Monday, Sep 20 2021 | Time 08:17 Hrs(IST)
Sports Share

ಮೀರಾ ಬಾಯಿ ಚಾನುಗೆ ಪ್ರಧಾನಿ ಅಭಿನಂದನೆ

ನವದೆಹಲಿ, ಜುಲೈ 24(ಯುಎನ್‌ ಐ) ಟೋಕಿಯೋ ಒಲಿಂಪಿಕ್ಸ್‌ ನಲ್ಲಿ ಮಹಿಳೆಯರ 49 ಕೆ.ಜಿ ವಿಭಾಗದಲ್ಲಿ ರಜತ ಪದಕ ಗೆದ್ದು ಇತಿಹಾಸ ನಿರ್ಮಿಸಿರುವ ಭಾರತದ ವೆಟ್ ಲಿಫ್ಟಿಂಗ್ ಮಿರಾಬಾಯಿ ಚಾನು ಅವರನ್ನು ಪ್ರಧಾನಿ ನರೇಂದ್ರ ಮೋದಿ ಕೊಂಡಾಡಿದ್ದಾರೆ.
ಮಣಿಪುರದ ವೆಟ್ ಲಿಫ್ಟರ್‌ ಇತರ ಭಾರತೀಯ ಕ್ರೀಡಾ ಪಟುಗಳಿಗೆ ಪ್ರೇರಣೆಯಾಗಲಿದ್ದಾರೆ ಎಂದು ನುಡಿದಿದ್ದಾರೆ. ಮಹಿಳೆಯರ 49 ಕೆ.ಜಿ ವೆಟ್ ಲಿಫ್ಟಿಂಗ್ ವಿಭಾಗದಲ್ಲಿ ಚಾನು ಒಟ್ಟು 202 ಕೆಜಿ ಭಾರ ಎತ್ತಿದ್ದು, ಸ್ನಾಚ್‌ ನಲ್ಲಿ 87 ಕೆಜಿ, ಕ್ಲೀನ್‌ ಹಾಗೂ ಜರ್ಕ್‌ ನಲ್ಲಿ 115 ಕೆಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕ ಕೊರಳೇರಿಸಿಕೊಂಡಿದ್ದು, ಕರ್ಣಂ ಮಲ್ಲೇಶ್ವರಿ ನಂತರ ಭಾರ ಎತ್ತುವಲ್ಲಿ ಪದಕ ಮುಡಿಗೇರಿಸಿಕೊಂಡ ಎರಡನೇ ಭಾರತೀಯ ವೇಟ್‌ ಲಿಪ್ಟರ್‌ ಆಗಿದ್ದಾರೆ. ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಸಹ ಮೀರಾ ಬಾಯಿ ಚಾನು ಅವರನ್ನು ಅಭಿನಂದಿಸಿದ್ದಾರೆ.
ಒಲಿಂಪಿಕ್ಸ್ ಕ್ರೀಡಾ ಕೂಟದ ಎರಡನೇ ದಿನದಂದೇ ಭಾರತದ ಪದಕದ ಖಾತೆ ತೆರೆದಿದ್ದು, ಮಹಿಳಾ ವಿಭಾಗದಲ್ಲಿ ಮಿರಾಬಾಯಿ ಭರ್ಜರಿ ಪ್ರದರ್ಶನ ನೀಡಿ ರಜತ ತಮ್ಮದಾಗಿಸಿಕೊಂಡಿದ್ದಾರೆ. 21 ವರ್ಷಗಳ ಬಳಿಕ ಮೀರಾಬಾಯಿ ಚಾನು ಮಹಿಳಾ ವಿಭಾಗದ ವೆಟ್ ಲಿಫ್ಟಿಂಗ್ ನಲ್ಲಿ ಪದಕ ಗೆದ್ದು ಕೊಂಡಿದ್ದಾರೆ. ಇದಕ್ಕೂ ಮೊದಲು 2000ರ ಸಿಡ್ನಿ ಒಲಿಂಪಿಕ್ಸ್ ನಲ್ಲಿ ಕರ್ಣಂ ಮಲ್ಲೇಶ್ವರಿ ಕಂಚಿನ ಪದಕ ಪಡೆದಿದ್ದರು.
ಈ ವಿಭಾಗದ ಬಂಗಾರದ ಪದಕ ಚೀನಾದ ಹು ಜಿಹುಯಿ ಪಡೆದರೆ, ಇಂಡೋನೇಷ್ಯಾದ ವಿಂಡಿ ಐಸಾ ಕಂಚು ತಮ್ಮದಾಗಿಸಿಕೊಂಡಿದ್ದಾರೆ.
ಯುಎನ್‌ ಐ ಕೆವಿಆರ್‌ 1321