Sunday, Sep 26 2021 | Time 19:10 Hrs(IST)
National Share

ಪೆಟ್ರೋಲ್ - ಡೀಸೆಲ್ ಬೆಲೆ ಸತತ ಎರಡನೇ ದಿನವೂ ಹೆಚ್ಚಳ

ಪೆಟ್ರೋಲ್ - ಡೀಸೆಲ್ ಬೆಲೆ ಸತತ ಎರಡನೇ ದಿನವೂ ಹೆಚ್ಚಳ
ಪೆಟ್ರೋಲ್ - ಡೀಸೆಲ್ ಬೆಲೆ ಸತತ ಎರಡನೇ ದಿನವೂ ಹೆಚ್ಚಳ

ನವದೆಹಲಿ, ಜೂನ್ 27 (ಯುಎನ್ಐ) ಪೆಟ್ರೋಲ್, - ಡೀಸೆಲ್ ದರ ಸತತವಾಗಿ ಎರಡನೇ ದಿನವೂ ಹೆಚ್ಚಳವಾಗಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರ 104.56 ರೂಪಾಯಿಗೆ ಹಾಗೂ ಡೀಸೆಲ್ ಲೀಟರ್ 96.42 ರೂಪಾಯಿಗೆ ಹೆಚ್ಚಳವಾಗಿದೆ.

ಪಂಚ ರಾಜ್ಯಗಳ ಚುನಾವಣೆಯ ಸಂದರ್ಭದಲ್ಲಿ ಸತತ 18 ದಿನಗಳ ಕಾಲ ಇಂಧನ ದರ ಏರಿಕೆ ಆಗಿರಲಿಲ್ಲ. ತದನಂತರ ಮೇ 4ರಿಂದ ದರ ಸಮರ ಏರುತ್ತಲೇ ಇದೆ. ಅಂದಿನಿಂದ ಇಲ್ಲಿಯವರೆಗೆ ತೈಲೆ ಬೆಲೆಗಳು ಈವರೆಗೆ 31 ಬಾರಿ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 101.75 ರೂಪಾಯಿಗೆ ಏರಿಕೆಯಾಗಿದ್ದರೆ, ಲೀಟರ್ ಡೀಸೆಲ್ ದರ 94.25 ರೂಪಾಯಿಗೆ ಹೆಚ್ಚಳವಾಗಿದೆ.

ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 98.46 ರೂಪಾಯಿ ಇದೆ. ಅದೇ ರೀತಿ ಲೀಟರ್ ಡೀಸೆಲ್ ದರ 88.90 ರೂಪಾಯಿಗೆ ಏರಿಕೆಯಾಗಿದೆ. ಚೆನ್ನೈನಲ್ಲಿ ಶತಕ ಬಾರಿಸಲು ಗಡಿಯ ಅಂಚಿನಲ್ಲಿಯೇ ಇದೆ. ಲೀಟರ್ ಪೆಟ್ರೋಲ್ ದರ 99.49 ಹಾಗೂ ಲೀಟರ್ ಡೀಸೆಲ್ ದರ 93.46 ರೂಪಾಯಿಗೆ ಏರಿಕೆ ಆಗಿದೆ.

ಕೊಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ದರ 98.30 ರೂಪಾಯಿಗೆ ಏರಿಕೆಯಾಗಿದೆ. ಅದೇ ರೀತಿ ಲೀಟರ್ ಡೀಸೆಲ್ ದರ 91.75 ರೂಪಾಯಿಗೆ ಹೆಚ್ಚಳವಾಗಿದ್ದರೆ, ಭೋಪಾಲ್ನಲ್ಲಿ ಈಗಾಗಲೇ ಲೀಟರ್ ಪೆಟ್ರೋಲ್ ದರ 100ರ ಗಡಿ ದಾಟಿ ಮುನ್ನುಗ್ಗುತ್ತಿದೆ. ಲೀಟರ್ ಪೆಟ್ರೋಲ್ ದರ 106.71 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 97.63 ರೂಪಾಯಿಗೆ ಏರಿಕೆಯಾಗಿದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ವಿನಿಮಯ ದರಗಳ ಜತೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳ ಏರಿಕೆ ಏನೆಂಬುದನ್ನು ಅವಲಂಬಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ನಿತ್ಯವೂ ಬದಲಾಗಲಿವೆ.

ಯುಎನ್ಐ ಕೆಎಸ್ಆರ್ 1112

More News
ಅಧಿಕೃತ ಇಮೇಲ್ಗಳಲ್ಲಿ ಪ್ರಧಾನಿ ಮೋದಿ ಚಿತ್ರ: ಆಕ್ಷೇಪಣೆ ನಂತರ ಕೈಬಿಟ್ಟ ಎನ್ಐಸಿ

ಅಧಿಕೃತ ಇಮೇಲ್ಗಳಲ್ಲಿ ಪ್ರಧಾನಿ ಮೋದಿ ಚಿತ್ರ: ಆಕ್ಷೇಪಣೆ ನಂತರ ಕೈಬಿಟ್ಟ ಎನ್ಐಸಿ

24 Sep 2021 | 10:23 PM

ನ್ಯಾಯಾಂಗದೊಂದಿಗೆ ಈ ಜಾಹಿರಾತು ಚಿತ್ರಕ್ಕೆ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಆಕ್ಷೇಪಿಸಿ ಸುಪ್ರೀಂ ಕೋರ್ಟ್ ಎನ್ಐಸಿಗೆ ಪತ್ರವನ್ನು ಬರೆದ ನಂತರ ಎನ್ಐಸಿ ಮೋದಿ ಭಾವಚಿತ್ರವುಳ್ಳ ಬ್ಯಾನರ್ ಅಂಚನ್ನು ಸುಪ್ರೀಂ ಕೋರ್ಟ್ನ ಅಧಿಕೃತ ಇಮೇಲ್ಗಳಿಂದ ತೆಗೆದುಹಾಕಿದೆ. ಈ ಕುರಿತು ಸುಪ್ರೀಂ ಕೋರ್ಟ್ ಅಧಿಕೃತ ಪ್ರಕಟಣೆಯನ್ನು ಹೊರಡಿಸಿದೆ. ಆದರೆ, ಈ ಪ್ರಕಟಣೆಯಲ್ಲಿ ತನ್ನ ಇಮೇಲ್ಗಳ ಅಂಚಿಗೆ ಲಗತ್ತಿಸಿದ್ದ ಚಿತ್ರದ ಸ್ವರೂಪದ ಬಗ್ಗೆ ಯಾವುದೇ ಉಲ್ಲೇಖವನ್ನು ಮಾಡಿಲ್ಲ.

 Sharesee more..