Sunday, Sep 26 2021 | Time 18:54 Hrs(IST)
Sports Share

ಕ್ವಾರಂಟೈನ್ ಮುಗಿಸಿದ ಯಂಗ್ ಇಂಡಿಯಾ

ಮುಂಬೈ, ಜೂ.25 (ಯುಎನ್ಐ)- ಶ್ರೀಲಂಕಾ ವಿರುದ್ಧದ ಕ್ರಿಕೆಟ್ ಸರಣಿಗೆ ಭಾರತದ ಯುವ ಪಡೆ ತಯಾರಿ ನಡೆಸುತ್ತಿದೆ. ಶಿಖರ್ ಧವನ್ ನೇತೃತ್ವದ ತಂಡ 14 ದಿನಗಳ ಹೋಟೆಲ್ ಕ್ವಾರಂಟೈನ್ ಮುಕ್ತಾಯಗೊಳಿಸಿದ್ದು, ಅಭ್ಯಾಸ ಆರಂಭಿಸುವ ತವಕದಲ್ಲಿದೆ.

ಮುಂಬೈನ ಹೋಟೆಲ್‌ವೊಂದರಲ್ಲಿ 14 ದಿನಗಳ ಕ್ವಾರಂಟೈನ್ ಮುಕ್ತಾಯಗೊಂಡಿದ್ದು, ಶ್ರೀಲಂಕಾ ವಿರುದ್ಧ ಮೂರು ಏಕದಿನ ಹಾಗೂ ಮೂರು ಟಿ-20 ಪಂದ್ಯಗಳ ಸರಣಿಗೆ ಯಂಗ್ ಇಂಡಿಯಾ ತಂಡ ಸಜ್ಜಾಗುತ್ತಿದೆ. ಜುಲೈ 13, 16 ಹಾಗೂ 18 ರಂದು ಏಕದಿನ ಪಂದ್ಯಗಳು ನಡೆಯಲಿದ್ದು, ಜುಲೈ 21, 23 ಹಾಗೂ 25 ರಂದು ಟಿ-2೦ ಪಂದ್ಯಗಳು ನಡೆಯಲಿವೆ.

ಶಿಖರ್ ಧವನ್ ತಂಡದ ನಾಯಕರಾಗಿ ಜವಾಬ್ದಾರಿ ಹೊತ್ತಿದ್ದು, ಉಪನಾಯಕನಾಗಿ ಭುವನೇಶ್ವರ್ ಕುಮಾರ್ ಇದ್ದಾರೆ. ಯುವ ಆಟಗಾರರು ಜಿಮ್ ನಲ್ಲಿ ತಾಲೀಮು ನಡೆಸಿದ್ದು, ಮುಂದಿನ ಸವಾಲಿಗೆ ಸಜ್ಜಾಗುತ್ತಿದ್ದಾರೆ.

ಯುಎನ್ಐ ವಿಎನ್ಎಲ್ 1954