Wednesday, Sep 29 2021 | Time 03:53 Hrs(IST)
business economy Share

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 212 ಅಂಕ ಏರಿಕೆ

ಮುಂಬೈ , ಜೂನ್ (ಯುಎನ್ಐ ) ಮುಂಬೈ ಷೇರುಪೇಟೆಸಂವೇದಿ ಸೂಚ್ಯಂಕ ಬುಧವಾರ ಆರಂಭಿಕ ವಹಿವಾಟಿನಲ್ಲಿ 212 ಅಂಕ ಏರಿಕೆಯಾಗಿದ್ದರೆ, ಮತ್ತೊಂದೆಡೆ ರಾಷ್ಟ್ರೀಯ ಷೇರುಪೇಟೆ ನಿಫ್ಟಿ 61 ಅಂಕ ಹೆಚ್ಚಳಗೊಂಡಿದೆ.
ದಿನದ ವಹಿವಾಟು ಆರಂಭಗೊಂಡಾಗ 1553 ಷೇರುಗಳು ಏರಿಕೆಯಾದರೆ 554 ಷೇರುಗಳು ಕುಸಿದವು ಮತ್ತು 64 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ಮಾರುತಿ ಸುಜುಕಿಯ ಷೇರು 119 ರೂ.ಗಳ ಏರಿಕೆ ಕಂಡು 7,606.95 ರೂ., ಸಿಪ್ಲಾ ಷೇರು 5 ರೂಪಾಯಿ ಏರಿಕೆಗೊಂಡು 984.85 ರೂ., ಇನ್ಫೋಸಿಸ್ ಷೇರುಗಳು 16 ರೂ.ಗಳ ಏರಿಕೆ ಕಂಡು 1,579.00 ರೂ., ಹಿಂಡಾಲ್ಕೊ ಷೇರು ಸುಮಾರು 4 ರೂ.ಗಳ ಲಾಭದೊಂದಿಗೆ 378.20 ರೂಗಳಲ್ಲಿ , ಟೈಟಾನ್ ಕಂಪನಿಯ ಷೇರು 17 ರೂ. ಹೆಚ್ಚಾಗಿ 1,748.10 ರೂ.ಗೆ ಏರಿಕೆಯಾಗಿದೆ.

ಯುಎನ್ಐ ಕೆಎಸ್ಆರ್ 1128