Sunday, Sep 26 2021 | Time 17:52 Hrs(IST)
Sports Share

ವಿಂಡೀಸ್ ತಂಡ ಸೇರಿದ ರಸೆಲ್

ಸೆಂಟ್ ಜಾರ್ಜ್, ಜೂ.26 (ಯುಎನ್ಐ)- ಕ್ರಿಕೆಟ್ ವೆಸ್ಟ್ ಇಂಡೀಸ್ ದಕ್ಷಿಣ ಆಫ್ರಿಕಾ ವಿರುದ್ಧ ಮುಂಬರುವ ಐದು ಪಂದ್ಯಗಳ ಟಿ-20 ಸರಣಿಯ ಆರಂಭಿಕ ಎರಡು ಪಂದ್ಯಗಳಿಗೆ 13 ಮಂದಿಯ ವಿಂಡೀಸ್ ತಂಡವನ್ನು ಘೋಷಿಸಿದ್ದು, ತಂಡದಲ್ಲಿ ಸ್ಟಾರ್ ಆಲ್ ರೌಂಡರ್ ಆಂಡ್ರಿ ರಸೆಲ್ ಸ್ಥಾನ ಪಡೆದಿದ್ದಾರೆ. ಇವರು ಶ್ರೀಲಂಕಾ ವಿರುದ್ಧ ಮಾರ್ಚ್ 2020 ರಲ್ಲಿ ಶ್ರೀಲಂಕಾ ವಿರುದ್ಧ ಕೊನೆಯಬಾರಿಗೆ ಆಡಿದ್ದರು.

ವೆಸ್ಟ್ ಇಂಡೀಸ್ ಪರ 49 ಟಿ-20 ಪಂದ್ಯಗಳನ್ನು ಆಡಿದ ರಸೆಲ್, 2012 ಮತ್ತು 2016 ರ ಟಿ 20 ವಿಶ್ವಕಪ್ ಗೆದ್ದ ತಂಡದ ಸದಸ್ಯರಾಗಿದ್ದಾರೆ. ಆಯ್ಕೆ ಸಮಿತಿ ಮುಖ್ಯಸ್ಥ ರೋಜರ್ ಹಾರ್ಪರ್ ರಸೆಲ್ ಅವರನ್ನು ಪ್ರಭಾವಶಾಲಿ ಆಟಗಾರ ಎಂದು ಬಣ್ಣಿಸಿದರು. ಅವರು ಬ್ಯಾಟ್ ಮತ್ತು ಬಾಲ್ ಎರಡರಿಂದಲೂ ಆಟವನ್ನು ಬದಲಾಯಿಸಬಹುದು” ಎಂದಿದ್ದಾರೆ.

ಹಾರ್ಪರ್ ಶುಕ್ರವಾರ ಹೇಳಿಕೆಯಲ್ಲಿ, “ಆಂಡ್ರೆ ರಸೆಲ್ ತಂಡಕ್ಕೆ ದೊಡ್ಡ ಎಕ್ಸ್ ಫ್ಯಾಕ್ಟರ್ ಆಗಿದ್ದಾರೆ. ಅವರು ಬ್ಯಾಟ್ ಮತ್ತು ಬಾಲ್ ಎರಡಲ್ಲೂ ಪ್ರಭಾವಶಾಲಿ ಆಟಗಾರ ಮತ್ತು ಎರಡೂ ವಿಭಾಗಗಳಲ್ಲಿ ತಂಡಕ್ಕೆ ನೆರವಾಗಬಲ್ಲರು. ಮುಂಬರುವ ಟಿ-20 ವಿಶ್ವಕಪ್‌ಗಾಗಿ ನಾವು ನಮ್ಮ ಅತ್ಯುತ್ತಮ ತಂಡವನ್ನು ಆಯ್ಕೆ ಮಾಡುವ ತವಕದಲ್ಲಿವೆ" ಎಂದು ತಿಳಿಸಿದ್ದಾರೆ.

ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟಿ 20 ಪಂದ್ಯವನ್ನು ಇಂದು ಗ್ರೆನಡಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಇತರ ನಾಲ್ಕು ಪಂದ್ಯಗಳು ಸಹ ಇಲ್ಲಿ ನಡೆಯಲಿವೆ ಎಂಬುದು ಗಮನಾರ್ಹ.

ಯುಎನ್ಐ ವಿಎನ್ಎಲ್ಮ 1754