್ಟ್ ಹೋರಾಟಗಾರರು ಅಸುನೀಗಿದ್ದಾರೆ.

 Sharesee more..
ಅನನ್ಯ ಪಾಂಡೆ ಆರ್ಯನ್ ಖಾನ್​ಗೂ ಇರುವ ಸಂಬಂಧ ಏನು ಗೊತ್ತಾ? : ಚಾಟ್ ನಿಂದ ಬಹಿರಂಗವಾಯ್ತು ಡ್ರಗ್ಸ್ ಪೂರೈಕೆ ವಿಚಾರ

ಅನನ್ಯ ಪಾಂಡೆ ಆರ್ಯನ್ ಖಾನ್​ಗೂ ಇರುವ ಸಂಬಂಧ ಏನು ಗೊತ್ತಾ? : ಚಾಟ್ ನಿಂದ ಬಹಿರಂಗವಾಯ್ತು ಡ್ರಗ್ಸ್ ಪೂರೈಕೆ ವಿಚಾರ

22 Oct 2021 | 7:50 PM

ಮುಂಬೈ: ಅ, 22 (ಯುಎನ್‌ಐ) ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ.

 Sharesee more..
ಈ ಪುಟ್ಟ ಪೋರನ ದುಡಿಮೆ ತಿಂಗಳಿಗೆ 75 ಸಾವಿರ ರೂ  !

ಈ ಪುಟ್ಟ ಪೋರನ ದುಡಿಮೆ ತಿಂಗಳಿಗೆ 75 ಸಾವಿರ ರೂ !

22 Oct 2021 | 4:50 PM

ವಾಷಿಂಗ್ಟನ್ : ಅ, 22 (ಯುಎನ್‌ಐ) ಸಾಮಾಜಿಕ ಮಾಧ್ಯಮಗಳಲ್ಲಿ ರಾಜಕಾರಣಿಗಳು, ಸಿನಿಮಾ ನಟ-ನಟಿಯರು ತಮ್ಮದೇ ಆದ ಹವಾವನ್ನು ಕ್ರಿಯೇಟ್​ ಮಾಡಿರುತ್ತಾರೆ.

 Sharesee more..
ರೋಹಿಂಗ್ಯಾ ಗುಂಪುಗಳ ನಡುವೆ ಘರ್ಷಣೆ- ಸಾವು

ರೋಹಿಂಗ್ಯಾ ಗುಂಪುಗಳ ನಡುವೆ ಘರ್ಷಣೆ- ಸಾವು

22 Oct 2021 | 3:23 PM

ಢಾಕಾ,ಅ.

 Sharesee more..
ಮಧುಮಗಳ ಜೊತೆ ವೈರಲ್ ಆಗುತ್ತಿದೆ ನಾಯಿ

ಮಧುಮಗಳ ಜೊತೆ ವೈರಲ್ ಆಗುತ್ತಿದೆ ನಾಯಿ

22 Oct 2021 | 3:22 PM

ಅಮೆರಿಕಾ,ಅ.

 Sharesee more..