Sunday, Sep 26 2021 | Time 18:01 Hrs(IST)
Sports Share

ಚೆನ್ನೈಯಿನ್ ತಂಡ ಸೇರಿದ ನಾರಾಯಣ್ ದಾಸ್

ನವದೆಹಲಿ, ಜೂ.29 (ಯುಎನ್ಐ)- ಎರಡು ಬಾರಿ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ವಿಜೇತ ಚೆನ್ನೈಯಿನ್ ಫುಟ್‌ಬಾಲ್ ಕ್ಲಬ್ (ಎಫ್‌ಸಿ) ಅನುಭವಿ ರಕ್ಷಣಾ ಆಟಗಾರ ನಾರಾಯಣ್ ದಾಸ್ ಅವರೊಂದಿಗೆ ಎರಡು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಕ್ಲಬ್ ಮಂಗಳವಾರ ಪ್ರಕಟಿಸಿದೆ.

ಈಸ್ಟ್ ಬಂಗಾಳದೊಂದಿಗೆ ಋತುವಿನ ಅವಧಿಯ ನಂತರ 27 ವರ್ಷದ ಚೆನ್ನೈಯಿನ್ ಎಫ್‌ಸಿಗೆ ಸೇರುತ್ತಿದ್ದಾರೆ. ಅವರು ಪ್ರಸ್ತುತ ಇಂಡಿಯನ್ ಸೂಪರ್ ಲೀಗ್‌ನಲ್ಲಿ 107 ಪಂದ್ಯಗಳನ್ನು ಆಡಿದ್ದು, ಇವರು ಐಎಸ್ಎಲ್ ನಲ್ಲಿ ಅತಿ ಹೆಚ್ಚು ಪಂದ್ಯ ಆಡಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆ ಹೊಂದಿದ್ದಾರೆ.

ಚೆನ್ನೈಯಿನ್ ಎಫ್‌ಸಿಗೆ ಸೇರಿದ ನಂತರ ನಾರಾಯಣ್ ಅನಿಸಿಕೆ ಹಂಚಿಕೊಂಡಿದ್ದು, “ಚೆನ್ನೈಯಿನ್ ಎಫ್‌ಸಿಯಂತಹ ಚಾಂಪಿಯನ್ ತಂಡದೊಂದಿಗೆ ಸಂಬಂಧ ಹೊಂದಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ತಂಡ ಗೆಲ್ಲಲು ಸಹಾಯ ಮಾಡುವುದು ಪ್ರತಿಯೊಬ್ಬ ಆಟಗಾರನ ಕನಸು ಮತ್ತು ನಾನು ಭಿನ್ನವಾಗಿಲ್ಲ. ನನ್ನ ಕ್ಷಮತೆಯನ್ನು ಸಾಬೀತುಪಡಿಸಲು ನಾನು ಎದುರು ನೋಡುತ್ತಿದ್ದೇನೆ. ಪ್ರತಿಯೊಂದು ಪಂದ್ಯವನ್ನು ಆಡುತ್ತಿದ್ದೇನೆ ಮತ್ತು ಮೂರನೇ ಐಎಸ್ಎಲ್ ಪ್ರಶಸ್ತಿಯ ಕನಸಿನಲ್ಲಿದೆ" ಎಂದಿದ್ದಾರೆ.

ಯುಎನ್ಐ ವಿಎನ್ಎಲ್ 2050