Sunday, Sep 26 2021 | Time 18:11 Hrs(IST)
Sports Share

ಸ್ಟಾರ್ಕ್ ಪಂಚ್ ಗೆ ವಿಂಡೀಸ್ ತಬ್ಬಿಬ್ಬು

ಬಾರ್ಬಡೋಸ್, ಜು.21 (ಯುಎನ್‌ಐ)- ಅನುಭವಿ ವೇಗಿ ಮಿಚೆಲ್ ಸ್ಟಾರ್ಕ್ (48ಕ್ಕೆ ) ಅವರ ಅದ್ಭುತ ಬೌಲಿಂಗ್ ಪ್ರದರ್ಶನದ ಬಲದಿಂದ ಆಸ್ಟ್ರೇಲಿಯಾ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 133 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. 1-0 ಮುನ್ನಡೆ ಸಾಧಿಸಿದೆ.

ಟಾಸ್ ಗೆದ್ದ ನಂತರ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡವು ಮಳೆಯ ನಂತರ ನಿಗದಿತ 49 ಓವರ್‌ಗಳಲ್ಲಿ ಒಂಬತ್ತು ವಿಕೆಟ್‌ಗಳ ನಷ್ಟಕ್ಕೆ 252 ರನ್ ಗಳಿಸಿತು. ನಾಯಕ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಅಲೆಕ್ಸ್ ಕ್ಯಾರಿ ಮತ್ತು ಆಲ್‌ರೌಂಡರ್ ಆಷ್ಟನ್ ಟರ್ನರ್ ಉತ್ತಮ ಕೊಡುಗೆ ನೀಡಿದರು.

ಇದಕ್ಕೆ ಉತ್ತರಿಸಿದ ವೆಸ್ಟ್ ಇಂಡೀಸ್ 26.2 ಓವರ್‌ಗಳಲ್ಲಿ 123 ರನ್‌ಗಳಿಗೆ ಆಲೌಟ್ ಆಗಿತ್ತು. ಟಿ 20 ಸರಣಿಯಲ್ಲಿ ಲಯ ಕಂಢು ಕೊಳ್ಳುವಲ್ಲಿ ಎಡವಿದ್ದ ಎಡಗೈ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್, ವಿಂಡೀಸ್‌ನ ಮಧ್ಯಮ ಮತ್ತು ಕೆಳ ಕ್ರಮಾಂಕವನ್ನು ಕಟ್ಟಿ ಹಾಕಿದರು. ವಿಂಡೀಸ್ ತಂಡ ಆರು ವಿಕೆಟ್ ಗೆ 27 ರನ್ ಸೇರಿಸಿ ಸಂಕಷ್ಟದಲ್ಲಿದ್ದ ತಂಡಕ್ಕೆ ಅನುಭವಿ ಕೀರನ್ ಪೋಲಾರ್ಡ್ ಹಾಗೂ ಅಲ್ಜಾರಿ ಜೋಸೆಫ್ (17) ಜೋಡಿ ನೆರವಾದರು. ಈ ಜೋಡಿ 88 ಎಸೆತಗಳಲ್ಲಿ 68 ರನ್ ಗಳ ಜೊತೆಯಾಟದ ಕಾಣಿಕೆ ನೀಡಿತು. ಕೀರನ್ ಪೋಲಾರ್ಡ್ 57 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ ಸಹಾಯದಿಂದ 56 ರನ್ ಬಾರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು.

ಸ್ಟಾರ್ಕ್ ಐದು ವಿಕೆಟ್ ಪಡೆದರು. ಉಳಿದಂತೆ ಜೋಶ್ ಹ್ಯಾಜಲ್‌ವುಡ್ ಮೂರು ವಿಕೆಟ್ ಮತ್ತು ಆಡಮ್ ಜಂಪಾ ಮತ್ತು ಮಿಚೆಲ್ ಮಾರ್ಷ್ ತಲಾ ಒಂದು ವಿಕೆಟ್ ಪಡೆದರು.

ಆಸ್ಟ್ರೇಲಿಯಾದ ತಂಡ ಉತ್ತಮ ಆರಂಭವನ್ನು ಪಡೆದರು. ಕ್ಯಾರಿ 87 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ 67 ರನ್ ಗಳಿಸಿದರೆ, ಆಷ್ಟನ್ ಟರ್ನರ್ 45 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ 49 ರನ್ ಗಳಿಸಿದರು. ಅವರಲ್ಲದೆ, ಜೋಶ್ ಫಿಲಿಪ್, ಬೆನ್ ಮೆಕ್‌ಡರ್ಮೊಟ್ ಮತ್ತು ಮಿಚೆಲ್ ಮಾರ್ಷ್ ಕ್ರಮವಾಗಿ 39, 28 ಮತ್ತು 20 ರನ್ ಗಳಿಸಿದರು.

ಸಂಕ್ಷಿಪ್ತ ಸ್ಕೋರ್

ಆಸ್ಟ್ರೇಲಿಯಾ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 252

ವೆಸ್ಟ್ ಇಂಡೀಸ್ 26.2 ಓವರ್ ಗಳಲ್ಲಿ 123
ಯುಎನ್ಐ ವಿಎನ್ಎಲ್ 2003