Wednesday, Oct 20 2021 | Time 14:35 Hrs(IST)
Karnataka Share

ಬಾರ್​ಗೆ ನುಗ್ಗಿ ರೌಡಿಗಳ ದಾಂಧಲೆ

ಬೆಂಗಳೂರು, ಆ.30 (ಯುಎನ್ಐ) ನಗರದಲ್ಲಿ ಪುಡಿ ರೌಡಿಗಳ ಹಾವಳಿ ಹೆಚ್ಚಾಗಿದ್ದು, ಮಾರಕಾಸ್ತ್ರಗಳನ್ನು ಹಿಡಿದು ಬಾರ್ ವೊಂದಕ್ಕೆ ​ನುಗ್ಗಿದ್ದ ರೌಡಿಗಳು ಗಲಾಟೆ ಮಾಡಿದ್ದಾರೆ.
ಭಾನುವಾರ ಸಂಜೆ ಸುಮಾರು 7.30ರ ಸುಮಾರಿಗೆ ಪ್ರಕರಣ ನಡೆದಿದ್ದು, ಘಟನೆಯ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸುಬ್ರಹ್ಮಣ್ಯಪುರ ಪೊಲೀಸ್​​ ಠಾಣಾ ವ್ಯಾಪ್ತಿಯ ಇಟ್ಟಮಡು ಬಳಿ ​ಎಸ್​​ಎಲ್​ವಿ ಬಾರ್​​ಗೆ ನುಗ್ಗಿದ್ದ ರೌಡಿಗಳನ್ನು ಗ್ಲಾಸ್​ಗಳನ್ನ ಒಡೆದು ಹಾಕಿದ್ದಾರೆ. ಅಲ್ಲದೇ, ಪಕ್ಕದ ಬಾರ್​ಗೂ ನುಗ್ಗಿ ಗ್ಲಾಸ್​ಗಳನ್ನು ಒಡೆದು ಹಾಕಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಯುಎನ್ಐ ಪಿಕೆ ಎಸ್ಎಚ್
More News

ಪರಿಶಿಷ್ಟ ಸಮುದಾಯದವರಷ್ಟೇ ಪಾಯಖಾನ ತೊಳೆಯಬೇಕೇ?

20 Oct 2021 | 1:53 PM

 Sharesee more..

ಕಾನೂನು ತಜ್ಞರ ಸಲಹೆ ಪಡೆಯಿತ್ತಿರುವ ಸರ್ಕಾರ

20 Oct 2021 | 1:32 PM

 Sharesee more..
ತಾಯಿಯ ಕೋರಿಕೆ ನೆರವೇರಿಸಿದ ಸಚಿವ ಎಸ್ ಟಿ ಸೋಮಶೇಖರ್

ತಾಯಿಯ ಕೋರಿಕೆ ನೆರವೇರಿಸಿದ ಸಚಿವ ಎಸ್ ಟಿ ಸೋಮಶೇಖರ್

20 Oct 2021 | 11:14 AM

ಹುಟ್ಟುಹಬ್ಬಕ್ಕೆ ತಮಗೆ ಏನು ಕೊಡಬೇಕು ಎಂದು ಸಚಿವರು ತಾಯಿಯನ್ನು ಕೇಳಿಕೊಳ್ಳುತ್ತಾರೆ. ಆಗ ಅವರು ನನಗೆ ವಯಸ್ಸು 94 ಆಗುತ್ತಿದೆ. ನನಗೆ ಏನೇನು ಅವಶ್ಯಕತೆಗಳಿವೆಯೋ ಅದನ್ನೆಲ್ಲ ನೀನು ಪೂರೈಸಿದ್ದೀಯ. ಅದರೆ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಅಭಿಮಾನಿ. ಅವರನ್ನು ಒಮ್ಮೆ ಭೇಟಿ ಮಾಡಬೇಕು ಎಂದು ಕೇಳಿಕೊಳ್ಳುತ್ತಾರೆ.

 Sharesee more..