Sunday, Sep 26 2021 | Time 17:35 Hrs(IST)
International Share

ಪೋರ್ಟ್ಲ್ಯಾಂಡ್ ನಲ್ಲಿ ಗುಂಡಿನ ದಾಳಿ: 8 ಜನರಿಗೆ ಗಾಯ

ಮಾಸ್ಕೋ, ಜುಲೈ 18 (ಯುಎನ್‌ಐ) ಅಮೆರಿಕದ ಒರೆಗಾನ್ ರಾಜ್ಯದ ಪೋರ್ಟ್ಲ್ಯಾಂಡ್‌ನಲ್ಲಿ ರಾತ್ರಿ ನಡೆದ ಗುಂಡಿನ ದಾಳಿಯಲ್ಲಿ 8 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
,ಗಾಯಾಳುಗಳ ಪೈಕಿ ಒಬ್ಬನ ಸ್ಥಿತಿ ಗಂಭೀರವಾಗಿದೆ. "ಪೋರ್ಟ್ಲ್ಯಾಂಡ್ ಡೌನ್ಟೌನ್ನಲ್ಲಿ ನಡೆದ ಗುಂಡಿನ ದಾಳಿಯ ನಂತರ ಗಾಯಗೊಂಡ 8 ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಘಟನೆಗೆ ಸಂಬಂಧಪಟ್ಟಂತೆ ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಮತ್ತು ಯಾವುದೇ ಶಂಕಿತ ಕಾರಣವನ್ನು ಬಹಿರಂಗಪಡಿಸಲಾಗಿಲ್ಲ.
ಯುಎನ್ಐ ಕೆಎಸ್ಆರ್ 0856