Wednesday, Oct 20 2021 | Time 16:26 Hrs(IST)
Karnataka Share

ಸ್ವಾತಂತ್ರ್ಯ ಮೌಲ್ಯಗಳ ಜಾಗೃತಿ

ದಾವಣಗೆರೆ ಸೆ, 12 (ಯುಎನ್ಐ) ನೆಹರು ಯುವ ಕೇಂದ್ರ ಹಾಗೂ ದಾವಣಗೆರೆ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ದಾವಣಗೆರೆಯಲ್ಲಿ ಹಮ್ಮಿಕೊಂಡಿದ್ದ ಫಿಟ್ ಇಂಡಿಯಾ ಫ್ರೀಡಂ ಓಟಕ್ಕೆ ಉಪವಿಭಾಗಾಧಿಕಾರಿ ಮಮತ ಹೊಸಗೌಡರ್ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಸ್ವಾತಂತ್ರ್ಯದ ಮೌಲ್ಯಗಳು ಮತ್ತು ಸಂವಿಧಾನದ ಆಶಯಗಳನ್ನು ತಿಳಿಸುವ ಉದ್ದೇಶದಿಂದ ದೇಶಾದ್ಯಂತ ಜಾಗೃತಿ ಹಮ್ಮಿಕೊಳ್ಳಲಾಗಿದೆ ಎಂದರು. ಕಾರ್ಯಕ್ರಮದ ಅಂಗವಾಗಿ ಜಿಲ್ಲಾಧಿಕಾರಿಗಳ ಕಚೇರಿಯಿಂದ 4 ಕಿಲೋಮೀಟರ್ ಓಟವು ಪ್ರಮುಖ ರಸ್ತೆಗಳಲ್ಲಿ ಸಾಗಿ ದಾವಣಗೆರೆಯ ಹೃದಯ ಭಾಗವಾದ ಜಯದೇವ ವೃತ್ತದಲ್ಲಿ ಸಮಾಪ್ತಿಗೊಂಡಿತು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಗಿರೀಶ್, ನೆಹರು ಯುವ ಕೇಂದ್ರದ ಜಿಲ್ಲಾ ಯುವಜನ ಅಧಿಕಾರಿ ಸಂಜೀವ್ ಲೆಕ್ಕಾಧಿಕಾರಿ ಪ್ರಕಾಶ್, ದಾವಣಗೆರೆ ವಿಶ್ವವಿದ್ಯಾಲಯ ಎನ್.ಎಸ್.ಎಸ್ ಸಂಯೋಜನಾಧಿಕಾರಿ ಗಿರೀಶ್ ಡಿ.ಹೆಚ್, ವಿವಿಧ ಕಾಲೇಜಿನ ಎನ್.ಎಸ್.ಎಸ್ ಅಧಿಕಾರಿಗಳು, ಶಾಲಾ ಶಿಕ್ಷಕರು, ರಾಷ್ಟ್ರೀಯ ಯುವ ಕಾರ್ಯಕರ್ತರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.
ಯುಎನ್ಐ ಕೆಎಸ್ಆರ್ 1811
More News
ಕಾನೂನು ತಜ್ಞರ ಸಲಹೆ ಪಡೆಯಿತ್ತಿರುವ ಸರ್ಕಾರ

ಕಾನೂನು ತಜ್ಞರ ಸಲಹೆ ಪಡೆಯಿತ್ತಿರುವ ಸರ್ಕಾರ

20 Oct 2021 | 2:57 PM

ಬೆಂಗಳೂರು,ಅ.

 Sharesee more..
ಹಿಂದೂಗಳ ಮೇಲಿನ ಆಕ್ರಮಣ ಖಂಡಿಸಿ ಪ್ರತಿಭಟನೆ

ಹಿಂದೂಗಳ ಮೇಲಿನ ಆಕ್ರಮಣ ಖಂಡಿಸಿ ಪ್ರತಿಭಟನೆ

20 Oct 2021 | 2:56 PM

ಮೈಸೂರು ಬ್ಯಾಂಕ್ ಸರ್ಕಲ್ ಬಳಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮುಖಂಡ ಮೋಹನಗೌಡ, "ನವರಾತ್ರಿಯ ಸಂದರ್ಭದಲ್ಲಿ ಬಾಂಗ್ಲಾದೇಶದ 30 ಜಿಲ್ಲೆಗಳಲ್ಲಿ ದಲ್ಲಿ 315 ದೇವಸ್ಥಾನಗಳ ಮೇಲೆ ಮುಸಲ್ಮಾನರು ಆಕ್ರಮಣ ಮಾಡಿದರು ಮತ್ತು 1500 ಹಿಂದೂ ಮನೆಗಳ ಧ್ವಂಸ ಮಾಡಿದರು.

 Sharesee more..
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಪ್ರತ್ಯೇಕ ಸಚಿವರನ್ನು ಕೊಡಿ

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಪ್ರತ್ಯೇಕ ಸಚಿವರನ್ನು ಕೊಡಿ

20 Oct 2021 | 2:53 PM

ಬೆಂಗಳೂರು,ಅ.

 Sharesee more..
ಪರಿಶಿಷ್ಟ ಸಮುದಾಯದವರಷ್ಟೇ ಪಾಯಖಾನ ತೊಳೆಯಬೇಕೇ?

ಪರಿಶಿಷ್ಟ ಸಮುದಾಯದವರಷ್ಟೇ ಪಾಯಖಾನ ತೊಳೆಯಬೇಕೇ?

20 Oct 2021 | 2:52 PM

ವಿಧಾನಸೌಧದಲ್ಲಿ ನಡೆದ ವಾಲ್ಮೀಕಿ ದಿನಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸ್ವಾಮೀಜಿ,ಎಸ್ಸಿಎಸ್ಟಿಯವರಷ್ಟೇ ಪಾಯಖಾನೆ ತೊಳೆಯಬೇಕೇ?ಮೇಲ್ವರ್ಗ ಸಮುದಾಯವೇನು ಇದರಿಂದ ಹೊರತೇ?ಪಾಯಿಖಾನೆ ತೊಳೆಯುವುದನ್ನೂ ಕೆಲಸವೆಂದು ಪರಿಗಣಿಸಬೇಕು.

 Sharesee more..