Friday, Oct 22 2021 | Time 06:22 Hrs(IST)
Special Share

ಮೈಸೂರು ವಿವಿಗೆ ೧೯ನೇ ರ‍್ಯಾಂಕಿಂಗ್

ಮೈಸೂರು, ಸೆ. ೯(ಯುಎನ್ ಐ) ದೆಹಲಿಯ ಎನ್ ಐ ಆರ್ ಎಫ್ - ನ್ಯಾಷನಲ್ ಇನ್ಸ್‌ಟ್ಯೂಷನಲ್ ರ‍್ಯಾಂಕಿಂಗ್ ಫ್ರೇಮ್ ವರ್ಕ್- ಪ್ರತಿವರ್ಷದಂತೆ ಈ ವರ್ಷವೂ ದೇಶದ ವಿಶ್ವವಿದ್ಯಾನಿಲಯಗಳ ರ‍್ಯಾಂಕಿಂಗ್ ಪ್ರಕಟಿಸಿದ್ದು, ಶತಮಾನ ಪೂರೈಸಿರುವ ಮೈಸೂರು ವಿಶ್ವವಿದ್ಯಾಲಯಕ್ಕೆ ಈ ಬಾರಿ ೧೯ನೇ ರ‍್ಯಾಂಕ್ ದೊರೆತಿದೆ. ೨೦೧೯ರಲ್ಲಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ ೫೪ನೇ ರ‍್ಯಾಂಕ್ ಸಿಕ್ಕಿತ್ತು. ೨೦೨೦ರಲ್ಲಿ ೨೭ನೇ ರ‍್ಯಾಂಕ್ ಲಭಿಸಿತ್ತು. ಆದರೆ, ಈ ವರ್ಷ ೮ ಸ್ಥಾನ ಜಿಗಿದಿರುವ ಮೈಸೂರು ವಿಶ್ವವಿದ್ಯಾಲಯ, ಯೂನಿರ್ಸಿಟಿ ವಿಭಾಗದಲ್ಲಿ ೧೯ನೇ ರ‍್ಯಾಂಕ್ ಪಡೆದುಕೊಂಡಿದೆ.
ಸೆಪ್ಟೆಂಬರ್ ತಿಂಗಳ ಎರಡನೇ ವಾರದಲ್ಲಿ ಮೈಸೂರು ವಿವಿಗೆ ನ್ಯಾಕ್ ಸಮಿತಿ ಕಮಿಟಿ ಭೇಟಿ ನೀಡುತ್ತಿದ್ದು, ಈ ಸಮಯದಲ್ಲಿ ೧೯ನೇ ರ‍್ಯಾಂಕ್ ಸಿಕ್ಕಿರುವುದು ಆಶಾದಾಯಕ ಬೆಳವಣಿಯಾಗಿದೆ. ಓವರ್ ಆಲ್ ವಿಭಾಗದಲ್ಲಿ ಮೈಸೂರು ವಿವಿ ೩೪ನೇ ರ‍್ಯಾಂಕ್ ಪಡೆದುಕೊಂಡಿದೆ. ಕಳೆದ ಬಾರಿ ಓವರ್ ಆಲ್ ವಿಭಾಗದಲ್ಲಿ ೪೭ನೇ ಸ್ಥಾನ ಲಭಿಸಿತ್ತು.
ಯುಎನ್ ಐ ಕೆವಿಆರ್ ೧೭೪೩
More News
ಭಾರತದಲ್ಲಿ ಗಲ್ಲಿ ಕ್ರಿಕೆಟಿಗ; ಓಮನ್ ನಲ್ಲಿ ಸ್ಟಾರ್ ಆಟಗಾರ!

ಭಾರತದಲ್ಲಿ ಗಲ್ಲಿ ಕ್ರಿಕೆಟಿಗ; ಓಮನ್ ನಲ್ಲಿ ಸ್ಟಾರ್ ಆಟಗಾರ!

21 Oct 2021 | 1:28 PM

ಭಾರತದ ಗಲ್ಲಿ ಗಲ್ಲಿಗಳಲ್ಲಿ ಆಡುತ್ತಿದ್ದ ಹುಡುಗ ಈಗ ಓಮನ್ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ. ಟಿ-20 ವಿಶ್ವಕಪ್ ನ ಅರ್ಹತಾ ಪಂದ್ಯಗಳಲ್ಲಿ ಆಡುತ್ತಿರುವ ಜತೀಂದರ್ ಸಿಂಗ್, ಓಮನ್ ತಂಡದ ಸ್ಟಾರ್ ಆಟಗಾರನಾಗಿದ್ದಾನೆ.

 Sharesee more..