Wednesday, Oct 20 2021 | Time 16:21 Hrs(IST)
Special Share

ಸೋನು ಸೂದ್ ನಿವಾಸದ ಮೇಲೆ ಐಟಿ ದಾಳಿ

ಮುಂಬೈ, ಸೆ 15(ಯುಎನ್‌ ಐ) ಬಾಲಿವುಡ್‌ ನಟ ಹಾಗೂ ದಾನಿ ಸೋನು ಸೂದ್ ಅವರ ಮುಂಬೈ ನಿವಾಸ ಹಾಗೂ ಕಚೇರಿಗಳ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಶೋಧನೆ ನಡೆಸಿದ್ದಾರೆ. ಒಟ್ಟು ಆರು ಪ್ರದೇಶಗಳ ಮೇಲೆ ದಾಳಿ ನಡೆಸಿ ಶೋಧನೆ ನಡೆಸಲಾಯಿತು ಎಂದು ವರದಿಯಾಗಿದೆ.

ಸೋನುಸೂದ್ ಅವರಿಗೆ ಸಂಬಂಧಿಸಿದ ಆದಾಯ ವಿವರಗಳಲ್ಲಿ ವಂಚನೆ ನಡೆದಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಸೋನು ಸೂದ್ ನಿವಾಸದಲ್ಲಿ ಐಟಿ ಇಲಾಖೆ ಶೋಧನೆ ನಡೆಸಿದೆ ಎಂದು ತಿಳಿದುಬಂದಿದೆ.
ದೆಹಲಿ ಸರ್ಕಾರ ಆರಂಭಿಸಿರುವ ಪ್ರತಿಷ್ಟಿತ ಶಾಲಾ ವಿದ್ಯಾರ್ಥಿ ಮಾರ್ಗದರ್ಶಕ ಕಾರ್ಯಕ್ರಮದ ಬ್ರಾಂಡ್ ಅಂಬಾಸಿಡರ್ ಆಗಿ ಸೋನು ಸೂದ್ ಇತ್ತೀಚೆಗೆ ನೇಮಕಗೊಂಡಿದ್ದರು. ಸೋನು ಸೂದ್ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಭೇಟಿಯಾದ ಕೆಲವೇ ದಿನಗಳಲ್ಲಿ, ಅವರ ನಿವಾಸದ ಮೇಲೆ ಐಟಿ ಶೋಧಗಳು ನಡೆದಿರುವುದು ಭಾರಿ ಚರ್ಚೆಯ ವಿಷಯವಾಗಿದೆ.
ಯುಎನ್‌ ಐ ಕೆವಿಆರ್‌ 2122