Wednesday, Dec 1 2021 | Time 21:37 Hrs(IST)
International Share

ಭುಗಿಲೆದ್ದ ಹಿಂಸಾಚಾರ – ಪಾಕಿಸ್ತಾನದಲ್ಲಿ ನಾಲ್ವರು ಸಾವು

ಭುಗಿಲೆದ್ದ ಹಿಂಸಾಚಾರ – ಪಾಕಿಸ್ತಾನದಲ್ಲಿ ನಾಲ್ವರು ಸಾವು

ಲಾಹೋರ್, ಅ 23 (ಯುಎನ್ಐ) ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಪಾಕಿಸ್ತಾನದಲ್ಲಿ ಸರಣಿ ಪ್ರತಿಭಟನೆಗಳು ಆರಂಭಗೊಂಡಿವೆ. ಇಸ್ಲಾಮಿಸ್ಟ್ ಹಾಗೂ ಭದ್ರತಾ ಪಡೆಗಳ ಮಧ್ಯೆ ನಡದೆ ಘರ್ಷಣೆಯಲ್ಲಿ ಇಬ್ಬರು ಪೊಲೀಸರು ಸಾವಿಗೀಡಾಗಿದ್ದಾರೆ. ಇನ್ನಿಬ್ಬರು ಇಸ್ಲಾಮಿಸ್ಟ್ ಹೋರಾಟಗಾರರು ಅಸುನೀಗಿದ್ದಾರೆ.ಫ್ರಾನ್ಸ್ ನಲ್ಲಿ ಇಸ್ಲಾಂ ಪ್ರವಾದಿ ಮೊಹಮ್ಮದ್ ಅವರ ವ್ಯಂಗ್ಯ ಚಿತ್ರ ರಚಿಸಿದ್ದಕ್ಕಾಗಿ ಕಳೆದ ವರ್ಷ ಪಾಕಿಸ್ತಾನದಲ್ಲಿ ಪ್ರತಿಭಟನೆಗಳು ನಡೆದಿದದ್ದವು. ಈ ವೇಳೆ ತೆಹ್ರಿಕ್-ಎ-ಲಬೈಕ್ ಪಾಕಿಸ್ತಾನ ಪಕ್ಷದ ಮುಖಂಡನಾದ ಸಾದ್ ರಿಜ್ವಿಯನ್ನು ಸಹ ಏಪ್ರಿಲ್ ನಲ್ಲಿ ಬಂಧಿಸಲಾಗಿತ್ತು. ಈ ಮಧ್ಯೆ ಸಾದ್ ರಿಜ್ವಿಯನ್ನು ಬಿಡುಗಡೆ ಮಾಡುವಂತೆ ಟಿ ಎಲ್ ಪಿ ಪಕ್ಷ ಲಾಂಗ್ ರಾಲಿಯನ್ನು ಆಯೋಜನೆ ಮಾಡಲಾಗಿತ್ತು.ಲಾಹೋರ್ ನಿಂದ ಇಸ್ಲಾಮಾಬಾದ್ ನತ್ತ ತೆರಳುತ್ತಿದ್ದ ಈ ರಾಲಿಯನ್ನು ಹತ್ತಿಕ್ಕಲು ಪೊಲೀಸರು ಯತ್ನಿಸಿದರು. ಈ ವೇಳೆ ಇಸ್ಲಾಮಿಕ್ ಹೋರಾಟಗಾರರು ಹಾಗೂ ಪೊಲೀಸರ ಮಧ್ಯೆ ಘರ್ಷಣೆ ಉಂಟಾಗಿ ಹಿಂಸಾಚಾರ ಭುಗಿಲೆದ್ದಿತು. ಇಬ್ಬರು ಪೊಲೀಸರು ಸೇರಿದಂತೆ ನಾಲ್ಕು ಮಂದಿ ಘಟನೆಯಲ್ಲಿ ಸಾವಿಗೀಡಾಗಿದ್ದಾರೆ.ತೆಹ್ರಿಕ್-ಎ-ಲಬೈಕ್ ಮುಖ್ಯಸ್ಥನನ್ನು ಬಿಡುಗಡೆಗೊಳಿಸುವುದು ಹಾಗೂ ಫ್ರಾನ್ಸ್ ರಾಯಭಾರಿಯನ್ನು ಪಾಕಿಸ್ತಾನದಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಟಿ ಎಲ್ ಪಿಯ ಸಾವಿರಾರು ಹೋರಾಟಗಾರರು ಪ್ರತಿಭಟನೆ ನಡೆಸುತ್ತಿದ್ದಾರೆ. ಇಸ್ಲಾಮಿಸ್ಟ್ ಗಳ ಪ್ರತಿಭಟನೆ ನಿಯಂತ್ರಣಕ್ಕೆ ತರಲು ಪೊಲೀಸರು 2500 ಟಿಯರ್ ಗ್ಯಾಸ್ ಶೆಲ್ ಗಳನ್ನು ಸಿಡಿಸಿದ್ದಾರೆ ಎಂದು ಗೊತ್ತಾಗಿದೆ. ಲಾಹೋರ್ ನಗರದಲ್ಲಿ ಸದ್ಯ ಪರಿಸ್ಥಿತಿ ಬಿಗುವಿನಿಂದ ಕೂಡಿದ್ದು, ಹಿಂಸಾಚಾರ ಇನ್ನೂ ಹೆಚ್ಚಾಗಬಹುದು ಎಂದು ತಿಳಿದುಬಂದಿದೆ.

More News
ಅಜರ್​​​ಬೈಜಾನ್ ಮಿಲಿಟರಿ ಹೆಲಿಕಾಪ್ಟರ್ ಪತನ: 14 ಮಂದಿ ದುರ್ಮರಣ

ಅಜರ್​​​ಬೈಜಾನ್ ಮಿಲಿಟರಿ ಹೆಲಿಕಾಪ್ಟರ್ ಪತನ: 14 ಮಂದಿ ದುರ್ಮರಣ

30 Nov 2021 | 9:53 PM

ಅಜರ್‌ಬೈಜಾನ್: ನ.

 Sharesee more..
“ಅಗತ್ಯಬಿದ್ದರೆ ಓಮಿಕ್ರಾನ್‌ಗಾಗಿ 2 ತಿಂಗಳಲ್ಲಿ ಪ್ರತ್ಯೇಕ ಲಸಿಕೆ ಸಿದ್ಧಪಡಿಸುತ್ತೇವೆ” – ಮಾಡರ್ನ ಕಂಪನಿ

“ಅಗತ್ಯಬಿದ್ದರೆ ಓಮಿಕ್ರಾನ್‌ಗಾಗಿ 2 ತಿಂಗಳಲ್ಲಿ ಪ್ರತ್ಯೇಕ ಲಸಿಕೆ ಸಿದ್ಧಪಡಿಸುತ್ತೇವೆ” – ಮಾಡರ್ನ ಕಂಪನಿ

30 Nov 2021 | 10:12 AM

ಹೆಚ್ಚುತ್ತಿರುವ ಆತಂಕದ ಮಧ್ಯೆ, ಲಸಿಕೆ ಕಂಪನಿ ಮೊಡರ್ನಾ, ಒಮಿಕ್ರಾನ್‌ ಹೂಸ ರೂಪಾಂತರಿ ವಿರುದ್ಧ ಹೋರಾಡಲು ಪ್ರತ್ಯೇಕ ಲಸಿಕೆ ಅಗತ್ಯವಿದ್ದರೆ, ಅದು ಎರಡು ಮೂರು ತಿಂಗಳಲ್ಲಿ ಸಿದ್ಧಪಡಿಸಲಿದೆ ಅಂತಾ ಕಂಪನಿ ತಿಳಿಸಿದೆ.

 Sharesee more..

ಹೊಸ ಕೋವಿಡ್ ಸೊಂಕು, ಭಯ ಬೇಡ: ಜೋ ಬೈಡೆನ್

30 Nov 2021 | 8:48 AM

 Sharesee more..