Sunday, Sep 26 2021 | Time 17:35 Hrs(IST)
Sports Share

ಸುಶೀಲ್ ನ್ಯಾಯಾಂಗ ಬಂಧನ ಜುಲೈ 9ರ ವರೆಗೆ ವಿಸ್ತರಣೆ

ನವದೆಹಲಿ, ಜೂ.25 (ಯುಎನ್ಐ)- ದೆಹಲಿಯ ಛತ್ರಾಸಲ್ ಕ್ರೀಡಾಂಗಣದಲ್ಲಿ ನಡೆದ ಕುಸ್ತಿಪಟು ಸಾಗರ್ ಕೊಲೆ ಪ್ರಕರಣದ ಆರೋಪಿ ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಅವರ ನ್ಯಾಯಾಂಗ ಬಂಧನವನ್ನು ದೆಹಲಿ ನ್ಯಾಯಾಲಯವು ಶುಕ್ರವಾರ ಜುಲೈ 9 ರವರೆಗೆ ವಿಸ್ತರಿಸಿದೆ.

ಸುಶೀಲ್ ಅವರ ಕಸ್ಟಡಿ ಅವಧಿ ಶುಕ್ರವಾರ ಮುಗಿದ ನಂತರ, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಕುಸ್ತಿಪಟುವಿನ ನ್ಯಾಯಾಂಗ ಬಂಧನವನ್ನು 14 ದಿನಗಳವರೆಗೆ ವಿಸ್ತರಿಸಿದೆ. ಜುಲೈ 9 ರಂದು ಸುಶೀಲ್ ಅವರನ್ನು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಜೈಲು ಆಡಳಿತಕ್ಕೆ ತಿಳಿಸಲಾಗಿದೆ.

ರೋಹಿಣಿಯಲ್ಲರಿಬ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಮಾಯಾಂಕ್ ಅಗರ್ ವಾಲ್ ನ್ಯಾಯಾಲಯದ ಮುಂದೆ ಸುಶೀಲ್ ಅವರನ್ನು ಹಾಜರುಪಡಿಸಲಾಯಿತು. ಆರೋಪಿಗಳ ನ್ಯಾಯಾಂಗ ಬಂಧನವನ್ನು ವಿಸ್ತರಿಸುವಂತೆ ಕೋರಾಳಗಿತ್ತು. ಸುಶೀಲ್ ಕೊಲೆ, ಅಪರಾಧಿ ನರಹತ್ಯೆ ಮತ್ತು ಕೊಲೆ ಮತ್ತು ಅಪಹರಣದ ಆರೋಪಗಳನ್ನು ಎದುರಿಸುತ್ತಿರುವುದು ಗಮನಾರ್ಹ. ಸುಶೀಲ್ ಜೊತೆಗೆ ಇನ್ನೂ 9 ಮಂದಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಸುಶೀಲ್ ಕುಮಾರ್ ಮತ್ತು ಇತರರನ್ನು ಈಗ ಮಾಂಡೋಲಿ ಜೈಲಿನಿಂದ ತಿಹಾರ್‌ನ ಜೈಲು ಸಂಖ್ಯೆ 2 ಕ್ಕೆ ಸ್ಥಳಾಂತರಿಸಲಾಗಿದೆ ಎಂದು ಪ್ರತಿವಾದಿ ವಕೀಲರು ತಿಳಿಸಿದ್ದಾರೆ.

ಕೋವಿಡ್ -19 ರ ಕಾರಣದಿಂದಾಗಿ ಹೊಸ ಪ್ರಕರಣಗಳಲ್ಲಿ ಬಂಧನಕ್ಕೊಳಗಾಗುತ್ತಿರುವ ಜನರನ್ನು ಸಂಪರ್ಕಿಸಲು ಮಂಡೋಲಿ ಜೈಲಿನ ಸ್ಟಾಫ್ ಕ್ವಾರ್ಟರ್ಸ್ ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಸಿಕ್ಕಿಬಿದ್ದ ಆರೋಪಿಗಳನ್ನು ಮೊದಲು 14 ದಿನಗಳ ಕಾಲ ಮಂಡೋಲಿ ಜೈಲಿನಲ್ಲಿರುವ ಕ್ಯಾರೆಂಟೈನ್‌ನಲ್ಲಿ ಇರಿಸಲಾಗುತ್ತದೆ, ನಂತರ ಅವರನ್ನು ಆಯಾ ಜೈಲುಗಳಿಗೆ ಕಳುಹಿಸಲಾಗುತ್ತಿದೆ. ಸುಶೀಲ್ 23 ದಿನಗಳ ಕಾಲ ಮಂಡೋಲಿ ಜೈಲಿನಲ್ಲಿದ್ದರು, ಆದ್ದರಿಂದ ಅವರನ್ನು ಈಗ ತಿಹಾರ್ ಜೈಲಿಗೆ ಕಳುಹಿಸಲಾಗಿದೆ.
ಯುಎನ್ಐ ವಿಎನ್ಎಲ್ 1844