Wednesday, Oct 20 2021 | Time 16:31 Hrs(IST)
Karnataka Share

ಟೆಸ್ಟ್​ ಡ್ರೈವ್​ ನೆಪದಲ್ಲಿ ಕಾರು ಕಳವು

ಬೆಂಗಳೂರು, ಸೆ.15 (ಯುಎನ್ಐ) ಕಾರು ಖರೀದಿ ನೆಪದಲ್ಲಿ ಖತರ್ನಾಕ್​ ಕಳ್ಳನೋರ್ವ ಕಾರನ್ನೇ ಕದ್ದು ಪರಾರಿಯಾಗಿರುವ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ.
ಅಬ್ದುಲ್ ಅಜೀಜ್ ಎಂಬುವವರು ಕಾರು ಕಳ್ಳತನವಾಗಿದೆ.
ಆ.​ 28ರಂದು ಅಬ್ದುಲ್ ಅಜೀಜ್ ಎಂಬುವವರು ತಮ್ಮ ಹುಂಡೈ ಐ20 ಕಾರನ್ನು ಮಾರಾಟ ಮಾಡುವುದಾಗಿ ಒಎಲ್​ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದರು. ಇದೇ ದಿನ ಕಾರು ಖರೀದಿಸುವುದಾಗಿ ಜಗದೀಶ್​ ಪಾಟೀಲ್​ ಎಂಬುವವರು ಕರೆ ಮಾಡಿ ಕಾರು ನೋಡುವುದು ಇದೆ, ಎಲ್ಲಿ ಬರಬೇಕು ಎಂದು ಮಾಲೀಕರಿಗೆ ಪ್ರಶ್ನಿಸಿದರು.
ಅಂತೆಯೇ ಜಯನಗರ 4ನೇ ಬ್ಲಾಕ್​ಗೆ ಬರುವಂತೆ ಮಾಲೀಕರು ತಿಳಿಸಿದ್ದರು. ನಂತರ ಸ್ಥಳಕ್ಕೆ ಬಂದ ಆರೋಪಿ ಜಗದೀಶ್​ ಅವರಿಗೆ ಕಾರು ಚೆನ್ನಾಗಿದೆ ಸರ್​. ಮಾರಾಟದ ಬೆಲೆ ಎಷ್ಟು ಎಂದು ಕೇಳಿದ್ದ. ಈ ವೇಳೆ ಅಬ್ದುಲ್​ ಅಜೀಜ್​ 3 ಲಕ್ಷದ 50 ಸಾವಿರಕ್ಕೆ ಕೊಡುತ್ತೇನೆ ಎಂದಿದ್ದರು.
ಈ ವೇಳೆ ಜಗದೀಶ್, ಓಕೆ ಸರ್, 1 ಸಾವಿರ ರೂ. ಮುಂಗಡವಾಗಿ ತೆಗೆದುಕೊಳ್ಳಿ ಎಂದು ನೀಡಿದ್ದನು. ಬಳಿಕ ಕಾರಿನ ಅಧಿಕೃತ ದಾಖಲೆಗಳನ್ನು ತೋರಿಸಿ ಎಂದು ತಿಳಿಸಿದ್ದನು. ನಂತರ ಅಬ್ದುಲ್​ ಅವರು ದಾಖಲೆಗಳನ್ನು ತರಲು ಮನೆಯ ಒಳಗೆ ಪ್ರವೇಶಿಸಿದಾಗ, ಟೆಸ್ಟ್​ ಡ್ರೈವ್​ ನೆಪದಲ್ಲಿ ಕಾರು ಕಳವುಮಾಡಿಕೊಂಡು ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.​
ಸದ್ಯ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಪೊಲೀಸರು ಆರೋಪಿ ಪತ್ತೆಗೆ ಬಲೆಬೀಸಿದ್ದಾರೆ.
ಯುಎನ್ಐ ಪಿಕೆ ಎಸ್ಎಚ್
More News
ಕಾನೂನು ತಜ್ಞರ ಸಲಹೆ ಪಡೆಯಿತ್ತಿರುವ ಸರ್ಕಾರ

ಕಾನೂನು ತಜ್ಞರ ಸಲಹೆ ಪಡೆಯಿತ್ತಿರುವ ಸರ್ಕಾರ

20 Oct 2021 | 2:57 PM

ಬೆಂಗಳೂರು,ಅ.

 Sharesee more..
ಹಿಂದೂಗಳ ಮೇಲಿನ ಆಕ್ರಮಣ ಖಂಡಿಸಿ ಪ್ರತಿಭಟನೆ

ಹಿಂದೂಗಳ ಮೇಲಿನ ಆಕ್ರಮಣ ಖಂಡಿಸಿ ಪ್ರತಿಭಟನೆ

20 Oct 2021 | 2:56 PM

ಮೈಸೂರು ಬ್ಯಾಂಕ್ ಸರ್ಕಲ್ ಬಳಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮುಖಂಡ ಮೋಹನಗೌಡ, "ನವರಾತ್ರಿಯ ಸಂದರ್ಭದಲ್ಲಿ ಬಾಂಗ್ಲಾದೇಶದ 30 ಜಿಲ್ಲೆಗಳಲ್ಲಿ ದಲ್ಲಿ 315 ದೇವಸ್ಥಾನಗಳ ಮೇಲೆ ಮುಸಲ್ಮಾನರು ಆಕ್ರಮಣ ಮಾಡಿದರು ಮತ್ತು 1500 ಹಿಂದೂ ಮನೆಗಳ ಧ್ವಂಸ ಮಾಡಿದರು.

 Sharesee more..
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಪ್ರತ್ಯೇಕ ಸಚಿವರನ್ನು ಕೊಡಿ

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಪ್ರತ್ಯೇಕ ಸಚಿವರನ್ನು ಕೊಡಿ

20 Oct 2021 | 2:53 PM

ಬೆಂಗಳೂರು,ಅ.

 Sharesee more..
ಪರಿಶಿಷ್ಟ ಸಮುದಾಯದವರಷ್ಟೇ ಪಾಯಖಾನ ತೊಳೆಯಬೇಕೇ?

ಪರಿಶಿಷ್ಟ ಸಮುದಾಯದವರಷ್ಟೇ ಪಾಯಖಾನ ತೊಳೆಯಬೇಕೇ?

20 Oct 2021 | 2:52 PM

ವಿಧಾನಸೌಧದಲ್ಲಿ ನಡೆದ ವಾಲ್ಮೀಕಿ ದಿನಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸ್ವಾಮೀಜಿ,ಎಸ್ಸಿಎಸ್ಟಿಯವರಷ್ಟೇ ಪಾಯಖಾನೆ ತೊಳೆಯಬೇಕೇ?ಮೇಲ್ವರ್ಗ ಸಮುದಾಯವೇನು ಇದರಿಂದ ಹೊರತೇ?ಪಾಯಿಖಾನೆ ತೊಳೆಯುವುದನ್ನೂ ಕೆಲಸವೆಂದು ಪರಿಗಣಿಸಬೇಕು.

 Sharesee more..