Wednesday, Oct 20 2021 | Time 15:34 Hrs(IST)
Special Share

ಟಿಎಂಸಿ ಮುಖಂಡ ಮುಕುಲ್ ರಾಯ್ ಆಸ್ಪತ್ರೆಗೆ ದಾಖಲು

ಕೋಲ್ಕತಾ, ಸೆ. 02 (ಯುಎನ್ಐ) ತೃಣಮೂಲ ಕಾಂಗ್ರೆಸ್ ನಾಯಕ ಮುಕುಲ್ ರಾಯ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಧಿಕ ರಕ್ತದೊತ್ತಡದ ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ನಗರದ ಸ್ ಎಸ್ ಕೆ ಎಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುಕುಲ್ ರಾಯ್ ಅವರನ್ನು ಗುರುವಾರ ದಕ್ಷಿಣ ಕೋಲ್ಕತ್ತಾದ ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭದಲ್ಲಿ ಅವರ ಭದ್ರತಾ ಸಿಬ್ಬಂದಿ ಮತ್ತು ಇತರರು ಜೊತೆಯಲ್ಲಿದ್ದರು ಎನ್ನಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ನಾರದ, ಸಾರದ ಹಗರಣದ ನಂತರ 2017ರಲ್ಲಿ ಟಿಎಂಸಿ ತೊರೆದು ಬಿಜೆಪಿಗೆ ಸೇರ್ಪಡೆಯಾಗಿ ಶಾಸಕರಾಗಿ ಜೊತೆಗೆ ರಾಷ್ಟ್ರೀಯ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದರು. ಆದರೆ 4 ವರ್ಷಗಳ ಬಳಿಕ ಮತ್ತೆ ಕಳೆದ ಜೂನ್ ತಿಂಗಳಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಗೆ ಮರಳಿದರು.
ಯುಎನ್ಐ ಎಸ್ಎ 1433