Wednesday, Dec 1 2021 | Time 21:15 Hrs(IST)
International Share

ಈ ಪುಟ್ಟ ಪೋರನ ದುಡಿಮೆ ತಿಂಗಳಿಗೆ 75 ಸಾವಿರ ರೂ. !

ಈ ಪುಟ್ಟ ಪೋರನ ದುಡಿಮೆ ತಿಂಗಳಿಗೆ 75 ಸಾವಿರ ರೂ. !

ವಾಷಿಂಗ್ಟನ್ : ಅ, 22 (ಯುಎನ್‌ಐ) ಸಾಮಾಜಿಕ ಮಾಧ್ಯಮಗಳಲ್ಲಿ ರಾಜಕಾರಣಿಗಳು, ಸಿನಿಮಾ ನಟ-ನಟಿಯರು ತಮ್ಮದೇ ಆದ ಹವಾವನ್ನು ಕ್ರಿಯೇಟ್​ ಮಾಡಿರುತ್ತಾರೆ. ಆದ್ರೆ ಇಲ್ಲೊಬ್ಬ ಒಂದು ವರ್ಷದ ಪುಟ್ಟ ಬಾಲಕ ಸಾಮಾಜಿಕ ಜಾಲತಾಣದಲ್ಲಿ ತನ್ನದೇ ಆದ ಜನಮನ್ನಣೆಗಳಿಸುವ ಮೂಲಕ ತಿಂಗಳಿಗೆ 75.000 ರೂ. ದುಡಿಯುತ್ತಿದ್ದಾನೆ.

ಅಮೆರಿಕದ ನಿವಾಸಿ ಬೇಬಿ ಬ್ರಿಗ್ಸ್​ ಇಲ್ಲಿಯವರೆಗೆ 45 ಬಾರಿ ವಿಮಾನ ಪ್ರಯಾಣ ಮಾಡಿದ್ದಾನೆ. ಅಲಸ್ಕಾ, ಕ್ಯಾಲಿಫೋರ್ನಿಯಾ, ಫ್ಲೋರಿಡಾ, ಉತಾಲ್ಲದ ಪಾರ್ಕ್​ಗಳು, ಬೀಚ್​ಗಳು ಸೇರಿದಂತೆ ಅಮೆರಿಕದ ಸುಮಾರು 16 ರಾಜ್ಯಗಳನ್ನು ಈಗಾಗಲೇ ಸುತ್ತಾಡಿದ್ದಾನೆ. ಈ ಮಗು ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಇಷ್ಟು ಬಾರಿ ಪ್ರಯಾಣ ಮಾಡಿ, ತಿಂಗಳಿಗೆ 75,000 ರೂಪಾಯಿ (USD 1000)ಗಳಿಸುತ್ತಿದೆ.

ಕಳೆದ ವರ್ಷ ಅಕ್ಟೋಬರ್ 14 ರಂದು ಬ್ರಿಗ್ಸ್ ಜನಿಸಿದ್ದಾನೆ. ಜನಿಸಿದ ಮೂರು ವಾರಗಳಲ್ಲಿಯೇ ಮೊದಲ ಪ್ರವಾಸವನ್ನು ತನ್ನ ತಾಯಿ ಜೆಸ್ ಜೊತೆ ಮಾಡಿದ್ದಾನೆ. ಈ ವೇಳೆ ಅವರು ಅಲಾಸ್ಕಾದ ಕರಡಿಗಳನ್ನು, ಯೆಲ್ಲೊಸ್ಟೋನ್ ರಾಷ್ಟ್ರೀಯ ಉದ್ಯಾನವನದ ತೋಳ, ಉತಾಹ್ ನ ಸೂಕ್ಷ್ಮವಾದ ಕಮಾನು ಮತ್ತು ಕ್ಯಾಲಿಫೋರ್ನಿಯಾದ ಕಡಲತೀರಗಳನ್ನು ನೋಡಿದ್ದಾರೆ.

ಇನ್ಸ್ಟಾಗ್ರಾಮ್ ನಲ್ಲಿ 30,000ಕ್ಕೂ ಅಧಿಕ ಫಾಲೋವರ್ಸ್​ (ಅನುಯಾಯಿಗಳು)ನನ್ನು ಹೊಂದುವ ಮೂಲಕ ಬ್ರಿಗ್ಸ್​​ಗೆ ಅಪಾರ ಅಭಿಮಾನಿಗಳಿದ್ದಾರೆ. ಮಗುವಿನ ತಾಯಿ ಮೊದಲೇ ಪಾರ್ಟ್ ಟೈಮ್ ಟೂರಿಸ್ಟ್ಸ್ ಎಂಬ ಬ್ಲಾಗ್​​ನನ್ನು ನಡೆಸುತ್ತಿದ್ದರು. ಅದರ ಮೂಲಕ ಅವರು ಪ್ರಪಂಚದಾದ್ಯಂತ ಸಂಚರಿಸಲು ಹಣ ಪಡೆಯುತ್ತಿದ್ದರು.

ನಾನು 2020 ರಲ್ಲಿ ಗರ್ಭಿಣಿಯಾದಾಗ ನನ್ನ ವೃತ್ತಿಜೀವನವು ಮುಗಿಯಿತು ಎಂದು ನಿಜವಾಗಿಯೂ ಹೆದರಿದ್ದೆ. ಏಕೆಂದರೆ ಮಗುವಿನೊಂದಿಗೆ ಈ ರೀತಿ ಸಂಚರಿಸಲು ಸಾಧ್ಯವಿಲ್ಲ ಅಂದುಕೊಂಡಿದ್ದೆ. ಆದ್ರೆ ಇದೀಗ ಅದು ಸಾಧ್ಯವಾಗಿದೆ ಎಂದು ಜೆಸ್ ಹೇಳಿದರು.

ಈ ಮಗುವಿನ ಪೋಷಕರು ವಿವಿಧ ಪ್ರದೇಶಗಳ ಸೌಂದರ್ಯ ಸವಿಯಲು ತಿರುಗುತ್ತಿರುತ್ತಾರೆ. ಈ ಸಂದರ್ಭದಲ್ಲಿ ಮಗುವಿನೊಂದಿಗೆ ಬ್ರಿಗ್ಸ್​ ತಾಯಿ ಜೆಸ್​ ವಿಡಿಯೋ ಮಾಡಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್‌ ಮಾಡುತ್ತಾರೆ. ಬಳಿಕ ಆ ವಿಡಿಯೋಗಳು ವೈರಲ್​ ಆಗುವ ಮೂಲಕ ಹಣ ಗಳಿಸುತ್ತಿದ್ದಾರೆ. ಇವರು ಮಗುವಿನೊಂದಿಗೆ ಸರಿಯಾದ ಮುನ್ನೆಚ್ಚರಿಕೆಗಳೊಂದಿಗೆ ಕೋವಿಡ್ -19 ಲಾಕ್‌ಡೌನ್‌ ಸಮಯದಲ್ಲಿಯೂ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ್ದಾರೆ.

More News
ಅಜರ್​​​ಬೈಜಾನ್ ಮಿಲಿಟರಿ ಹೆಲಿಕಾಪ್ಟರ್ ಪತನ: 14 ಮಂದಿ ದುರ್ಮರಣ

ಅಜರ್​​​ಬೈಜಾನ್ ಮಿಲಿಟರಿ ಹೆಲಿಕಾಪ್ಟರ್ ಪತನ: 14 ಮಂದಿ ದುರ್ಮರಣ

30 Nov 2021 | 9:53 PM

ಅಜರ್‌ಬೈಜಾನ್: ನ.

 Sharesee more..
“ಅಗತ್ಯಬಿದ್ದರೆ ಓಮಿಕ್ರಾನ್‌ಗಾಗಿ 2 ತಿಂಗಳಲ್ಲಿ ಪ್ರತ್ಯೇಕ ಲಸಿಕೆ ಸಿದ್ಧಪಡಿಸುತ್ತೇವೆ” – ಮಾಡರ್ನ ಕಂಪನಿ

“ಅಗತ್ಯಬಿದ್ದರೆ ಓಮಿಕ್ರಾನ್‌ಗಾಗಿ 2 ತಿಂಗಳಲ್ಲಿ ಪ್ರತ್ಯೇಕ ಲಸಿಕೆ ಸಿದ್ಧಪಡಿಸುತ್ತೇವೆ” – ಮಾಡರ್ನ ಕಂಪನಿ

30 Nov 2021 | 10:12 AM

ಹೆಚ್ಚುತ್ತಿರುವ ಆತಂಕದ ಮಧ್ಯೆ, ಲಸಿಕೆ ಕಂಪನಿ ಮೊಡರ್ನಾ, ಒಮಿಕ್ರಾನ್‌ ಹೂಸ ರೂಪಾಂತರಿ ವಿರುದ್ಧ ಹೋರಾಡಲು ಪ್ರತ್ಯೇಕ ಲಸಿಕೆ ಅಗತ್ಯವಿದ್ದರೆ, ಅದು ಎರಡು ಮೂರು ತಿಂಗಳಲ್ಲಿ ಸಿದ್ಧಪಡಿಸಲಿದೆ ಅಂತಾ ಕಂಪನಿ ತಿಳಿಸಿದೆ.

 Sharesee more..

ಹೊಸ ಕೋವಿಡ್ ಸೊಂಕು, ಭಯ ಬೇಡ: ಜೋ ಬೈಡೆನ್

30 Nov 2021 | 8:48 AM

 Sharesee more..